ಸರಕಾರ ಅರಣ್ಯ ಇಲಾಖೆ ವಿರುದ್ಧ ಆತಿಥ್ಯ ವಲಯದ ಅಸಮಾಧಾನ!
ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಕ್ಕೆ ವಾರ್ಷಿಕವಾಗಿ ಐದು ಸಾವಿರ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದರು. ಈಗ ಸಫಾರಿಗಳು ಬಂದ್ ಆಗಿರುವುದರಿಂದ ವಿದೇಶಿ ಪ್ರವಾಸಿಗರೂ ಕರ್ನಾಟಕ ಪ್ರವಾಸೋದ್ಯಮದತ್ತ ಅಷ್ಟಾಗಿ ಮುಖ ಮಾಡುತ್ತಿಲ್ಲ. ಇದರಿಂದ ಕರ್ನಾಟಕ ಪ್ರವಾಸೋದ್ಯಮಕ್ಕೆ 125 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಸಫಾರಿಗಳಿಗೆ ನಿರ್ಬಂಧವನ್ನು ವಿಧಿಸಲಾಗಿದೆ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಮತ್ತು ವನ್ಯ ಜೀವಿಗಳ ಸಂರಕ್ಷಣೆಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಯಾರದ್ದೋ ಪ್ರತಿಷ್ಠೆಗೆ ಬಂಡೀಪುರ ಮತ್ತು ನಾಗರಹೊಳೆ ಸಫಾರಿಗಳು ಬಲಿಯಾಗುತ್ತಿವೆ ಎಂಬ ಮಾತು ಪ್ರವಾಸೋದ್ಯಮ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಬಿಗ್ ಕ್ಯಾಟ್ಸ್ ಶೃಂಗ ಸಭೆಗೆ ಬಂಡೀಪುರದಲ್ಲಿ ಚಾಲನೆ
ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಕ್ಕೆ ವಾರ್ಷಿಕವಾಗಿ ಐದು ಸಾವಿರ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದರು. ಈಗ ಸಫಾರಿಗಳು ಬಂದ್ ಆಗಿರುವುದರಿಂದ ವಿದೇಶಿ ಪ್ರವಾಸಿಗರೂ ಕರ್ನಾಟಕ ಪ್ರವಾಸೋದ್ಯಮದತ್ತ ಅಷ್ಟಾಗಿ ಮುಖ ಮಾಡುತ್ತಿಲ್ಲ. ಇದರಿಂದ ಕರ್ನಾಟಕ ಪ್ರವಾಸೋದ್ಯಮಕ್ಕೆ 125 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಅವೈಜ್ಞಾನಿಕ ತಿರ್ಮಾನವೇ ಈ ಸಮಸ್ಯೆಗಳಿಗೆ ಕಾರಣವೆಂಬುದು ಆತಿಥ್ಯ ವಲಯದ ಮಾತಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾದರೆ ಅದು ಕರ್ನಾಟಕ ಪ್ರವಾಸೋದ್ಯಮಕ್ಕೆ ದೊಡ್ಡ ಹಿನ್ನಡೆಯಾಗಬಹುದು ಎಂಬುದು ಆತಂಕಕ್ಕೆ ಕಾರಣವಾಗಿದೆ.