Saturday, November 22, 2025
Saturday, November 22, 2025

ಪ್ರತಿಭಟನೆ ನಡುವೆ ಮಣಿಪುರದಲ್ಲಿ ಸಂಗೈ ಹಬ್ಬಕ್ಕೆ ಚಾಲನೆ

ರಾಜ್ಯ ಸರ್ಕಾರ ಈ ಹಬ್ಬವನ್ನು ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಮತ್ತು ಮಣಿಪುರದ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಯೋಜಿಸುತ್ತದೆ. ಆದರೆ ಈ ವರ್ಷದ ಹಬ್ಬಕ್ಕೆ ಆರಂಭದಿಂದಲೇ ಪ್ರತಿಭಟನೆಗಳ ನೆರಳು ಕಾಣಿಸಿಕೊಂಡಿತು.

ಮಣಿಪುರದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿ ನಡೆಸುವ ಸಂಗೈ ಹಬ್ಬಕ್ಕೆ ಪ್ರತಿಭಟನೆಯ ನಡುವೆಯೂ ಇಂಪಾಲಿನಲ್ಲಿ ಚಾಲನೆ ಸಿಕ್ಕಿತು. ರಾಜ್ಯ ಸರಕಾರ ಈ ಹಬ್ಬವನ್ನು ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಮತ್ತು ಮಣಿಪುರದ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಯೋಜಿಸುತ್ತದೆ. ಆದರೆ ಈ ವರ್ಷದ ಹಬ್ಬಕ್ಕೆ ಆರಂಭದಿಂದಲೇ ಪ್ರತಿಭಟನೆಗಳ ನೆರಳು ಕಾಣಿಸಿಕೊಂಡಿತು.

Sangai festival


ಹಬ್ಬ ಪ್ರಾರಂಭವಾಗುತ್ತಿದ್ದಂತೆಯೇ COCOMI ಮತ್ತು IDP ಸಂಘಟನೆಗಳು ಹಬ್ಬವನ್ನು ಬಾಯ್‌ಕಾಟ್ ಮಾಡುವಂತೆ ಕರೆ ನೀಡಿದವು. ತಮ್ಮ ಮರುಪ್ರವೇಶ ಮತ್ತು ಪುನರ್ವಸತಿ ಪ್ರಕ್ರಿಯೆಗಳನ್ನು ಸರಕಾರವು ತ್ವರಿತವಾಗಿ ಪೂರ್ಣಗೊಳಿಸಬೇಕೆಂಬುದು ಪ್ರತಿಭಟನಾಕಾರರ ಮುಖ್ಯ ಬೇಡಿಕೆಯಾಗಿತ್ತು. ಹುತ್ತಾ ಕಂಜೈಬುಂಗ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಫೆಸ್ಟಿವಲ್‌ ನಡೆಯುತ್ತಿರುವ ವೇದಿಕೆಗೆ ಹತ್ತಲು ಯತ್ನಿಸಿದ ಕಾರಣ ಪೊಲೀಸರು ಟಿಯರ್ ಗ್ಯಾಸ್ ಉಪಯೋಗಿಸಿ ಅವರನ್ನು ತಡೆಯಬೇಕಾಯಿತು.

ಪ್ರತಿಭಟನೆಯ ಪರಿಣಾಮವಾಗಿ ಹಬ್ಬದ ಮೊದಲ ದಿನ ಸಾರ್ವಜನಿಕರ ಹಾಜರಾತಿ ಸಾಮಾನ್ಯಕ್ಕಿಂತ ಕಡಿಮೆ ಕಂಡುಬಂತು. ಹಬ್ಬದಲ್ಲಿ ಮಣಿಪುರದ ನೃತ್ಯ, ಹಸ್ತಶಿಲ್ಪ, ಸ್ಥಳೀಯ ಆಹಾರ, ಸಾಹಸ ಪ್ರವಾಸೋದ್ಯಮ ಪ್ರದರ್ಶನಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!