ನೀತಿ ಆಯೋಗದಿಂದ ದಿವ್ಯ ಭಾರತ್ ಯೋಜನೆ
ದಿವ್ಯ ಭಾರತ್ ಅಭಿಯಾನವು ಕೇವಲ ಪ್ರವಾಸಿ ತಾಣಗಳ ಪ್ರಚಾರಕ್ಕೆ ಸೀಮಿತವಾಗದೆ, ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ನೈಸರ್ಗಿಕ ವಿವಿಧತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಲಿದೆ.
ಭಾರತವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನೀತಿ ಆಯೋಗವು ‘ದಿವ್ಯ ಭಾರತ್: ಭಾರತದ ಆತ್ಮಕ್ಕೆ ಒಂದು ಕಿಟಕಿ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಭಾರತವನ್ನು ವರ್ಷದ 365 ದಿನಗಳೂ ಪ್ರವಾಸಿಗರನ್ನು ಆಕರ್ಷಿಸುವ ತಾಣವನ್ನಾಗಿ ರೂಪಿಸುವ ಮತ್ತು ದೇಶದ ಆರ್ಥಿಕತೆಗೆ ಬಲ ನೀಡುವ ಗುರಿಯನ್ನು ಹೊಂದಿದೆ.
ದಿವ್ಯ ಭಾರತ್ ಅಭಿಯಾನವು ಕೇವಲ ಪ್ರವಾಸಿ ತಾಣಗಳ ಪ್ರಚಾರಕ್ಕೆ ಸೀಮಿತವಾಗದೆ, ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ನೈಸರ್ಗಿಕ ವಿವಿಧತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಲಿದೆ. ಭಾರತವು ವರ್ಷದ ಎಲ್ಲಾ ಋತುಗಳಲ್ಲೂ ವಿಭಿನ್ನ ಅನುಭವಗಳನ್ನು ನೀಡಬಲ್ಲ ದೇಶ ಎಂಬುದನ್ನು ಜಗತ್ತಿಗೆ ಸಾರಲು ನೀತಿ ಆಯೋಗ ಈ ಕಾರ್ಯತಂತ್ರ ರೂಪಿಸಿದೆ.
ಇದನ್ನೂ ಓದಿ: ಪ್ರಯಾಸವಲ್ಲದ ಪ್ರವಾಸ: ಪುಸ್ತಕದಲ್ಲೇ ಕೆನಡಾ ಪ್ರವಾಸ
ಪ್ರವಾಸೋದ್ಯಮ ಕ್ಷೇತ್ರವು ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ದೊಡ್ಡ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ನೀತಿ ಆಯೋಗ ಗುರುತಿಸಿದೆ. ದಿವ್ಯ ಭಾರತ್ ಯೋಜನೆಯ ಮೂಲಕ ಪ್ರವಾಸೋದ್ಯಮವನ್ನು ವೃದ್ಧಿಸುವ ಮೂಲಕ ಸ್ಥಳೀಯವಾಗಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ. ಹೊಟೇಲ್ ಉದ್ಯಮ, ಸಾರಿಗೆ, ಕರಕುಶಲ ವಸ್ತುಗಳ ಮಾರಾಟ ಮತ್ತು ಸ್ಥಳೀಯ ಸೇವಾ ವಲಯಗಳಿಗೆ ಈ ಯೋಜನೆಯಿಂದ ಭಾರಿ ಲಾಭವಾಗಲಿದೆ.
ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಜಾಹೀರಾತು ಮತ್ತು ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲು ನೀತಿ ಆಯೋಗವು ವಿವಿಧ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಲಿದೆ.