ಹೊಸ ವರ್ಷದ ನಿಮಿತ್ತ ನವದೆಹಲಿ–ಕಟ್ರಾ ನಡುವೆ ವಿಶೇಷ ರೈಲುಗಳು
ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 04081 ನವದೆಹಲಿಯಿಂದ ರಾತ್ರಿ 11.45ಕ್ಕೆ ಹೊರಟು, ಮಾರನೆಯ ದಿನ ಮಧ್ಯಾಹ್ನ 12 ಗಂಟೆಗೆ ಕಟ್ರಾಗೆ ತಲುಪಲಿದೆ. ಅದೇ ರೀತಿ, ರೈಲು ಸಂಖ್ಯೆ 04082 ಕಟ್ರಾದಿಂದ ರಾತ್ರಿ 9.20ಕ್ಕೆ ಹೊರಟು, ಮಾರನೆಯ ದಿನ ಬೆಳಿಗ್ಗೆ 10 ಗಂಟೆಗೆ ನವದೆಹಲಿಗೆ ಆಗಮಿಸಲಿದೆ.
ಹೊಸ ವರ್ಷದ ರಜೆ ಅವಧಿಯಲ್ಲಿ ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ಹೆಚ್ಚಿದ ಸಂಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರೈಲ್ವೆ, ನವದೆಹಲಿ ಮತ್ತು ಕಟ್ರಾ ನಡುವಿನ ಮಾರ್ಗದಲ್ಲಿ ವಿಶೇಷ ಕಾಯ್ದಿರಿಸಿದ ರೈಲು ಸೇವೆ ಆರಂಭಿಸಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಈ ವಿಶೇಷ ರೈಲು ಸೇವೆಯು ಜನವರಿ 1ರವರೆಗೆ ಕಾರ್ಯನಿರ್ವಹಿಸಲಿದ್ದು, ಹಬ್ಬದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪಯಣಿಸುವುದನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ರೈಲಿನಲ್ಲಿ 16 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.

ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 04081 ನವದೆಹಲಿಯಿಂದ ರಾತ್ರಿ 11.45ಕ್ಕೆ ಹೊರಟು, ಮಾರನೆಯ ದಿನ ಮಧ್ಯಾಹ್ನ 12 ಗಂಟೆಗೆ ಕಟ್ರಾಗೆ ತಲುಪಲಿದೆ. ಅದೇ ರೀತಿ, ರೈಲು ಸಂಖ್ಯೆ 04082 ಕಟ್ರಾದಿಂದ ರಾತ್ರಿ 9.20ಕ್ಕೆ ಹೊರಟು, ಮಾರನೆಯ ದಿನ ಬೆಳಿಗ್ಗೆ 10 ಗಂಟೆಗೆ ನವದೆಹಲಿಗೆ ಆಗಮಿಸಲಿದೆ.
ಈ ವಿಶೇಷ ಸೇವೆಯನ್ನು ಜಮ್ಮು ವಿಭಾಗ ಆರಂಭಿಸಿದ್ದು, ಇದರಿಂದ ಜನಸಂದಣಿ ನಿಯಂತ್ರಣವಾಗುವುದರ ಜತೆಗೆ ಭಕ್ತರು ಮತ್ತು ಪ್ರವಾಸಿಗರು ಪ್ರಯಾಣದ ಒತ್ತಡವಿಲ್ಲದೆ ಹೊಸ ವರ್ಷವನ್ನು ಆಚರಿಸಲು ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.