Wednesday, July 29, 2026
Wednesday, July 29, 2026

ಬಿಎಂಆರ್‌ಸಿಎಲ್‌ ಅಂದಾಜಿಗಿಂತಲೂ ಅಧಿಕ ಮೆಟ್ರೋ ದರ

ಬಿಎಂಆರ್‌ಸಿಎಲ್‌ ಅಂದಾಜಿಗಿಂತಲೂ ಅಧಿಕ ಮೆಟ್ರೋ ದರ, ತಿದ್ದುಪಡಿಗೆ ಪ್ರಯಾಣಿಕರ ಆಗ್ರಹಿಸಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣ ದರವು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ತನ್ನದೇ ಯೋಜನಾ ವರದಿಯಲ್ಲಿ ಮಾಡಿದ್ದ ಅಂದಾಜಿಗಿಂತ ಹೆಚ್ಚಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದು, ಪ್ರಸ್ತುತ ದರವನ್ನು ಮರುಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಒತ್ತಾಯಿಸಿದ್ದಾರೆ.

Untitled design - 2026-07-29T152909.670

2024ರ ಜೂನ್‌ನಲ್ಲಿ ಸಿದ್ಧಗೊಂಡ ಮೆಟ್ರೋ ಹಂತ–3ಎ (ಹೆಬ್ಬಾಳ–ಸರ್ಜಾಪುರ ಕೆಂಪು ಮಾರ್ಗ) ವಿವರವಾದ ಯೋಜನಾ ವರದಿ (ಡಿಪಿಆರ್‌)ಯಲ್ಲಿ, ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.12ರಷ್ಟು ದರ ಹೆಚ್ಚಳವಾಗುತ್ತದೆ ಎಂಬ ಲೆಕ್ಕಾಚಾರದ ಆಧಾರದ ಮೇಲೆ 2031ರಲ್ಲಿ ಗರಿಷ್ಠ ಮೆಟ್ರೋ ದರ 75 ರು. ಆಗಿರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಪ್ರಯಾಣಿಕರು ಈಗಾಗಲೇ ಗರಿಷ್ಠ 90 ರು. ದರವನ್ನು ಪಾವತಿಸುತ್ತಿದ್ದಾರೆ. ಇದು ಬಿಎಂಆರ್‌ಸಿಎಲ್‌ನ ಸ್ವಂತ ಯೋಜನಾ ಅಂದಾಜಿಗಿಂತಲೂ ಹೆಚ್ಚಾಗಿದೆ ಎಂದು ಪ್ರಯಾಣಿಕರ ಸಂಘಟನೆಗಳು ಪ್ರಶ್ನಿಸಿವೆ.

ಆಸಕ್ತಿಕರ ಸಂಗತಿಯೆಂದರೆ, 2026ರಲ್ಲಿ ಪರಿಷ್ಕರಿಸಲಾದ ಹಂತ–3ಎ ಡಿಪಿಆರ್‌ನಲ್ಲಿಯೂ ಮೂರು ವರ್ಷಕ್ಕೊಮ್ಮೆ ಶೇ.12ರಷ್ಟು ದರ ಏರಿಕೆ ಎಂಬ ಲೆಕ್ಕಾಚಾರವನ್ನೇ ಮುಂದುವರಿಸಲಾಗಿದೆ. ಆದರೆ, ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ವಾರ್ಷಿಕ ಗರಿಷ್ಠ ಶೇ.5ರಷ್ಟು ದರ ಹೆಚ್ಚಳಕ್ಕೆ ಅವಕಾಶ ನೀಡಿತ್ತು. ಈ ವ್ಯತ್ಯಾಸದಿಂದಾಗಿ ಈಗಿನ ದರ ನಿಗದಿಯಲ್ಲಿ ಲೆಕ್ಕಾಚಾರದ ದೋಷಗಳಿವೆಯೇ ಎಂಬ ಪ್ರಶ್ನೆ ಮತ್ತಷ್ಟು ಬಲಗೊಂಡಿದೆ.

Untitled design - 2026-07-29T153022.487

ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘದ ಸಹ-ಸಂಯೋಜಕ ರಾಜೇಶ್ ಭಟ್, ಹೊಸ ದರ ಏರಿಕೆಯನ್ನು ಜಾರಿಗೆ ತರುವ ಮುನ್ನ ಈಗಿನ ದರ ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಬಿಎಂಆರ್‌ಸಿಎಲ್ ತನ್ನ ಆದಾಯ, ವೆಚ್ಚ ಹಾಗೂ ಲಾಭ-ನಷ್ಟದ ಕುರಿತು ಶ್ವೇತಪತ್ರ ಪ್ರಕಟಿಸಿ ಪಾರದರ್ಶಕತೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ದರ ನಿಗದಿ ಪ್ರಕ್ರಿಯೆಯಲ್ಲಿ ಪ್ರಯಾಣಿಕರ ಪ್ರತಿನಿಧಿಗಳಿಗೂ ಸಮರ್ಪಕ ಸ್ಥಾನ ನೀಡಬೇಕೆಂದೂ ಅವರು ಹೇಳಿದ್ದಾರೆ.

ಇನ್ನೊಬ್ಬ ಪ್ರಯಾಣಿಕ ಕೊಚ್ಚು ಶಂಕರ್, ಸಾರ್ವಜನಿಕ ಸಾರಿಗೆ ಸೇವೆಯ ಮುಖ್ಯ ಉದ್ದೇಶ ಲಾಭ ಗಳಿಸುವುದಲ್ಲ; ಜನರಿಗೆ ಕೈಗೆಟುಕುವ ದರದಲ್ಲಿ ಸಂಚಾರ ಸೌಲಭ್ಯ ಒದಗಿಸುವುದಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಮೆಟ್ರೋ ದರಗಳು ಇತರ ಮಹಾನಗರಗಳಿಗಿಂತ ಹೆಚ್ಚಾಗಿರುವುದು ಸಾರ್ವಜನಿಕ ಸಾರಿಗೆ ಬಳಕೆಗೆ ಹಿನ್ನಡೆಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..