ಈಶಾನ್ಯ ಭಾರತದ ನದಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ಇನ್‌ಲ್ಯಾಂಡ್ ವಾಟರ್‌ವೇಸ್ ಅಥಾರಿಟಿ ಆಫ್ ಇಂಡಿಯಾ (IWAI) ಹಲವು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು (MoUs) ಮಾಡಿಕೊಂಡಿದೆ. ಮೇಘಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

northeast river tourism


ಈಶಾನ್ಯ ರಾಜ್ಯಗಳಲ್ಲಿ ನದಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು, ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡುವುದು ಹಾಗೂ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಒಪ್ಪಂದಗಳ ಉದ್ದೇಶವಾಗಿದೆ. ಬ್ರಹ್ಮಪುತ್ರ, ಬರಾಕ್ ಸೇರಿದಂತೆ ಅನೇಕ ಜಲಮಾರ್ಗಗಳಲ್ಲಿ ಹೈಬ್ರಿಡ್ ಮತ್ತು ಸೌರಶಕ್ತಿ ಚಾಲಿತ ದೋಣಿಗಳ ಸೇವೆಯನ್ನು ಆರಂಭಿಸುವುದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಭಾಗವಾಗಿದೆ.

ಕೇಂದ್ರ ಸರಕಾರ ಈಗಾಗಲೇ ಬ್ರಹ್ಮಪುತ್ರ ನದಿಯ ರಾಷ್ಟ್ರೀಯ ಜಲಮಾರ್ಗ–2 ಮತ್ತು ಬರಾಕ್ ನದಿಯ ರಾಷ್ಟ್ರೀಯ ಜಲಮಾರ್ಗ–16 ಅಭಿವೃದ್ಧಿಗೆ ನಿಧಿ ಮೀಸಲಿಟ್ಟಿದೆ. ಈ ಹೊಸ ಒಪ್ಪಂದಗಳು ಜಲಮಾರ್ಗಗಳ ಅಭಿವೃದ್ಧಿಯ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಿವೆ ಎಂದು IWAI ಅಧಿಕಾರಿಗಳು ತಿಳಿಸಿದ್ದಾರೆ.