Friday, November 14, 2025
Friday, November 14, 2025

ನೂತನ ʼಹಾಲಿಡೇ ಹೋಮ್ʼ ಪರವಾನಿಗೆ ವ್ಯವಸ್ಥೆ ಜಾರಿಗೊಳಿಸಿದ ಈಜಿಪ್ಟ್

ಈ ಹೊಸ ನಿಯಮದಡಿ, ಮನೆ, ಸ್ಯೂಟ್, ಅಪಾರ್ಟ್‌ಮೆಂಟ್ ಅಥವಾ ವಿಲ್ಲಾ– ಇವುಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲು ಈಗ ಅಧಿಕೃತ ಪರವಾನಿಗೆ ಅವಶ್ಯಕವಾಗಿದೆ. ಈ ವಸತಿ ಘಟಕಗಳು ಸರ್ಕಾರ ಗುರುತಿಸಿದ ಪ್ರವಾಸಿ ಪ್ರದೇಶಗಳಲ್ಲಿ ಅಥವಾ ಉತ್ತಮ ಗುಣಮಟ್ಟದ ನಿವಾಸಿ ವಲಯಗಳಲ್ಲಿ ಇರಬೇಕೆಂಬ ನಿಯಮ ಜಾರಿಗೊಳಿಸಲಾಗಿದೆ.

ಈಜಿಪ್ಟ್ ಪ್ರವಾಸೋದ್ಯಮ ಸಚಿವಾಲಯವು ಹೊಸ ‘ಹಾಲಿಡೇ ಹೋಮ್’ ಪರವಾನಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ವಿಭಿನ್ನ ಹಾಗೂ ಹೋಮ್ಲಿ ಫೀಲಿಂಗ್‌ ನೀಡುವ ವಸತಿ ಆಯ್ಕೆಗಳನ್ನು ಒದಗಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಈ ಹೊಸ ನಿಯಮದಡಿ, ಮನೆ, ಸ್ಯೂಟ್, ಅಪಾರ್ಟ್‌ಮೆಂಟ್ ಅಥವಾ ವಿಲ್ಲಾ– ಇವುಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲು ಈಗ ಅಧಿಕೃತ ಪರವಾನಿಗೆ ಅವಶ್ಯಕವಾಗಿದೆ. ಈ ವಸತಿ ಘಟಕಗಳು ಸರ್ಕಾರ ಗುರುತಿಸಿದ ಪ್ರವಾಸಿ ಪ್ರದೇಶಗಳಲ್ಲಿ ಅಥವಾ ಉತ್ತಮ ಗುಣಮಟ್ಟದ ನಿವಾಸಿ ವಲಯಗಳಲ್ಲಿ ಇರಬೇಕೆಂಬ ನಿಯಮ ಜಾರಿಗೊಳಿಸಲಾಗಿದೆ.

Holiday Homes in Egypt

ನೂತನ ವ್ಯವಸ್ಥೆಯ ಪ್ರಮುಖ ಅಂಶಗಳು:-

  • ವಸತಿ ಘಟಕಗಳು ಗುಣಮಟ್ಟ, ಭದ್ರತೆ ಮತ್ತು ಸ್ವಚ್ಛತೆಯ ಮಾನದಂಡಗಳನ್ನು ಪಾಲಿಸಬೇಕು.
  • ಮಾಲೀಕರು “ಟೂರಿಸ್ಟಿಕ್ ಸೂಟೇಬಿಲಿಟಿ ಸರ್ಟಿಫಿಕೇಟ್” ಅನ್ನು ಪಡೆಯುವುದು ಕಡ್ಡಾಯ.
  • ಆನ್‌ಲೈನ್ ಮೂಲಕ ಸರಳ ವಿಧಾನದಲ್ಲಿ ಪರವಾನಿಗೆ ಅರ್ಜಿ ಸಲ್ಲಿಸಬಹುದು.
  • ಸ್ಥಳೀಯರು ತಮ್ಮ ಖಾಸಗಿ ಮನೆಗಳನ್ನು ಕಾನೂನುಬದ್ಧವಾಗಿ ಪ್ರವಾಸಿ ವಸತಿಗೆ ಪರಿವರ್ತಿಸಿಕೊಳ್ಳಲು ಅವಕಾಶ.
Egypt tourism

ಈ ಕ್ರಮದಿಂದ ಈಜಿಪ್ಟ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಟೇಲ್‌ಗಳಷ್ಟೇ ಅಲ್ಲದೆ ಮನೆಯಂಥ ಆರಾಮದಾಯಕ ವಸತಿ ಆಯ್ಕೆಗಳೂ ದೊರೆಯಲಿವೆ. ಕುಟುಂಬ ಸಮೇತ ಬರುವ ಪ್ರವಾಸಿಗರಿಗೆ, ಗುಂಪಿನಲ್ಲಿ ಬರುವ ಪ್ರವಾಸಿಗರಿಗೆ ಮತ್ತು ದೀರ್ಘಾವಧಿಯವರೆಗೆ ದೇಶದಲ್ಲೇ ಉಳಿಯಬಯಸುವ ಪ್ರವಾಸಿಗರಿಗೆ ಈ ಯೋಜನೆ ಹೆಚ್ಚು ಲಾಭದಾಯಕ ಮತ್ತು ತೃಪ್ತಿದಾಯಕವಾಗಿದೆ.

ಈಜಿಪ್ಟ್‌ ಸರಕಾರದ ಪ್ರಕಾರ, ಹಾಲಿಡೇ ಹೋಮ್‌ಗಳ ಸುವ್ಯವಸ್ಥೆಯು ಪ್ರವಾಸಿಗರಿಗೆ ಸುರಕ್ಷತೆ ಮತ್ತು ತೃಪ್ತಿಯನ್ನು ನೀಡುವುದರ ಜತೆಗೆ ಈಜಿಪ್ಟ್‌ನ ಪ್ರವಾಸೋದ್ಯಮ ವಲಯಕ್ಕೆ ಆರ್ಥಿಕ ಬಲ ನೀಡಲಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ