Friday, May 22, 2026
Friday, May 22, 2026

ಅಡಿಗಾಸ್‌ ಯಾತ್ರಾದಿಂದ ಬಂಪರ್‌ ಆಫರ್!‌

ತೈಲದ ದರ 3-4 ಪರ್ಸೆಂಟ್‌ ಹೆಚ್ಚಿರುವ ಕಾರಣ ಇದರ ಪ್ರಭಾವದಿಂದ ಬೇರೆ ಎಲ್ಲದರ ದರ ಏರಿಕೆ ಆಗುತ್ತಿದೆ. ಆದರೂ, ಮೇ 30ರ ಒಳಗೆ ದೇಶ ಮತ್ತು ವಿದೇಶ ಪ್ರವಾಸಗಳ ಯಾವುದೇ ಪ್ಯಾಕೇಜ್‌ ಬುಕ್‌ ಮಾಡಿಕೊಂಡರೂ ನಮ್ಮ ಸಂಸ್ಥೆ ಈಗಿನ ದರದಲ್ಲೇ ಪ್ಯಾಕೇಜ್‌ ನೀಡಲಿದ್ದೇವೆ. ಜೂನ್ 1ರಿಂದ ಈ ದರ ಬದಲಾಗಲಿದೆ. ಹೀಗಾಗಿ ಮೇ 30ರ ಒಳಗೆ ಬುಕ್‌ ಮಾಡಿದರೆ ಪ್ರಸಕ್ತ ದರವನ್ನೇ ಪರಿಗಣಿಸಲಿದ್ದೇವೆ ಎಂದು ಅಡಿಗಾಸ್‌ ಯಾತ್ರಾದ ಸಂಸ್ಥಾಪಕರು ನಾಗರಾಜ ಅಡಿಗ ತಿಳಿಸಿದ್ದಾರೆ.

ಪೆಟ್ರೋಲ್-ಡೀಸೆಲ್-‌ಅಡುಗೆ ಅನಿಲ ಸೇರಿದಂತೆ ಇಂಧನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರವಾಸ ಪ್ಯಾಕೇಜ್‌ಗಳ ದರ ಹೆಚ್ಚಳ ಅನಿವಾರ್ಯವಾಗಿದೆ. ಹೀಗಿದ್ದರೂ, ಪ್ರವಾಸಿಗರ ಅನುಕೂಲಕ್ಕಾಗಿ ದರ ಏರಿಕೆಗೆ ಮುನ್ನ ವಿಶೇಷ ಆಫರ್‌ ಅನ್ನು ನೀಡುತ್ತಿದ್ದೇವೆ ಎಂದು ಅಡಿಗಾಸ್‌ ಯಾತ್ರಾದ ಸ್ಥಾಪಕರಾದ ಕೆ. ನಾಗರಾಜ ಅಡಿಗ ಅವರು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಗಳಲ್ಲಿ ಎಲ್ಲೆಡೆ ಬೆಲೆ ಏರಿಕೆ ಇದೆ. ಎಲ್‌ಪಿಜಿ, ಸಿಎನ್‌ಜಿ, ಪೆಟ್ರೋಲ್‌ ಮತ್ತು ಡೀಸೆಲ್‌ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಗುಣಮಟ್ಟ ಕಡಿಮೆ ಮಾಡಬಾರದು ಎಂದರೆ ದರ ಏರಿಕೆ ಮಾಡಲೇ ಬೇಕಾಗುತ್ತದೆ. ಅನಿವಾರ್ಯ ಸ್ಥಿತಿಗಳಲ್ಲಿ ಬೆಲೆ ಏರಿಕೆ ಮಾಡಲೇಬೇಕು. ಹಿಂದಿನ ಬೆಲೆ ಇಟ್ಟು ಗುಣಮಟ್ಟ ಕಡಿಮೆ ಮಾಡಲು ನಾವು ಸಿದ್ಧರಿಲ್ಲ. ಗುಣಮಟ್ಟವೇ ನಮ್ಮ ಗುರುತು ಎಂದು ನಾಗರಾಜ ಅಡಿಗ ಹೇಳಿದ್ದಾರೆ.

ಇದನ್ನೂ ಓದಿ: ಅಡಿಗಾಸ್‌ ಯಾತ್ರಾದಿಂದ ಆಸ್ಟ್ರೇಲಿಯಾ ಪ್ರವಾಸ

ತೈಲದ ದರ 3-4 ಪರ್ಸೆಂಟ್‌ ಹೆಚ್ಚಿರುವ ಕಾರಣ ಇದರ ಪ್ರಭಾವದಿಂದ ಬೇರೆ ಎಲ್ಲದರ ದರ ಏರಿಕೆ ಆಗುತ್ತಿದೆ. ಆದರೂ, ಮೇ 30ರ ಒಳಗೆ ದೇಶ ಮತ್ತು ವಿದೇಶ ಪ್ರವಾಸಗಳ ಯಾವುದೇ ಪ್ಯಾಕೇಜ್‌ ಬುಕ್‌ ಮಾಡಿಕೊಂಡರೂ ನಮ್ಮ ಸಂಸ್ಥೆ ಈಗಿನ ದರದಲ್ಲೇ ಪ್ಯಾಕೇಜ್‌ ನೀಡಲಿದ್ದೇವೆ. ಜೂನ್ 1ರಿಂದ ಈ ದರ ಬದಲಾಗಲಿದೆ. ಹೀಗಾಗಿ ಮೇ 30ರ ಒಳಗೆ ಬುಕ್‌ ಮಾಡಿದರೆ ಪ್ರಸಕ್ತ ದರವನ್ನೇ ಪರಿಗಣಿಸಲಿದ್ದೇವೆ. ಈಗ ಬುಕ್‌ ಮಾಡಿ ಮುಂದೆ ಈ ವರ್ಷ ಯಾವಾಗ ಬೇಕಾದರೂ ಪ್ರವಾಸ ಮಾಡಬಹುದು. ಜೂನ್ 1ರ ಬಳಿಕ ದರ ಅನಿವಾರ್ಯವಾಗಿ ಏರಿಕೆ ಆಗಲಿದೆ ಎಂದು ವಿಶೇಷ ಆಫರ್‌ ನೀಡಿದ್ದಾರೆ.

Untitled design (34)

ಈಗ ವಿದೇಶ ಪ್ರವಾಸ ಮಾಡಬಹುದಾ? ಅನ್ನೋದು ಹಲವರ ಪ್ರಶ್ನೆ. ಅಂದಹಾಗೆ ಕಳೆದ ನಾಲ್ಕು ತಿಂಗಳಿಂದಲೇ ವಿದೇಶ ಪ್ರವಾಸ ಮಂಕಾಗಿದೆ. ಪ್ರಧಾನ ಮಂತ್ರಿಗಳು ನೀಡುವ ಕರೆಗೆ ನಾವೆಲ್ಲಾ ಗೌರವಿಸಬೇಕು. ಪ್ರವಾಸೋದ್ಯಮ ಮುಖ್ಯ ಆದರೆ ಅದಕ್ಕಿಂತಲೂ ದೇಶ ಮುಖ್ಯ. ನಮ್ಮ ದೇಶದ ಭದ್ರತೆ ಮತ್ತು ಆರ್ಥಿಕತೆ ಬಹಳ ಪ್ರಮುಖ ಸಂಗತಿ. ಆ ನಿಟ್ಟಿನಲ್ಲಿ ಮೋದಿ ಅವರಿಗೆ ಬೆಂಬಲ ನೀಡಬೇಕು. ನಮ್ಮ ಪ್ರಧಾನಿಗಳು ಈ ಮೊದಲೇ ‘ವೋಕಲ್‌ ಫಾರ್‌ ಲೋಕಲ್‌’ ಅನ್ನೋ ಕರೆ ನೀಡಿದ್ದಾರೆ. ದೇಶದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಎಂದು ಪ್ರಚಾರ ಮಾಡಿದ್ದಾರೆ. ‘ಅಪ್ನಾ ದೇಶ್‌ ದೇಖೋ’ ಎಂದೆಲ್ಲಾ ಪ್ರವಾಸಿಗರನ್ನು ಪ್ರೇರೇಪಿಸಿದ್ದಾರೆ. ಹಿಂದೆಲ್ಲಾ ಪರೋಕ್ಷವಾಗಿ ವಿದೇಶ ಪ್ರವಾಸ ಬೇಡ ಅಂದಿದ್ದರು, ಈಗ ನೇರವಾಗಿ ತಿಳಿಸಿದ್ದಾರೆ ಅಷ್ಟೆ ಎಂದು ನಾಗರಾಜ ಅಡಿಗ ಹೇಳಿದ್ದಾರೆ.

ನಮ್ಮ ದೇಶದಲ್ಲಿ ವರ್ಷದ 365 ದಿನಗಳೂ ಪ್ರವಾಸ ಮಾಡಲು ಯೋಗ್ಯವಾದಂಥ ಸ್ಥಳಗಳಿವೆ. ಅಮರನಾಥ ಯಾತ್ರವನ್ನು ಜೂನ್‌-ಜುಲೈನಲ್ಲಿ ಮಾಡಬೇಕು. ಕೇರಳದಲ್ಲಿ ಬೋಟ್‌ ಹೌಸ್ ಅನುಭವ ಪಡೆಯಬಹುದು. ಮಳೆಗಾಲದಲ್ಲಿ ಜೋಗ ನೋಡಬಹುದು. ಮಳೆ ನೋಡಲೆಂದೇ ಗೋವಾಗೆ ಹೋಗುವವರು ಇದ್ದಾರೆ. ಆಯಾ ಸೀಸನ್‌ಗೆ ಎಲ್ಲೆಲ್ಲಿ ಪ್ರವಾಸ ಮಾಡಬೇಕು ಎಂಬ ಬಗ್ಗೆ ತಿಳುವಳಿಕೆಯಿರಬೇಕು ಎಂದಿದ್ದಾರೆ.

ಪ್ರವಾಸಗಳ ವಿವರ ಮತ್ತು ಹೆಚ್ಚಿನ ಮಾಹಿತಿಗಳಿಗೆ www.adigasyatranews.com ಅಥವಾ 9449478944, 7022259008 / 08026616678 ಗೆ ಕರೆಮಾಡಿ

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ