ಬುದ್ದನ ಅವಶೇಷಗಳ ವಸ್ತುಪ್ರದರ್ಶನಕ್ಕೆ ಮೋದಿಯಿಂದ ಚಾಲನೆ
'ದ ಲೈಟ್ ಆ್ಯಂಡ್ ಲೋಟಸ್: ರೆಲಿಕ್ಸ್ ಆಫ್ ದ ಅವೇಶನ್ಸ್ ಒನ್' ಹೆಸರಿನ ಈ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ದೆಹಲಿಯ ರಾಯ್ ಪಿತ್ರೋಡಾ ಕಲ್ಬರಲ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಗೌತಮ ಬುದ್ಧನ ಅಧಿಕೃತ ಅವಶೇಷಗಳು ಮತ್ತು ಬುದ್ಧ ಹಾಗೂ ಆತನ ಅನುಯಾಯಿಗಳು ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.
ಭಗವಾನ್ ಗೌತಮ ಬುದ್ಧನ ಅವಶೇಷಗಳ ವಸ್ತುಪ್ರದರ್ಶನಕ್ಕೆ ಇಂದು ದೆಹಲಿಯಲ್ಲಿ ಚಾಲನೆ ದೊರಕಿತು. ಪ್ರಧಾನಿ ನರೇಂದ್ರ ಮೋದಿಯವರು ಗೌತಮ ಬುದ್ಧನ ಪಿಪ್ರಾಹ್ವಾ ಅವಶೇಷಗಳನ್ನು ಲೋಕಾರ್ಪಣೆ ಮಾಡಿದರು.
'ದ ಲೈಟ್ ಆ್ಯಂಡ್ ಲೋಟಸ್: ರೆಲಿಕ್ಸ್ ಆಫ್ ದ ಅವೇಶನ್ಸ್ ಒನ್' ಹೆಸರಿನ ಈ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ದೆಹಲಿಯ ರಾಯ್ ಪಿತ್ರೋಡಾ ಕಲ್ಚರಲ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಗೌತಮ ಬುದ್ಧನ ಅಧಿಕೃತ ಅವಶೇಷಗಳು ಮತ್ತು ಬುದ್ಧ ಹಾಗೂ ಆತನ ಅನುಯಾಯಿಗಳು ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.
ದೆಹಲಿ ಹಾಗೂ ಕೋಲ್ಕತ್ತಾದಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ಇದ್ದ ಗೌತಮ ಬುದ್ದನ ಎಲ್ಲಾ ಅವಶೇಷಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಸುಮಾರು ಒಂದು ಶತಮಾನದ ನಂತರ ಪಿಪ್ರಾಹ್ವಾ ಗ್ರಾಮದಲ್ಲಿ ಉತ್ಪನನದಿಂದ ದೊರೆತ ವಸ್ತುಗಳೆಲ್ಲವೂ ಒಟ್ಟಿಗೆ ಒಂದೇ ಸ್ಥಳದಲ್ಲಿ ಕಾಣಸಿಕೊಂಡಂತಾಗಿದೆ. ಅಪರೂಪದವರಲ್ಲಿ ಅಪರೂಪ ವಸ್ತುಗಳೆಂದು ಪರಿಗಣಿಸಲಾದ ಇವುಗಳು ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.