ಗಲ್ಫ್ ರಾಷ್ಟ್ರಗಳಲ್ಲಿ ಅಜರ್‌ಬೈಜಾನ್ ಪ್ರವಾಸೋದ್ಯಮ ಮಂಡಳಿಯಿಂದ ರೋಡ್ ಶೋ
ಈ ರೋಡ್‌ಶೋದಲ್ಲಿ ಗಲ್ಫ್‌ನಿಂದ ಬಂದ ಪ್ರವಾಸಿ ಸಂಘಟನೆಗಳು, ಟ್ರಾವೆಲ್ ಏಜೆಂಟ್‌ಗಳು, ಟೂರ್ ಆಪರೇಟರ್‌ಗಳು ಮತ್ತು ಹೊಟೇಲ್ ಪ್ರತಿನಿಧಿಗಳು ಭಾಗವಹಿಸಿ, ಅಜರ್‌ಬೈಜಾನ್‌ನ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಪರಂಪರೆ, ಸಾಹಸ ಪ್ರವಾಸೋದ್ಯಮ ಮತ್ತು ಆಹಾರ ಸಂಸ್ಕೃತಿಯನ್ನು ತಿಳಿದುಕೊಂಡರು.
ಅಜರ್‌ಬೈಜಾನ್ ಪ್ರವಾಸೋದ್ಯಮ ಮಂಡಳಿ ಗಲ್ಫ್ ರಾಷ್ಟ್ರಗಳ ಪ್ರವಾಸ ಹಾಗೂ ಆತಿಥ್ಯ ವಲಯದೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಗಲ್ಫ್ ರಾಷ್ಟ್ರಗಳ ಪ್ರವಾಸಿ ತಾಣಗಳಲ್ಲಿ ವಿಶೇಷ ರೋಡ್ ಶೋ ಆಯೋಜಿಸಿತ್ತು. ಅಜರ್‌ಬೈಜಾನ್‌ನ ಆಕರ್ಷಕ ಪ್ರವಾಸಿ ತಾಣಗಳನ್ನು ಮಧ್ಯಪ್ರಾಚ್ಯದ ಜನರಿಗೆ ಪರಿಚಯಿಸುವುದು ಮತ್ತು ಅವರನ್ನು ತನ್ನ ರಾಷ್ಟ್ರದತ್ತ ಸೆಳೆಯಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ರೋಡ್‌ಶೋದಲ್ಲಿ ಗಲ್ಫ್‌ನಿಂದ ಬಂದ ಪ್ರವಾಸಿ ಸಂಘಟನೆಗಳು, ಟ್ರಾವೆಲ್ ಏಜೆಂಟ್‌ಗಳು, ಟೂರ್ ಆಪರೇಟರ್‌ಗಳು ಮತ್ತು ಹೊಟೇಲ್ ಪ್ರತಿನಿಧಿಗಳು ಭಾಗವಹಿಸಿ, ಅಜರ್‌ಬೈಜಾನ್‌ನ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಪರಂಪರೆ, ಸಾಹಸ ಪ್ರವಾಸೋದ್ಯಮ ಮತ್ತು ಆಹಾರ ಸಂಸ್ಕೃತಿಯನ್ನು ತಿಳಿದುಕೊಂಡರು.
ಅಜರ್‌ಬೈಜಾನ್ ಪ್ರವಾಸೋದ್ಯಮ ಮಂಡಳಿಯ ಅಧಿಕಾರಿಗಳು ವೀಸಾ ಪ್ರಕ್ರಿಯೆ ಸರಳೀಕರಣ, ಉತ್ತಮ ವಿಮಾನ ಸಂಪರ್ಕ ಕಲ್ಪಿಸುವುದು ಮತ್ತು ವರ್ಷವಿಡೀ ಪ್ರವಾಸ ಕೈಗೊಳ್ಳಬಹುದಾದ ತಾಣಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಗಲ್ಫ್ ದೇಶಗಳಿಂದ ಪ್ರವಾಸಿಗರ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳ ಕಂಡಿದ್ದು, ಈ ರೀತಿಯ ರೋಡ್ ಶೋಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಸಹಕಾರಿ ಎಂದು ತಿಳಿಸಿದರು.