ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಸಂಪರ್ಕಿಸುವ ಉದ್ದೇಶದಿಂದ ‘Temple Trails of Dakshin’ ಹೆಸರಿನ ವಿಶೇಷ ಪ್ರವಾಸೋದ್ಯಮ ರೈಲು ಸೇವೆಯನ್ನು ಆರಂಭಿಸಿದೆ.

ಈ ವಿಶೇಷ ಯಾತ್ರಾ ರೈಲು 2026ರ ಫೆಬ್ರವರಿ 18ರಂದು ಮಹಾರಾಷ್ಟ್ರದ ಮನ್ಮಾಡ್ ನಿಲ್ದಾಣದಿಂದ ಹೊರಡಲಿದ್ದು, 12 ರಾತ್ರಿ ಮತ್ತು 13 ದಿನಗಳ ಧಾರ್ಮಿಕ–ಸಾಂಸ್ಕೃತಿಕ ಪ್ರವಾಸವನ್ನು ಒಳಗೊಂಡಿದೆ. ಮಹಾರಾಷ್ಟ್ರ ಮತ್ತು ಸುತ್ತಮುತ್ತಲಿನ ರಾಜ್ಯಗಳ ಯಾತ್ರಾರ್ಥಿಗಳಿಗೆ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳು ಮತ್ತು ಐತಿಹಾಸಿಕ ತಾಣಗಳನ್ನು ಒಂದೇ ಪ್ರಯಾಣದಲ್ಲಿ ಭೇಟಿ ನೀಡುವ ಅವಕಾಶವನ್ನು ಈ ಯೋಜನೆ ಒದಗಿಸುತ್ತದೆ.

IRCTC Launches ‘Temple Trails of Dakshin’ Tourist Train to South India

ಈ ಯಾತ್ರೆಯಲ್ಲಿ ಮುರುಡೇಶ್ವರ, ಗುರುವಾಯೂರು, ರಾಮೇಶ್ವರಂ, ಮಧುರೈ, ತಿರುವನಂತಪುರಂ, ಕನ್ಯಾಕುಮಾರಿ ಮತ್ತು ಮಹಾಬಲಿಪುರಂ ಸೇರಿದಂತೆ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಹಾಗೂ ಪಾರಂಪರಿಕ ತಾಣಗಳಿಗೆ ಭೇಟಿ ನೀಡಲಾಗುತ್ತದೆ.

ರೈಲು ಪ್ರಯಾಣಿಕರಿಗೆ ಸ್ಲೀಪರ್ (SL), 3ಎಸಿ ಮತ್ತು 2ಎಸಿ ಸೇರಿದಂತೆ ವಿವಿಧ ವರ್ಗಗಳ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಒಟ್ಟಾರೆ ಸುಮಾರು 750 ಪ್ರಯಾಣಿಕರಿಗೆ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪ್ಯಾಕೇಜ್‌ನಲ್ಲಿ ರೈಲು ಪ್ರಯಾಣದ ಜತೆಗೆ ವಸತಿ, ಆಹಾರ, ಸ್ಥಳೀಯ ಸಾರಿಗೆ ಮತ್ತು ಮಾರ್ಗದರ್ಶಕ ಸೇವೆಗಳನ್ನೂ ಒಳಗೊಂಡಿದೆ.

IRCTC ಅಧಿಕಾರಿಗಳ ಪ್ರಕಾರ, ಈ ಯೋಜನೆಯು ಯಾತ್ರಾರ್ಥಿಗಳಿಗೆ ಆರಾಮದಾಯಕ ಮತ್ತು ವ್ಯವಸ್ಥಿತ ಧಾರ್ಮಿಕ ಪ್ರವಾಸ ಅನುಭವವನ್ನು ನೀಡುವುದರ ಜತೆಗೆ, ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.