ಮಸ್ಸೂರಿ ವಿಸಿಟ್ ಗೆ ಚೆಕ್-ಇನ್ ಸಮಯ ದಾಖಲು ಕಡ್ಡಾಯ
2022 ಮತ್ತು 2024 ರ ನಡುವೆ ಮಸ್ಸೂರಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದ್ದು, ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಹೊಸ ಯೋಜನೆ ರೂಪಿಸಿದೆ.
ಮಸ್ಸೂರಿಗೆ ಭೇಟಿ ನೀಡಲು ಯೋಚಿಸುತ್ತಿರುವ ಪ್ರವಾಸಿಗರು ಈಗ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿಪಡಿಸಿರುವ ಚೆಕ್-ಇನ್ ಸಮಯವನ್ನು ದಾಖಲಿಸುವ ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ.
ಹೋಟೆಲ್‌ಗಳು, ಅತಿಥಿ ಗೃಹಗಳು, ಹೋಂ ಸ್ಟೇಗಳು ಮತ್ತು ಇತರ ವಸತಿಗಳು ಮೊದಲು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ಚೆಕ್-ಇನ್ ಸಮಯದಲ್ಲಿ ಬರುವ ಎಲ್ಲಾ ಅತಿಥಿಗಳ ವಿವರಗಳನ್ನು ನಮೂದಿಸಬೇಕು ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಬ್ರಿಜೇಂದ್ರ ಪಾಂಡೆ ನಿಯಮ ಜಾರಿಗೊಳಿದ್ದಾರೆ.

ʻ2022 ಮತ್ತು 2024 ರ ನಡುವೆ ಮಸ್ಸೂರಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದ್ದು, ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಸಾಹಸದ ಕೆಲಸವಾಗಿತ್ತು. ಆದ್ದರಿಂದ ಈ ಉಪಕ್ರಮವು ಪ್ರವಾಸಿಗರ ಸಂಖ್ಯೆ, ಡೇಟಾವನ್ನು ತಿಳಿಯಲು ಸಹಾಯ ಮಾಡುತ್ತದೆʼ ಎಂದು ಪಾಂಡೆ ಹೇಳಿದ್ದಾರೆ.