ದೆಹಲಿ ಸರ್ಕಾರವು ಯಮುನಾ ನದಿತೀರವನ್ನು ಆಧುನಿಕ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದೆ. ಸೋನಿಯಾ ವಿಹಾರ್ ಪ್ರದೇಶದಲ್ಲಿ ರೂಪುಗೊಳ್ಳುತ್ತಿರುವ ಈ ಯೋಜನೆ, ಭೇಟಿ ನೀಡುವ ಪ್ರವಾಸಿಗರಿಗೆ ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುವುದು ಹಾಗೂ ಮನರಂಜನೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಈ ಸೋನಿಯಾ ವಿಹಾರ್‌ ಪ್ರದೇಶದಲ್ಲಿ ಟಿಕೆಟ್ ಕೌಂಟರ್, ವೇಟಿಂಗ್ ಹಾಲ್‌, ರೂಫ್ಟಾಪ್ ರೆಸ್ಟೋರೆಂಟ್, ಆಹಾರ ವಲಯ, ಮಕ್ಕಳ ಆಟದ ಜಾಗ, ಆಂಪಿಥಿಯೇಟರ್, ಯಮುನಾ ಆರತಿ ವಲಯ ಮತ್ತು ವಾಟರ್‌ ಫೌಂಟೇನ್‌ ನಿರ್ಮಿಸಲಾಗುತ್ತಿದೆ. ಇವು ಯಮುನಾ ನದಿತೀರಕ್ಕೆ ಹೊಸ ರೂಪವನ್ನು ನೀಡಿ ಪ್ರವಾಸಿಗರನ್ನು ಆಕರ್ಷಿಸುವ ನಂಬಿಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

roof top restaurants on yamuna river


ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರ ಅಧಿಕಾರಿಗಳೊಂದಿಗೆ ಸ್ಥಳದ ಪರಿಶೀಲನೆ ನಡೆಸಿದರು. ಪರಿಸರ ಸಂರಕ್ಷಣೆಗಾಗಿಯೂ ಸರಕಾರ ವಿಶೇಷ ಒತ್ತು ನೀಡಿದ್ದು, ಎಲ್ಲಾ ಕಾಮಗಾರಿಗಳು ರಾಷ್ಟ್ರೀಯ ಹಸಿರು ಪ್ರಾಧಿಕಾರ (NGT) ಮಾರ್ಗಸೂಚಿಗಳ ಪ್ರಕಾರವೇ ನಡೆಯಬೇಕು ಎಂದು ಮಿಶ್ರ ಸ್ಪಷ್ಟ ಸೂಚನೆ ನೀಡಿದ್ದಾರೆ. ನದಿ ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಕಟ್ಟುನಿಟ್ಟಿನ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ.