ಓಮನ್‌ನ ಧೋಫಾರ್ ಪ್ರದೇಶದ ಮಿರ್ಬಾಟ್ ತೀರದಲ್ಲಿ ಹೊಸ ‘ಅರೇಬಿಯನ್ ಸೀ ರೆಸಾರ್ಟ್’ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಈ ರೆಸಾರ್ಟ್ ಆರಂಭಗೊಂಡಿರುವುದರಿಂದ ಓಮನ್ ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತೊಂದು ಆಕರ್ಷಕ ತಾಣ ಸೇರ್ಪಡೆಯಾಗಿದೆ.

ಧೋಫಾರ್ ಮುನಿಸಿಪಾಲಿಟಿ ಅಧ್ಯಕ್ಷ ಡಾ. ಅಹ್ಮದ್ ಮೊಸಿನ್ ಅಲ್ ಘಸ್ಸಾನಿ ರೆಸಾರ್ಟ್‌ ಅನ್ನು ಉದ್ಘಾಟಿಸಿದರು. ಧೋಫಾರ್ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ-ಜನರಲ್ ತಲಾಲ್ ಹುಮೈದ್ ಅಲ್ ಖುಸೈಬಿ, ಈ ರೆಸಾರ್ಟ್ ಓಮನ್‌ ಪ್ರವಾಸೋದ್ಯಮ ಕ್ಷೇತ್ರಕ್ಕೆ “ಗುಣಾತ್ಮಕ ಸೇರ್ಪಡೆ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

60 ಆಧುನಿಕ ಕಕ್ಷೆಗಳನ್ನು ಹೊಂದಿರುವ ಈ ರೆಸಾರ್ಟ್, ಸೀ ವ್ಯೂ ರೂಮ್ಸ್, ಗಾರ್ಡನ್‌ ವ್ಯೂ ರೂಮ್ಸ್, ಲಗ್ಜುರಿ ಸೂಟ್‌ಗಳು, ಖಾಸಗಿ ಸ್ವಿಮ್ಮಿಂಗ್ ಪೂಲ್ ಹೊಂದಿದ ವಿಲ್ಲಾಗಳು ಮತ್ತು ಕುಟುಂಬಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ರೂಮ್ಸ್‌ಗಳನ್ನು ಒಳಗೊಂಡಿದೆ.

ಈ ರೆಸಾರ್ಟ್‌ನ ವಿನ್ಯಾಸದಲ್ಲಿ ಸ್ಥಳೀಯ ಓಮಾನಿ ಪರಂಪರೆಯ ಸ್ಪರ್ಶವನ್ನು ನೀಡಲಾಗಿದೆ. ನವೀನ ಸೌಲಭ್ಯಗಳೊಂದಿಗೆ ಪ್ರವಾಸೋದ್ಯಮವನ್ನು ಬಲಪಡಿಸುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಕಾರಿಯಾಗಿದೆ.