ಸಾಂಸ್ಕೃತಿಕ ನಗರಿ ಮೈಸೂರು ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿದೆ. ಈ ಮಧ್ಯೆ ಮೈಸೂರು ಅರಮನೆ ಆವರಣದಲ್ಲಿ 2026ರ ಹೊಸ ವರ್ಷಾಚರಣೆ ಸಂಭ್ರಮ ನಡೆಯಲಿದೆಯಾ ಎಂಬ ಅನುಮಾನ ಜನತೆಯಲ್ಲಿ ಮನೆಮಾಡಿತ್ತು. ಇದೀಗ ಗೊಂದಲ ಬಗೆ ಹರಿದಿದ್ದು, ಹೊಸ ವರ್ಷದ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ಇಂದು ರಾತ್ರಿ 11 ರಿಂದ 12 ಗಂಟೆವರೆಗೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 12.00 ಗಂಟೆವರೆಗೆ ಅರಮನೆಯ ವಿದ್ಯುತ್ ದೀಪಾಲಂಕಾರ ಕೂಡ ಇರಲಿದ್ದು, 12 ಗಂಟೆಯಿಂದ 12.15 ರವರೆಗೆ ಬಣ್ಣ ಬಣ್ಣಗಳ ಪಟಾಕಿಯನ್ನು ಸಿಡಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಅರಮನೆ ನಗರಿ ಸಜ್ಜಾಗಿದೆ.

New Year Celebrations Shine Bright at Iconic Mysore Palace

ಕೆಲವು ದಿನಗಳ ಹಿಂದೆ ಅರಮನೆ ಮುಂಭಾಗದಲ್ಲಿ ಹೀಲಿಯಂ ಸಿಲಿಂಡರ್ ಬ್ಲಾಸ್ಟ್ ಆಗಿ ಮೂರು ಜನ ಸಾವನ್ನಪ್ಪಿದ ದುರಂತ ಘಟನೆ ನಡೆದಿತ್ತು. ಹೀಗಾಗಿ ಈ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯುತ್ತೋ ಇಲ್ಲವೋ ಎಂಬ ಅನುಮಾನ ಜನರಲ್ಲಿ ಸಹಜವಾಗಿಯೇ ಮೂಡಿತ್ತು. ಇದೀಗ ಮೈಸೂರು ಅರಮನೆ ಮಂಡಳಿ ಹೊಸ ವರ್ಷದ ಕಾರ್ಯಕ್ರಮವನ್ನ ನಡೆಸುವ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆ ಆವರಣದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದೆ.