ಬಹುನಿರೀಕ್ಷಿತ “ಮಧ್ಯಪ್ರದೇಶ ಟ್ರಾವೆಲ್ ಮಾರ್ಟ್ (MPTM) 2025” ಕಾರ್ಯಕ್ರಮದ ಆತಿಥ್ಯವನ್ನು ಈ ಬಾರಿ ಭೋಪಾಲ್‌ ವಹಿಸಲಿದೆ. ʼಇನ್‌ಕ್ರೆಡಿಬಲ್‌ ಇಂಡಿಯಾʼದ ಹೃದಯ ಎಂದು ಹೆಸರಾಗಿರುವ ಮಧ್ಯಪ್ರದೇಶವು ತನ್ನ ವೈವಿಧ್ಯಮಯ ಪ್ರವಾಸೋದ್ಯಮ ಸಂಪತ್ತನ್ನು ದೇಶ ಮತ್ತು ವಿದೇಶಗಳ ಮುಂದೆ ಪ್ರದರ್ಶಿಸಲು ಸಜ್ಜಾಗಿದೆ. ಈ ಬಾರಿ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖರು ಒಂದೇ ವೇದಿಕೆಯಡಿ ಸೇರಿ, ಮಧ್ಯಪ್ರದೇಶ ಪ್ರವಾಸೋದ್ಯಮ ಮಂಡಳಿಯ ಮೂಲಕ ವ್ಯವಹಾರ ಮತ್ತು ವೈಯಕ್ತಿಕ ಅವಕಾಶಗಳ ಬಗ್ಗೆ ಚರ್ಚಿಸಲಿದ್ದಾರೆ. ರಾಜ್ಯದ ವನ್ಯಜೀವಿ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ಅಪಾರ ಸಾಧ್ಯತೆಗಳು ಈ ವೇದಿಕೆಯಲ್ಲಿ ಹೊಸ ದೃಷ್ಟಿಕೋನವನ್ನು ಪಡೆಯಲಿವೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ B2B ಮೀಟಿಂಗ್‌ಗಳು, FAM ಟೂರ್‌ಗಳು ಹಾಗೂ ಪ್ರವಾಸಿಗರನ್ನು ತೊಡಗಿಸಿಕೊಳ್ಳುವ ವಿವಿಧ ಕ್ರಿಯಾಕಲಾಪಗಳನ್ನು ಪ್ರವಾಸೋದ್ಯಮ ಮಂಡಳಿ ಆಯೋಜಿಸಿದೆ.

MPTM 2025ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಹಾಗೂ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಉಪಸ್ಥಿತರಿರುವರು. ಅವರು ಮಧ್ಯಪ್ರದೇಶ ಸರ್ಕಾರದ ಪ್ರವಾಸೋದ್ಯಮ ನೀತಿಗಳು, ಮುಂದಿನ ದಶಕದ ಗುರಿಗಳು ಹಾಗೂ ರಾಜ್ಯದ ಅಭಿವೃದ್ಧಿಯೊಂದಿಗೆ ಸಂಯೋಜಿತವಾದ ಸುಸ್ಥಿರ ಪ್ರವಾಸೋದ್ಯಮದ ದಾರಿಯನ್ನು ವಿವರಿಸಲಿದ್ದಾರೆ. ಇತಿಹಾಸ, ಸಂಸ್ಕೃತಿ ಹಾಗೂ ಪರಿಸರದ ದೃಷ್ಟಿಯಿಂದ ಮಧ್ಯಪ್ರದೇಶವು ಪ್ರವಾಸೋದ್ಯಮದಲ್ಲಿ ಗಣನೀಯ ಪ್ರಗತಿಯನ್ನು ಹೊಂದಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.

Madhyapradesh (1)


ಹಲವಾರು ವಿಶಿಷ್ಟ ವಿಷಯಗಳನ್ನು ಆಧರಿಸಿ ಅತ್ಯುತ್ತಮ ಪ್ಯಾನಲ್‌ ಚರ್ಚೆಗಳು ಈ ಸಮ್ಮೇಳನದಲ್ಲಿ ನಡೆಯಲಿವೆ. “Madhya Pradesh: From Hidden Gem to Global Icon” ಎಂಬ ಪ್ರಮುಖ ಚರ್ಚೆಯಲ್ಲಿ ರಾಜ್ಯದ ಪರಂಪರೆ ಆಧಾರಿತ ತಾಣಗಳು, ಅಭಯಾರಣ್ಯಗಳು ಹಾಗೂ ಸಾಹಸ ಪ್ರವಾಸೋದ್ಯಮದ ವಿಶ್ವಮಟ್ಟದ ಅಭಿವೃದ್ಧಿಯ ಕುರಿತಾಗಿ ಚಿಂತನೆ ನಡೆಯಲಿದೆ.

“The State’s Cinematic Journey” ಎಂಬ ಮತ್ತೊಂದು ವಿಶೇಷ ಚರ್ಚೆಯಲ್ಲಿ, ರಾಜ್ಯದ ಫಿಲ್ಮ್‌ ಟೂರಿಸಂ ಕುರಿತಾದ ಹೊಸ ಅವಕಾಶಗಳ ಬಗ್ಗೆ ಚಿಂತನೆ ನಡಯಲಿದೆ. ಚಲನಚಿತ್ರ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಿ, ಚಲನಚಿತ್ರ ಚಿತ್ರೀಕರಣದ ಮೂಲಕ ರಾಜ್ಯದ ಪ್ರವಾಸೋದ್ಯಮದ ವಿಸ್ತಾರ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಲಿದೆ.

Khujuraho temples


ಸಿನೆಮ್ಯಾಟಿಕ್ ಟೂರಿಸಂ ಮತ್ತು ಇಂಟರ್‌ನ್ಯಾಷನಲ್ ಕೊಲಾಬರೇಷನ್‌ಗಳು ಎಂಬ ವಿಭಾಗದಲ್ಲಿ ಬಾಲಿವುಡ್‌ ಹಾಗೂ ಮಧ್ಯಪ್ರದೇಶದ ನಡುವಿನ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಚಿತ್ರೋದ್ಯಮದ ಸಹಯೋಗದ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಲಿದೆ. ಖಜುರಾಹೋ, ಗ್ವಾಲಿಯರ್, ಬಾಂಧವಗಢ ರಾಷ್ಟ್ರೀಯ ಉದ್ಯಾನವನಗಳು ಮೊದಲಾದ ಸ್ಥಳಗಳಲ್ಲಿ ಚಿತ್ರ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಳ್ಳಲು ಬಾಲಿವುಡ್‌ನ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತದೆ.

ಈ ಚರ್ಚೆಗಳು ಸ್ಥಳೀಯ ಸಮುದಾಯಗಳ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ ಅಗತ್ಯಗಳು ಮತ್ತು ಪ್ರವಾಸೋದ್ಯಮದ ಹೊಸ ಆಯಾಮಗಳನ್ನು ತೆರದಿಡಲಿವೆ. ಸಂಚಿ ಸ್ತುಪ ಮತ್ತು ಗ್ವಾಲಿಯರ್ ಕೋಟೆಯಂಥ ವಿಶ್ವಪ್ರಸಿದ್ಧ ತಾಣಗಳು ಮಧ್ಯಪ್ರದೇಶದ ಚಿತ್ರೋದ್ಯಮ-ಪ್ರವಾಸೋದ್ಯಮ ಸಂಬಂಧಕ್ಕೆ ಹೊಸ ಚೈತನ್ಯವನ್ನು ತುಂಬಲಿವೆ.

ಡೆಸ್ಟಿನೇಶನ್ ವೆಡ್ಡಿಂಗ್‌ಗಳು ಮತ್ತು ಪರಂಪರೆ ಪ್ರವಾಸೋದ್ಯಮ

ಮಧ್ಯಪ್ರದೇಶವು ಇತ್ತೀಚಿನ ದಿನಗಳಲ್ಲಿ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳನ್ನು ಉತ್ತೇಜಿಸುವ ಮೂಲಕ ತನ್ನ ಪ್ರವಾಸೋದ್ಯಮದ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ರಾಜ್ಯದ ಆಕರ್ಷಕ ಅರಮನೆಗಳು, ಕೋಟೆಗಳು ಮತ್ತು ಪ್ರಕೃತಿಯ ಸೌಂದರ್ಯ ಮದುವೆ ಸಮಾರಂಭಗಳಿಗೆ ಮನಮೋಹಕ ಹಿನ್ನೆಲೆಯನ್ನು ನೀಡುತ್ತವೆ. ಸ್ಥಳೀಯ ಶೈಲಿಯ ವಾಸ್ತುಶಿಲ್ಪ ಮತ್ತು ನೈಸರ್ಗಿಕ ಸೌಂದರ್ಯದ ಸಮನ್ವಯವು ಮಧ್ಯಪ್ರದೇಶವನ್ನು ವೈವಾಹಿಕ ಉತ್ಸವಗಳಿಗೆ ಪರಿಪೂರ್ಣ ತಾಣವನ್ನಾಗಿಸಿದೆ.

B2B ಸಭೆಗಳು ಮತ್ತು ಸಹಭಾಗಿತ್ವದ ಹೊಸ ಸಾಧ್ಯತೆಗಳು

MPTM 2025ರ ಕೊನೆಯ ದಿನ B2B ಸಭೆಗಳಿಗೆ ಮೀಸಲಾಗಿದೆ. ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ವಲಯದ ವೃತ್ತಿಪರರು, ಟ್ರಾವೆಲ್ ಏಜೆಂಟರು ಮತ್ತು ಉದ್ಯಮದ ನಾಯಕರೊಂದಿಗೆ ವ್ಯವಹಾರಿಕ ಸಂಪರ್ಕ ಸ್ಥಾಪಿಸಲು ಇದು ಅಮೂಲ್ಯ ಅವಕಾಶವಾಗಲಿದೆ. ಈ ಸಭೆಗಳು ಮಧ್ಯಪ್ರದೇಶ ಪ್ರವಾಸೋದ್ಯಮದ ಭವಿಷ್ಯ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.