ಉತ್ತರಪ್ರದೇಶದಲ್ಲಿ ಹೆದ್ದಾರಿ ನವೀಕರಣಕ್ಕೆ 6,000 ಕೋಟಿ ರು.ಗಳ ಅನುಮೋದನೆ
ಉತ್ತರ ಪ್ರದೇಶದ ಹೆದ್ದಾರಿಗಳ ಅಭಿವೃದ್ಧಿಗೆ ಈಗ ಕೇಂದ್ರ ಸರಕಾರ ಮುಂದಾಗಿದ್ದು, 6,000 ಕೋಟಿ ರು.ಗಳ ಅನುದಾನವನ್ನು ನೀಡಲಿದೆ.
ಉತ್ತರಪ್ರದೇಶದ ಸಾರಿಗೆ ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನ ನೀಡುವ ಉದ್ದೇಶದಿಂದ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರಾಜ್ಯದ ಪ್ರಮುಖ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ 6,000 ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನವನ್ನು ನೀಡಿದೆ.
ಉತ್ತರಪ್ರದೇಶ ರಾಜ್ಯಾದ್ಯಂತ ಹಲವಾರು ಪ್ರಮುಖ ಹೆದ್ದಾರಿಗಳ ಅಗಲೀಕರಣ, ಬಲವರ್ಧನೆ ಮತ್ತು ಆಧುನೀಕರಣವನ್ನು ಒಳಗೊಂಡಿದೆ. ಹೆದ್ದಾರಿಗಳನ್ನು ಚತುಷ್ಪಥಗೊಳಿಸುವುದು, ಇಂಧನ ಉಳಿತಾಯ ಮತ್ತು ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು, ಅಪಘಾತಗಳನ್ನು ತಡೆಗಟ್ಟಲು ಸೂಚನಾ ಫಲಕಗಳು, ಮೇಲ್ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶ.
ಇದನ್ನೂ ಓದಿ: ದೆಹಲಿ ಸರಕಾರದಿಂದ ಪ್ರವಾಸೋದ್ಯಮ ಮಂಡಳಿ ಸ್ಥಾಪನೆ ಸಾಧ್ಯತೆ
ಉತ್ತರಪ್ರದೇಶವು ವಾರಾಣಸಿ, ಅಯೋಧ್ಯೆ, ಮಥುರಾ ಮತ್ತು ಆಗ್ರಾದಂಥ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವುದರಿಂದ ಈ ಹೆದ್ದಾರಿ ನವೀಕರಣವು ಉಪಯೋಗ ಆಗಲಿದೆ. ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಪರಿಸರ ಸ್ನೇಹಿ ಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಸರಕಾರ ತಿಳಿಸಿದೆ. ಈ ಆರು ಸಾವಿರ ಕೋಟಿ ರುಪಾಯಿಗಳ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸರಕಾರವು ಕಟ್ಟುನಿಟ್ಟಿನ ಸೂಚನೆ ನೀಡಿದೆ.