ಸಾಮಾನ್ಯವಾಘಗಿ ಚುನಾವಣೆ ಎಂದಕೂಡಲೇ ರಾಜಕೀಯ ಜಟಾಪಟಿ ಬಗ್ಗೆ ಮಾತ್ರ ಮಾತನಾಡುಲಾಗುತ್ತದೆ. ಆದರೆ, ಚುನಾವಣೆ ಪ್ರಭಾವ ಪ್ರವಾಸೋದ್ಯಮದ ಮೇಲೂ ಪ್ರಭಾವ ಬೀರಲಿದೆ. ಭಾರತದ ಸಾಂಸ್ಕೃತಿಕ ಕೇಂದ್ರವೆಂದೇ ಕರೆಯಲ್ಪಡುವ ಪಶ್ಚಿಮ ಬಂಗಾಳವು ಇದೀಗ 2026ರ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ಸುದ್ದಿಯಲ್ಲಿದೆ. ಈ ಚುನಾವಣೆಯು ರಾಜ್ಯದ ಪ್ರವಾಸೋದ್ಯಮ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೂ ಮಹತ್ವದ ಪರಿಣಾಮ ಬೀರುತ್ತಿದೆ.

ಪಶ್ಚಿಮ ಬಂಗಾಳದ ಚುನಾವಣೆ ಎಂದರೆ ಅದು ಇಡೀ ದೇಶದ ಗಮನ ಸೆಳೆಯುವ ಘಟನೆ. ಮುಂಬರುವ 2026ರ ಚುನಾವಣೆಗಳು ಪ್ರವಾಸಿಗರ ಭೇಟಿಯ ಮೇಲೆ ಮಿಶ್ರ ಪ್ರತಿಕ್ರಿಯೆ ನೀಡುತ್ತಿವೆ. ಚುನಾವಣಾ ಸಮಯದಲ್ಲಿ ನಡೆಯುವ ಮೆರವಣಿಗೆಗಳು, ಭದ್ರತಾ ಬಿಗಿ ಮತ್ತು ರಾಜಕೀಯ ಅನಿಶ್ಚಿತತೆಯಿಂದಾಗಿ ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರು ತಮ್ಮ ಪ್ರವಾಸದ ದಿನಾಂಕಗಳನ್ನು ಬದಲಾಯಿಸುತ್ತಿದ್ದಾರೆ.

ರಾಮೇಶ್ವರಂನ ಪವಿತ್ರ ಪರಿಸರದಲ್ಲಿ ಅಂತಾರಾಷ್ಟೀಯ ಮಹಿಳೆಯರ ದಿನ

ಉತ್ತರ ಬಂಗಾಳದ (ಡಾರ್ಜಿಲಿಂಗ್, ಕಾಲಿಂಪಾಂಗ್) ಪ್ರವಾಸಿ ತಾಣಗಳಿಗೆ ಸುಲಭವಾಗಿ ತಲುಪಲು ಹೊಸ ಹೆದ್ದಾರಿಗಳು ಮತ್ತು ರೈಲು ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರಗಳು ಆತುರ ತೋರಿಸುತ್ತಿವೆ. ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಬಂಗಾಳದ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಯೋಜನೆಗಳು ಚುನಾವಣಾ ಭರವಸೆಗಳಾಗಿ ಬದಲಾಗುತ್ತಿವೆ.

ಚುನಾವಣಾ ಸಮಯದಲ್ಲಿ ಹೊಟೇಲ್ ಬುಕಿಂಗ್‌ಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಇದು ಪ್ರವಾಸಿಗರಿಗಿಂತ ಹೆಚ್ಚಾಗಿ ರಾಜಕೀಯ ಕಾರ್ಯಕರ್ತರು, ಮಾಧ್ಯಮ ಪ್ರತಿನಿಧಿಗಳು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಂದಾಗಿರುತ್ತದೆ. ಇದು ಸಾಮಾನ್ಯ ಪ್ರವಾಸಿಗರಿಗೆ ಹೊಟೇಲ್‌ ದರಗಳ ಏರಿಕೆಗೆ ಕಾರಣವಾಗಬಹುದು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪರಿಸರ ಕಾಳಜಿಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.