GOAT TOUR INDIA- 2025: ಭಾರತಕ್ಕೆ ಮೆಸ್ಸಿ ಪ್ರವಾಸ
ಡಿಸೆಂಬರ್ 13ರಂದು ಕೋಲ್ಕತ್ತಕ್ಕೆ ಬಂದಿಳಿದು ಅಲ್ಲಿಂದ ಅಹಮದಾಬಾದ್ ನಂತರ ಮುಂಬೈಗೆ, ಕೊನೆಯ ದಿನ ಅಂದರೆ ಡಿಸೆಂಬರ್ 15ರಂದು ಪ್ರಧಾನಿ ಮೋದಿ ಅವರ ಜತೆ ಮಾತುಕತೆ. ಇದು ಮೆಸ್ಸಿ ಪ್ರವಾಸ ಮ್ಯಾಪ್.
ಫುಟ್ಬಾಲ್ ಕಣದ ಕಿಲಾಡಿ ಲಿಯೋನಲ್ ಮೆಸ್ಸಿ, 14 ವರ್ಷಗಳ ನಂತರದ ಭಾರತಕ್ಕೆ ಭೇಟಿ ನೀಡಲಿದ್ದು, GOAT TOUR INDIA- 2025ರಲ್ಲಿ ಪಾಲ್ಗೊಳ್ಳುವ ಕುರಿತು ಖಾತರಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ಬಹು ವಿಶೇಷತೆಯ ದೇಶ ಎಂದು ಕೊಂಡಾಡಿದ್ದಾರೆ. ಡಿಸೆಂಬರ್ 13 ರಿಂದ 15ರವರೆಗಿನ ಈ ಪ್ರವಾಸದಲ್ಲಿ, ಮೆಸ್ಸಿ ಮೊದಲದಿನ ಅಂದರೆ ಡಿಸೆಂಬರ್ 13ರಂದು ಕೋಲ್ಕತ್ತಕ್ಕೆ ಬಂದಿಳಿದು, ಅಲ್ಲಿಂದ ಅಹಮದಾಬಾದಿಗೆ ನಂತರ ಮುಂಬೈಗೆ ಹೋಗಲಿದ್ದಾರೆ. ಡಿಸೆಂಬರ್ 15ರಂದು ಪ್ರಧಾನಿ ಮೋದಿ ಅವರ ಜತೆ ಮಾತುಕತೆಯೊಡನೆ ಮೆಸ್ಸಿ ಪ್ರವಾಸ ಕೊನೆಗೊಳ್ಳಲಿದೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೆಸ್ಸಿ, ಭಾರತ ಬಹು ವೈಶಿಷ್ಯತೆಯ ದೇಶ. ಇಲ್ಲಿ ಪ್ರವಾಸ ಮಾಡುತ್ತಿರುವುದೇ ನನಗೆ ಗೌರವದ ಸಂಗತಿ. ಇಲ್ಲಿ ಸಾಕಷ್ಟು ಫುಟ್ಬಾಲ್ ಪ್ರಿಯರಿದ್ದಾರೆ. ಹೆಚ್ಚಾಗಿ ಕ್ರೀಡಾಭಿಮಾನಿಗಳಿದ್ದಾರೆ. 14 ವರ್ಷಗಳ ಹಿಂದೆ ನಾನು ಇಲ್ಲಿದ್ದಾಗ ಸಾಕಷ್ಟು ಮರೆಯಲಾಗದ ಕ್ಷಣಗಳನ್ನು ಕಳೆದಿದ್ದೀನಿ. ಈ ಭೇಟಿಯಲ್ಲಿ ಇಲ್ಲಿನ ನವೋತ್ಸಾಹಿ ಕ್ರೀಡಾಭೀಮಾನಿಗಳೊಂದಿಗೆ ಪ್ರೀತಿ ಹಂಚಿಕೊಳ್ಳಬೇಕು ಎಂದಿದ್ದಾರೆ.
ಪ್ರವಾಸದಲ್ಲಿ ಕೋಲ್ಕತ್ತದ ʻಗೋಟ್ ಕಚೇರಿʼ, ಸಾಲ್ಟ್ ಲೇಕ್‌ನಲ್ಲಿ ʻಗೋಟ್ ಪ್ರದರ್ಶನ ಪಂದ್ಯʼ ನಡೆಯಲಿದೆ. ಜತೆಗೆ ಅವರ 25 ಅಡಿ ಎತ್ತರದ ಪ್ರತಿಮೆ ಅನಾವರಣವೂ ನಡೆಯಲಿದೆ. ಈ ಪ್ರದರ್ಶನ ಪಂದ್ಯದ ವೀಕ್ಷಣೆಗೆ ಟಿಕೆಟ್ ದರ 3,500 ದಿಂದ ಶುರುವಾಗಲಿದೆ. ಕ್ರಿಕೆಟ್ ತಾರೆ ಸೌರವ್ ಗಂಗೂಲಿ, ಟೆನಿಸ್ ತಾರೆ ಲಿಯಾಂಡರ್ ಪೇಸ್, ಫುಟ್‌ಬಾಲ್ ದಿಗ್ಗಜ ಬೈಚುಂಗ್ ಭುಟಿಯಾ ಸೇರಿ ಸೆಲೆಬ್ರಿಟಿಗಳು ಪಂದ್ಯದಲ್ಲಿ ಆಡಲಿದ್ದಾರೆ. ಮುಂಬೈನಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿಯೂ ʻPADEL GOAT CUPʼ ಪಂದ್ಯ ನಡೆಯಲಿದ್ದು. ಮೆಸ್ಸಿ ಜತೆಗೆ ಶಾರೂಕ್ ಖಾನ್, ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಸಹ ಭಾಗಿಯಾಗಲಿದ್ದಾರೆ. ನವೆಂಬರ್‌ನಲ್ಲಿ ಕೇರಳದಲ್ಲೂ ಪ್ರವಾಸ ನಡೆಸಿ ಪಂದ್ಯವಾಡಲು ಮೆಸ್ಸಿ ಜತೆಗೆ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಯೋಜನೆಯಿದ್ದು, ವೇಳಾಪಟ್ಟಿ ಸ್ಥಳ ಇನ್ನು ನಿರ್ಧಾರವಾಗಿಲ್ಲವಂತೆ.