Friday, October 10, 2025
Friday, October 10, 2025

26ನೇ ಯುಎನ್ ಪ್ರವಾಸೋದ್ಯಮ ಮಹಾಸಭೆಯ ಆತಿಥ್ಯ ವಹಿಸಲಿರುವ ಸೌದಿ ಅರೇಬಿಯಾ

26ನೇ ಯುಎನ್ ಪ್ರವಾಸೋದ್ಯಮ ಮಹಾಸಭೆ(UN Tourism General Assembly)ಯ ಆತಿಥ್ಯವನ್ನು ಈ ಬಾರಿ ಸೌದಿ ಅರೇಬಿಯಾ ವಹಿಸಲಿದೆ. ಇದೇ ನವೆಂಬರ್‌ನಲ್ಲಿ ನಡೆಯಲಿರುವ ಈ ಮಹಾಸಭೆ ಮುಂದಿನ ಐವತ್ತು ವರ್ಷಗಳ ಜಾಗತಿಕ ಪ್ರವಾಸೋದ್ಯಮದ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಲಿದೆ.

ಸೌದಿ ಅರೇಬಿಯಾ ಈ ವರ್ಷ ನವೆಂಬರ್ 7 ರಿಂದ 11ರ ವರೆಗೆ ರಿಯಾದ್‌ನಲ್ಲಿ ನಡೆಯಲಿರುವ 26ನೇ ಯುಎನ್ ಪ್ರವಾಸೋದ್ಯಮ ಮಹಾಸಭೆ(UN Tourism General Assembly)ಯ ಆತಿಥ್ಯವನ್ನು ವಹಿಸಲಿದೆ.

‘AI-Powered Tourism: Redefining the Future’ ಎಂಬ ಥೀಮ್‌ನಡಿ ನಡೆಯುತ್ತಿರುವ ಈ ಸಭೆ ಜಾಗತಿಕ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಈ ಸಭೆಯಲ್ಲಿ 160ಕ್ಕೂ ಹೆಚ್ಚು ರಾಷ್ಟ್ರಗಳು ಹಾಗೂ ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದ ನಾಯಕರು ಭಾಗವಹಿಸಿ, ಪ್ರಸ್ತುತ ತಂತ್ರಜ್ಞಾನ ಆಧಾರಿತ ಪ್ರವಾಸೋದ್ಯಮದ ರೂಪುರೇಷೆಯನ್ನು ಚರ್ಚಿಸಲಿದ್ದಾರೆ.

Riyadh

ಗಲ್ಫ್ ಸಹಕಾರ ಮಂಡಳಿಯ (GCC) ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ಈ ಮಹಾಸಭೆಯ ಆತಿಥ್ಯ ವಹಿಸುತ್ತಿರುವ ಸೌದಿ ಅರೇಬಿಯಾ, ಜಾಗತಿಕ ಪ್ರವಾಸೋದ್ಯಮ ರಾಜತಾಂತ್ರಿಕತೆಯಲ್ಲಿ, ನವೀನತೆಯಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ತನ್ನ ನಾಯಕತ್ವವನ್ನು ಮತ್ತೊಮ್ಮೆ ಧೃಢಪಡಿಸಲಿದೆ.

ಈ ಮಹಾಸಭೆಯಲ್ಲಿ ಪ್ರವಾಸೋದ್ಯಮ ಆಧಾರಿತ ಪ್ರಮುಖ ಚರ್ಚೆಗಳು, ಕೃತಕ ಬುದ್ಧಿಮತ್ತೆ ಆಧಾರಿತ ಥೀಮ್ಯಾಟಿಕ್ ಸಂವಾದಗಳು, ವಿಭಿನ್ನ ಸಮಿತಿ ಸಭೆಗಳು, ಹಾಗೂ ಹೊಸ ಪ್ರಧಾನ ಕಾರ್ಯದರ್ಶಿಯ ಆಯ್ಕೆ ಸೇರಿದಂತೆ ಹಲವು ಪ್ರಮುಖ ಅಧಿವೇಶನಗಳು ನಡೆಯಲಿವೆ. ಅದರ ಜತೆಗೆ TOURISE Summit ನ ಉದ್ಘಾಟನೆಯೂ ಇದೇ ಸಮಯದಲ್ಲಿ ನಡೆಯಲಿದ್ದು, ಇದು ಪ್ರವಾಸೋದ್ಯಮದಲ್ಲಿ ನೂತನ ತಂತ್ರಜ್ಞಾನದ ಅಳವಡಿಕೆ ಮತ್ತು ಹೂಡಿಕೆಯನ್ನು ಆಕರ್ಷಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡಲಿದೆ.

ಈ ನವೆಂಬರ್‌ನಲ್ಲಿ ನಡೆಯಲಿರುವ ಈ ಮಹಾಸಭೆ ಮುಂದಿನ ಐವತ್ತು ವರ್ಷಗಳ ಜಾಗತಿಕ ಪ್ರವಾಸೋದ್ಯಮದ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಲಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...