ಶಬರಿಮಲೆ: ದಿನದ ದರ್ಶನ ಮಿತಿ 75 ಸಾವಿರಕ್ಕೆ ಇಳಿಕೆ
ಕೇರಳ ಹೈಕೋರ್ಟ್ ಸೂಚನೆಯಂತೆ ಶಬರಿಮಲೆಯಲ್ಲಿ ಸ್ಪಾಟ್ ಬುಕಿಂಗ್ 5 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಅಷ್ಟೇ ಅಲ್ಲದೆ ದಿನದ ದರ್ಶನ ಮಿತಿಯನ್ನು 75 ಸಾವಿರಕ್ಕೆ ಇಳಿಸಿದೆ.
ಶಬರಿಮಲೆಯಲ್ಲಿ ಈ ವರ್ಷದ ಮಂಡಲ ಪೂಜೆ, ಮಕರವಿಳಕ್ಕು ಉತ್ಸವ ಶುರುವಾಗಿದೆ. ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದಿದ್ದು, ಅವ್ಯವಸ್ಥೆಯ ಕಾರಣದಿಂದ ಕಾಲ್ತುಳಿತ ಸಂಭವಿಸಿ ಸಾವು ನೋವುಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದ್ದು, ಸ್ಪಾಟ್ ಬುಕಿಂಗ್ 5 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಅಷ್ಟೇ ಅಲ್ಲದೆ ದಿನದ ದರ್ಶನ ಮಿತಿಯನ್ನು 75 ಸಾವಿರಕ್ಕೆ ಇಳಿಸಿದೆ. ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸ್ಪಾಟ್ ಬುಕಿಂಗ್ ಮೂಲಕ ತೀರ್ಥಯಾತ್ರೆಗೆ ಭೇಟಿ ನೀಡಿದವರ ಸಂಖ್ಯೆ ದಿನಕ್ಕೆ 30,000 ದಾಟಿದೆ ಎಂದು ಗಮನಿಸಿತು, ಇದು ಹಿಂದಿನ 20,000 ಮಿತಿಯನ್ನು ಮೀರಿದೆ. ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದೆ.