ಯಮುನಾ ನದಿಯಲ್ಲಿ ಹೈಬ್ರಿಡ್ ದೋಣಿಗಳ ಸೇವೆ
ಈ ಯೋಜನೆಯಡಿಯಲ್ಲಿ ಎರಡು ಹೊಸ ಹೈಬ್ರಿಡ್ ದೋಣಿಗಳನ್ನು ಸೇವೆಗೆ ತರಲಾಗುತ್ತಿದ್ದು, ಪ್ರತಿ ದೋಣಿಯಲ್ಲಿ 20–30 ಪ್ರಯಾಣಿಕರು ಕೂರಬಹುದು. ಬಯೋ–ಶೌಚಾಲಯ, ಜೀವ ರಕ್ಷಕ ಉಪಕರಣಗಳು ಹಾಗೂ ಪಿಎ ಅನೌನ್ಸ್‌ಮೆಂಟ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಈ ದೋಣಿಗಳು ಹೊಂದಿರುವುದು ವಿಶೇಷ.
ಯಮುನಾ ನದಿಯಲ್ಲಿ ಹಸಿರು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಮಿತ್ತ ದೆಹಲಿ ಸರಕಾರ ಮತ್ತು ಇನ್ಲ್ಯಾಂಡ್ ವಾಟರ್ವೇಸ್ ಅಥಾರಿಟಿ ಆಫ್ ಇಂಡಿಯಾ (IWAI) ಜಂಟಿಯಾಗಿ ಹೈಬ್ರಿಡ್ ದೋಣಿಗಳ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿವೆ. ಸೋನಿಯಾ ವಿಹಾರ್ ಮತ್ತು ಜಗ್ಗತ್‌ಪುರಾ ನಡುವಿನ ಸುಮಾರು ನಾಲ್ಕು ಕಿಲೋಮೀಟರ್ ಜಲಮಾರ್ಗದಲ್ಲಿ ಇಲೆಕ್ಟ್ರಿಕ್–ಸೌರ ಚಾಲಿತ ದೋಣಿ ಸೇವೆಯನ್ನು ಆರಂಭಿಸಲಾಗುತ್ತಿದೆ.
ಈ ಯೋಜನೆಯಡಿಯಲ್ಲಿ ಎರಡು ಹೊಸ ಹೈಬ್ರಿಡ್ ದೋಣಿಗಳನ್ನು ಸೇವೆಗೆ ತರಲಾಗುತ್ತಿದ್ದು, ಪ್ರತಿ ದೋಣಿಯಲ್ಲಿ 20–30 ಪ್ರಯಾಣಿಕರು ಕೂರಬಹುದು. ಬಯೋ–ಶೌಚಾಲಯ, ಜೀವ ರಕ್ಷಕ ಉಪಕರಣಗಳು ಹಾಗೂ ಪಿಎ ಅನೌನ್ಸ್‌ಮೆಂಟ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಈ ದೋಣಿಗಳು ಹೊಂದಿರುವುದು ವಿಶೇಷ.

ಯೋಜನೆಯ ಭಾಗವಾಗಿ ನದಿ ತೀರದಲ್ಲಿ ಎರಡು HDPE ಜೆಟ್ಟಿಗಳನ್ನೂ ನಿರ್ಮಾಣ ಮಾಡಲಾಗಿದೆ. ದೋಣಿ ಹತ್ತಿಳಿಯುವ ವ್ಯವಸ್ಥೆ ಸುಲಭವಾಗುವುದರ ಜತೆಗೆ ನದಿಯ ಪರಿಸರಕ್ಕೆ ಹಾನಿಯಿಲ್ಲದ ರೀತಿಯಲ್ಲಿ ಸಂಚಾರ ನಡೆಯಲಿದೆ. ನದಿಯ ಪುನರುಜ್ಜೀವನ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಇದು ಮಹತ್ವದ ಹೆಜ್ಜೆಯಾಗಲಿದೆ ದೆಹಲಿ ಪ್ರವಾಸೋದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.