ಗವಿಮಠದ ಗವಿಸಿದ್ದೇಶ್ವರ ರಥೋತ್ಸವವನ್ನು ಜನವರಿ 5ರಂದು ನಡೆಸಲು ನಿರ್ಧರಿಸಲಾಗಿದೆ. ಈ ರಥೋತ್ಸವಕ್ಕೆ ಮೆರುಗು ತುಂಬಲು ಮೇಘಾಲಯದ ರಾಜ್ಯಪಾಲರಾದ ಸಿ ಎಚ್ ವಿಜಯ್ ಶಂಕರ್ ಚಾಲನೆಯನ್ನು ನೀಡಲಿದ್ದಾರೆ.

ಮೊದಲ ದಿನದ ಕಾರ್ಯಕ್ರಮದಲ್ಲಿ ಕಾಖಂಡಕಿ ಗುರುದೇವಾಶ್ರಮ ಮಠದ ಶಿವಯೋಗೀಶ್ವರ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಉಪದೇಶಾಮೃತ ಜರುಗಲಿದೆ. ರಥೋತ್ಸವದ ಭಾಗವಾಗಿ ಭಕ್ತಾದಿಗಳಿಗೆ ಹಲವಾರು ಮನೋರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಿಂದೂಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಹಾಗೂ ವಿದ್ವಾನ್ ನಿಶಾದ್ ಹರ್ಲಾಪುರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಜನವರಿ 7 ರಂದು ಡಾ. ಸೋಮೇಶ್ವರ ಅವರು ಸಮಾರೋಪದ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲು ಗಂಗಾವತಿ ಪ್ರಾಣೇಶ್ ಅವರಿಂದ 'ಹಾಸ್ಯೋತ್ಸವ' ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದಾಜು 20 ಲಕ್ಷಕ್ಕೂ ಹೆಚ್ಚು ಜನರು ರಥೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಮಹಾ ದಾಸೋಹಕ್ಕೆ ಸಕಲ ಸಿದ್ಧತೆಗಳು ನಡೆದಿದೆ.