ಸಂಜೀವನಿ ಟ್ರಸ್ಟ್ ವತಿಯಿಂದ ಕಳೆದ ಎಂಟು ವರ್ಷಗಳಿಂದ ಸತತವಾಗಿ ಪಕ್ಷಿ ವೀಕ್ಷಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಸಂಜೀವನಿ ಬರ್ಡಿಂಗ್ ಟ್ರೇಲ್ ತಂಡ ಈ ವರ್ಷವೂ ಕುಂಭಾರವಾಡಾದ ಕಾಟೇಲ್ ಗ್ರಾಮದಲ್ಲಿ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ ಸುಮಾರು 75 ಜನ ಪಕ್ಷಿ ವೀಕ್ಷಣೆ ಮಾಡಿದ್ದಾರೆ.

ಜೋಯಿಡಾ ತಾಲೂಕು ಒಂದು ಅಘೋಷಿತ ಪಕ್ಷಿ ಧಾಮವಾಗಿದ್ದು, ಸುಮಾರು 50 ಜಾತಿಯ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಸಂಜೀವನಿ ಬರ್ಡಿಂಗ್ ಟ್ರೇಲ್ ಈವರೆಗೆ ಸುಮಾರು 350 ಜಾತಿಯ ಪಕ್ಷಿಗಳ ಚಿತ್ರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

Sultanpur National Park

ರಿವರ್ಟನ್, ಶ್ರೀಲಂಕನ್ ಫ್ರಾಗ್ ಮೌಥ್ ಮುಂತಾದ ಜಗತ್ತಿನ ಅನೇಕ ಅಪರೂಪ ಪ್ರಭೇದಗಳು, ಅವುಗಳ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಅವುಗಳ ವಲಸೆ ಕುರಿತು ಸಂಜೀವನಿ ಬರ್ಡಿಂಗ್ ಟ್ರೇಲ್ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮಾಹಿತಿ ಹಂಚಿಕೊಂಡಿದೆ. ವಿಶ್ವ ಪ್ರವಾಸೋದ್ಯಮದಲ್ಲಿ ವಿಶೇಷ ಆಕರ್ಷಣೆಯಾಗಿ ಹೊರಹೊಮ್ಮುತ್ತಿರುವ ಜೋಯಿಡಾ, ಮುಂದಿನ ದಿನಗಳಲ್ಲಿ ಪಕ್ಷಿ ವೀಕ್ಷಕರ ಪಾಲಿಗೆ ಹಾಟ್ ಸ್ಪಾಟ್ ಆಗುವುದಲ್ಲಿ ಅನುಮಾನವೇ ಇಲ್ಲ.