ರಾಜ್ಯದ ಕ್ರೀಡಾ ಬೆಳವಣಿಗೆಗೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವಂತೆ ಜೆ.ಜೆ. ಆಕ್ಟೀವ್‌ ಸಂಸ್ಥೆಯಿಂದ ನಂದಿ ಬೆಟ್ಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಆಗಸ್ಟ್‌ 10ರಂದು ʼನಂದಿ ಹಿಲ್ಸ್‌ ಮಾನ್ಸೂನ್‌ ರನ್‌ʼ ಎಂಬ ಓಟದ ಕಾರ್ಯಕ್ರಮ ನಡೆಯಲಿದೆ.

ನಂದಿ ಬೆಟ್ಟದ ಪ್ರಾರಂಭವಾಗುವಲ್ಲಿಂದ ಬೆಟ್ಟದ ತುದಿಯವರೆಗಿನ ರಸ್ತೆಯಲ್ಲಿ ʼನಂದಿ ಹಿಲ್ಸ್‌ ಮಾನ್ಸೂನ್‌ ರನ್‌ʼ ಆಯೋಜಿಸಿಸಿರುವ ಹಿನ್ನೆಲೆಯಲ್ಲಿ ಆಗಸ್ಟ್‌ 10 ರಂದು ಬೆಳಗ್ಗೆ 4 ರಿಂದ ಮಧ್ಯಾಹ್ನದವರೆಗೂ ಆ ಪ್ರದೇಶದಲ್ಲಿ ಎಲ್ಲ ಸಾರ್ವಜನಿಕ ವಾಹನಗಳನ್ನೂ ನಿರ್ಬಂಧಿಸಿರುವುದಾಗಿ ಜಿಲ್ಲಾಧಿಕಾರಿ ಪಿ.ಎನ್.‌ ರವೀಂದ್ರ ತಿಳಿಸಿದ್ದಾರೆ.