ಹೊಸ ದಾಖಲೆ ಬರೆದ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್...!
240 ಎಕರೆ ವ್ಯಾಪ್ತಿಯಲ್ಲಿ ಹರಡಿರುವ ಲಾಲ್‌ಬಾಗ್ ಹಲವು ಶತಮಾನಗಳ ಹಳೆಯ ಮರಗಳಿಗೆ ಆಶ್ರಯವಾಗಿದೆ. ವೈವಿಧ್ಯಮಯ ಸಸ್ಯ ಜಾತಿಗಳು ಮತ್ತು ಐತಿಹಾಸಿಕ ಗ್ಲಾಸ್‌ಹೌಸ್ ಪೆವಿಲಿಯನ್‌ಗಾಗಿ ಲಾಲ್‌ಬಾಗ್ ವಿಶ್ವಪ್ರಸಿದ್ಧ. ಇತಿಹಾಸ ಮತ್ತು ಪ್ರಕೃತಿಯ ಸಂಗಮವಾಗಿರುವ ಈ ಸುಂದರ ತೋಟ, ಬೆಂಗಳೂರು ನಗರದ ಹೃದಯ ಭಾಗದಲ್ಲಿರುವುದು ವಿಶೇಷ.
ಜಗತ್ತಿನ ಪ್ರಮುಖ ಪ್ರವಾಸಿ ತಾಣಗಳ ಪೈಕಿ ತನ್ನದೇ ಆದ ಛಾಪು ಮೂಡಿಸಿರುವ ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಇದೀಗ ಹೊಸ ದಾಖಲೆ ಬರೆದಿದೆ. 2025ರಲ್ಲಿ ಗೂಗಲ್ ಮ್ಯಾಪ್‌ನಲ್ಲಿ ʻಅತ್ಯಧಿಕವಾಗಿ ಹುಡುಕಲಾದ ಬೊಟಾನಿಕಲ್ ಗಾರ್ಡನ್ʼ ಎಂಬ ಪಟ್ಟಿಯಲ್ಲಿ ಲಾಲ್‌ಬಾಗ್ ವಿಶ್ವದಲ್ಲಿಯೇ ಅಗ್ರಸ್ಥಾನ ಪಡೆದುಕೊಂಡಿದೆ. ಇದರಿಂದ ಯುರೋಪ್, ಏಷ್ಯಾ ಮತ್ತು ಅಮೆರಿಕಾದ ಪ್ರಸಿದ್ಧ ಉದ್ಯಾನವನಗಳನ್ನು ಲಾಲ್‌ಬಾಗ್ ಹಿಂದಿಕ್ಕಿದೆ.
240 ಎಕರೆ ವ್ಯಾಪ್ತಿಯಲ್ಲಿ ಹರಡಿರುವ ಲಾಲ್‌ಬಾಗ್ ಶತಮಾನಗಳ ಹಳೆಯ ಮರಗಳನ್ನು ಹೊಂದಿದೆ. ವೈವಿಧ್ಯಮಯ ಸಸ್ಯ ಜಾತಿಗಳು ಮತ್ತು ಐತಿಹಾಸಿಕ ಗ್ಲಾಸ್ ಹೌಸ್ ಪೆವಿಲಿಯನ್‌ಗಾಗಿ ಲಾಲ್‌ಬಾಗ್ ವಿಶ್ವಪ್ರಸಿದ್ಧ. ಇತಿಹಾಸ ಮತ್ತು ಪ್ರಕೃತಿಯ ಸಂಗಮವಾಗಿರುವ ಈ ಸುಂದರ ತೋಟ, ಬೆಂಗಳೂರು ನಗರದ ಹೃದಯ ಭಾಗದಲ್ಲಿರುವುದು ವಿಶೇಷ. ಪ್ರವಾಸಿಗರು, ಛಾಯಾಗ್ರಾಹಕರು ಮತ್ತು ಪ್ರಕೃತಿ ಪ್ರೇಮಿಗಳಿಗೀಗ ಲಾಲ್‌ಬಾಗ್ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಹೊರಹೊಮ್ಮಿದೆ.