ಪ್ರಯಾಣಿಕರಿಗೆ ಗುಡ್‌ನ್ಯೂಸ್; ಈ ವಿಶೇಷ ರೈಲಿನಲ್ಲಿದೆ ನೂತನ ರೆಸ್ಟೋರೆಂಟ್ ಸೌಲಭ್ಯ
ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ತನ್ನ ಮೊದಲ ‘ಭಾರತ್ ಗೌರವ ಡಿಲಕ್ಸ್ ಎಸಿ ಟೂರಿಸ್ಟ್ ರೈಲು ಅನ್ನು ‘ಪಶುಪತಿನಾಥ ನೇಪಾಳ ದರ್ಶನ ಯಾತ್ರೆ’ಯ ಮೂಲಕ ಪ್ರಾರಂಭಿಸಲಿದೆ. ಈ ರೈಲಿನಲ್ಲಿ ರೆಸ್ಟೋರೆಂಟ್ ಸೌಲಭ್ಯವಿದ್ದು, ಈ ವಿಶೇಷ ರೈಲು ಇಂದೋರ್‌ನಿಂದ ಅಕ್ಟೋಬರ್ 4ರಂದು ಪ್ರಯಾಣ ಆರಂಭಿಸಲಿದ್ದು, ಇಂದೋರ್, ಉಜ್ಜಯಿನಿ, ಶುಜಾಲ್‌ಪುರ್, ಸೆಹೋರ್, ರಾಣಿ ಕಮಲಾಪತಿ, ಇಟಾರ್ಸಿ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ ಮತ್ತು ಸತ್ನಾ ಸೇರಿದಂತೆ ಪ್ರಮುಖ ತಾಣಗಳಿಗೆ ಭೇಟಿ ನೀಡಲಿದೆ.
ದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) (IRCTC) ತನ್ನ ಮೊದಲ ‘ಭಾರತ್ ಗೌರವ ಡಿಲಕ್ಸ್ ಎಸಿ ಟೂರಿಸ್ಟ್ ರೈಲು (Bharat Gaurav Deluxe AC Tourist Train)’ ಅನ್ನು ‘ಪಶುಪತಿನಾಥ (Pashupatinath) ನೇಪಾಳ (Nepal) ದರ್ಶನ ಯಾತ್ರೆ’ಯ ಮೂಲಕ ಪ್ರಾರಂಭಿಸಲಿದೆ. ಈ ವಿಶೇಷ ರೈಲಿನಲ್ಲಿ ರೆಸ್ಟೋರೆಂಟ್ ಸೌಲಭ್ಯವಿದ್ದು, ಇದರಲ್ಲಿ ಇಂದೋರ್‌ನಿಂದ ಅಕ್ಟೋಬರ್ 4ರಂದು ಪ್ರಯಾಣ ಆರಂಭಿಸಲಿದೆ. ಇಂದೋರ್, ಉಜ್ಜಯಿನಿ, ಶುಜಾಲ್‌ಪುರ್, ಸೆಹೋರ್, ರಾಣಿ ಕಮಲಾಪತಿ, ಇಟಾರ್ಸಿ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ ಮತ್ತು ಸತ್ನಾ ಸೇರಿದಂತೆ ಪ್ರಮುಖ ತಾಣಗಳಿಗೆ ಭೇಟಿ ನೀಡಲಿದೆ.
ಈ 9 ರಾತ್ರಿ ಹಾಗೂ 10 ದಿನಗಳ ಪ್ರವಾಸವು ಚಿತ್ವಾನ್ ರಾಷ್ಟ್ರೀಯ ಉದ್ಯಾನ, ಪೊಖಾರಾ, ಕಾಠ್ಮಂಡು ಮತ್ತು ನೇಪಾಳದ ಪವಿತ್ರ ಪಶುಪತಿನಾಥ ದೇವಾಲಯ ಸೇರಿದಂತೆ ಸುಂದರ ಮತ್ತು ಆಧ್ಯಾತ್ಮಿಕ ತಾಣಗಳನ್ನು ಒಳಗೊಂಡಿದೆ.
ಪ್ರತಿ ವ್ಯಕ್ತಿಯ ಪ್ರವಾಸ ಶುಲ್ಕವು ಪ್ರಯಾಣ ವರ್ಗದ ಆಧಾರದ ಮೇಲೆ ವಿಂಗಡಿಸಲಾಗಿದೆ. ಕಂಫರ್ಟ್ ಕ್ಯಾಟಗರಿಯಲ್ಲಿ 3ಎಸಿ ಶುಲ್ಕ 63,850 ರೂ. ಆಗಿದೆ. ಡಿಲಕ್ಸ್ ಕ್ಯಾಟಗರಿಯ 2ಎಸಿ ವಸತಿಗೆ 75,230 ರೂ. ನಿಗದಿಯಾಗಿದೆ. ಸೂಪಿರಿಯರ್ ಕ್ಯಾಟಗರಿ – ಕ್ಯಾಬಿನ್ 1ಎಸಿಗೆ 91,160 ರೂ. ಮತ್ತು ಅತ್ಯಂತ ದುಬಾರಿ ಆಯ್ಕೆಯಾದ ಸೂಪಿರಿಯರ್ ಕ್ಯಾಟಗರಿ – ಕೂಪೆ 1ಎಸಿಗೆ 99,125 ರೂ. ಆಗಿದೆ.
ಐಆರ್‌ಸಿಟಿಸಿ ವೆಸ್ಟ್ ಝೋನ್, ಮುಂಬೈಯ ಗ್ರೂಪ್ ಜನರಲ್ ಮ್ಯಾನೇಜರ್ ಗೌರವ್ ಝಾ ಮಾತನಾಡುತ್ತ, “ಈ ಪ್ಯಾಕೇಜ್ ಆರಾಮದಾಯಕ ಎಸಿ ರೈಲು ಪ್ರಯಾಣ, ಆನ್‌ಬೋರ್ಡ್ ರೆಸ್ಟೋರೆಂಟ್‌ನಲ್ಲಿ ಊಟ (1ಎಸಿ ಮತ್ತು 2ಎಸಿ ಪ್ರಯಾಣಿಕರಿಗೆ, 3ಎಸಿಗೆ ಆಸನದಲ್ಲಿ ಸೇವೆ), ದರ್ಶನಕ್ಕಾಗಿ ಎಸಿ ರಸ್ತೆ ಸಾರಿಗೆ, ಯೋಜನೆಯಂತೆ ಹೋಟೆಲ್ ವಸತಿ, ಪ್ರವಾಸ ಸಹಾಯಕರು, ಪ್ರಯಾಣ ವಿಮೆ, ಆನ್‌ಬೋರ್ಡ್ ಗೃಹಾಲಯ ಮತ್ತು ಭದ್ರತೆಯನ್ನು ಒದಗಿಸುತ್ತದೆ” ಎಂದು ತಿಳಿಸಿದರು.
ಐಆರ್‌ಸಿಟಿಸಿ ವೆಸ್ಟ್ ಝೋನ್, ಭೋಪಾಲ್‌ನ ಜಾಯಿಂಟ್ ಜನರಲ್ ಮ್ಯಾನೇಜರ್ ರಾಜೇಂದ್ರ ಬೋರ್ಬನ್ ಮಾಹಿತಿ ನೀಡಿ, ʼʼಬುಕಿಂಗ್‌ಗಳನ್ನು ಐಆರ್‌ಸಿಟಿಸಿಯ ಪ್ರವಾಸೋದ್ಯಮ ಪೋರ್ಟಲ್ www.irctctourism.com, ಅಧಿಕೃತ ಏಜೆಂಟ್‌ಗಳ ಮೂಲಕ ಅಥವಾ ಸಹಾಯವಾಣಿ ಸಂಖ್ಯೆಗಳ ಮೂಲಕ ಸುಲಭವಾಗಿ ಮಾಡಬಹುದು” ಎಂದು ಹೇಳಿದರು. ಈ ಯಾತ್ರೆಯು ಭಾರತ ಮತ್ತು ನೇಪಾಳದ ಆಧ್ಯಾತ್ಮಿಕ ಮತ್ತು ಪ್ರಕೃತಿ ಸೌಂದರ್ಯವನ್ನು ಒಗ್ಗೂಡಿಸುವ ಅನನ್ಯ ಅನುಭವವನ್ನು ನೀಡಲಿದೆ.