ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಚೀನಾದ ಬೈಸೆ 2025ರ ʼಗುವಾಂಗ್ಸಿ ಸಂಸ್ಕೃತಿ-ಪ್ರವಾಸೋದ್ಯಮ ಅಭಿವೃದ್ಧಿ ಸಮ್ಮೇಳನʼದ ಆತಿಥ್ಯ ವಹಿಸಲು ಸಜ್ಜಾಗಿದೆ. ಕಲ್ಲಿನ ಕಣಿವೆಗಳು, ದಟ್ಟ ಕಾಡು, ಸುಂದರ ಜಲಪಾತ ಮತ್ತು ಪರ್ವತಗಳ ಮಡಿಲಿನಲ್ಲಿ ನೆಲೆಸಿರುವ ಬೈಸೆಯಲ್ಲಿ ಈ ಶೃಂಗಸಭೆ ನಡೆಯಿತ್ತಿರುವುದು ವಿಶೇಷ.

Baise tourism


ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಂತಿರುವ ಈ ಬೈಸೆಯಲ್ಲಿ ಹಲವು ಜನಾಂಗಗಳ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಇನ್ನೂ ಜೀವಂತವಾಗಿದೆ. ಝ್ವಾಂಗ್, ಯಾಓ, ಮಿಯಾವ್, ಯಿ ಮೊದಲಾದ ಸಮುದಾಯಗಳ ನೃತ್ಯ, ಕಲೆ ಮತ್ತು ಹಬ್ಬಗಳು ಪ್ರವಾಸಿಗರಿಗೆ ಇಲ್ಲಿಯ ಸಂಸ್ಕೃತಿ–ಪರಂಪರೆಯ ಪರಿಚಯ ನೀಡುತ್ತವೆ. ಜಿಂಗ್ಸಿ ಪಟ್ಟಣದ ಪ್ರಸಿದ್ಧ ಬಣ್ಣದ ಎಂಬ್ರಾಯ್ಡರಿ ಬಾಲ್‌ಗಳು ಸ್ಥಳೀಯ ಜನರ ಪರಂಪರೆ ಮತ್ತು ಸಂಸ್ಕೃತಿಯ ಸಂಕೇತಗಳಾಗಿ ಉಳಿದಿವೆ.

2025ರ ಸಮ್ಮೇಳನದ ಮೂಲಕ, ಗುವಾಂಗ್ಸಿಯ ಬೈಸೆ ಪ್ರಾಂತ್ಯವು ತನ್ನ ಪ್ರಕೃತಿ, ಪರಂಪರೆ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಲು ಉತ್ಸುಕವಾಗಿದೆ.