ಯುಎಇ ಇನ್ಮುಂದೆ ಲೋಕಲ್ ಫ್ರೆಂಡ್ಲಿ!
ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗಗಳನ್ನು ವಿದೇಶಿ ಕಾರ್ಮಿಕರಿಗೆ ಅಥವಾ ಹೊರಗುತ್ತಿಗೆ ಸಂಸ್ಥೆಗಳಿಗೆ ಹಸ್ತಾಂತರಿಸುವುದನ್ನು ನಿಷೇಧಿಸುವ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರವಾಸೋದ್ಯಮ ಉದ್ಯೋಗಗಳನ್ನು ಕೇವಲ ಸಚಿವಾಲಯದಿಂದ ಪರವಾನಗಿ ಪಡೆದ ಸಂಸ್ಥೆಗಳು ಅಥವಾ ಸೌದಿ ನಾಗರಿಕರನ್ನು ನೇಮಿಸಲು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕವೇ ನಿರ್ವಹಿಸಬಹುದಾಗಿದೆ.
ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗಗಳನ್ನು ವಿದೇಶಿ ಕಾರ್ಮಿಕರಿಗೆ ಅಥವಾ ಹೊರಗುತ್ತಿಗೆ ಸಂಸ್ಥೆಗಳಿಗೆ ಹಸ್ತಾಂತರಿಸುವುದನ್ನು ನಿಷೇಧಿಸುವ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರವಾಸೋದ್ಯಮ ಉದ್ಯೋಗಗಳನ್ನು ಕೇವಲ ಸಚಿವಾಲಯದಿಂದ ಪರವಾನಗಿ ಪಡೆದ ಸಂಸ್ಥೆಗಳು ಅಥವಾ ಸೌದಿ ನಾಗರಿಕರನ್ನು ನೇಮಿಸಲು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕವೇ ನಿರ್ವಹಿಸಬಹುದಾಗಿದೆ. ಈ ನಿಯಮಗಳು ದೇಶದ ಎಲ್ಲಾ ಪ್ರವಾಸೋದ್ಯಮ ಸಂಬಂಧಿತ ಸಂಸ್ಥೆಗಳಿಗೂ ಅನ್ವಯಿಸುತ್ತವೆ.

ಸಚಿವಾಲಯದ ಪ್ರಕಾರ, ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವುದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೌದಿ ಪ್ರತಿಭೆಯನ್ನು ಬೆಳೆಸುವುದು ಮತ್ತು ಸೇವಾ ಗುಣಮಟ್ಟವನ್ನು ಉತ್ತಮಗೊಳಿಸುವುದು ಸೇರಿದಂತೆ ಅಣೇಕ ಅಂಶಗಳು ಈ ಬದಲಾವಣೆಗಳೀಗೆ ಕಾರಣವಾಗಿದೆ.

ಇನ್ನುಮುಂದೆ, ಪ್ರವಾಸೋದ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸ ಆರಂಭಿಸುವ ಮೊದಲು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದೊಂದಿಗೆ ಕಡ್ಡಾಯವಾಗಿ ನೋಂದಾಯಿಸಬೇಕು. ತಾತ್ಕಾಲಿಕ, ಗುತ್ತಿಗೆ ಅಥವಾ ಹಂಗಾಮಿ ಉದ್ಯೋಗಿಗಳ ಒಪ್ಪಂದಗಳನ್ನು ‘Ajeer’ ವೇದಿಕೆ ಅಥವಾ ಅನುಮೋದಿತ ವ್ಯವಸ್ಥೆಗಳ ಮೂಲಕವೇ ಪ್ರಕ್ರಿಯೆಗೊಳಿಸಬೇಕಾಗಿದೆ. ಅಲ್ಲದೆ, ಹಲವು ಶಾಖೆಗಳನ್ನು ನಡೆಸುವ ಕಂಪನಿಗಳು ಪ್ರತಿ ಶಾಖೆಯ ಪರವಾನಗಿಯ ಅಡಿಯಲ್ಲಿ ಉದ್ಯೋಗಿಗಳನ್ನು ಪ್ರತ್ಯೇಕವಾಗಿ ನೋಂದಾಯಿಸಬೇಕು.
ಇದರ ಜತೆಗೆ, ಎಲ್ಲಾ ಆತಿಥ್ಯ (ಹಾಸ್ಪಿಟಾಲಿಟಿ) ಸಂಸ್ಥೆಗಳಲ್ಲಿ ಕಾರ್ಯನಿರತ ಸಮಯದಲ್ಲಿ ಕನಿಷ್ಠ ಒಬ್ಬ ಸೌದಿ ರಿಸೆಪ್ಶನಿಸ್ಟ್ ಹಾಜರಿರಬೇಕು ಎಂಬ ನಿಯಮವನ್ನೂ ಜಾರಿಗೊಳಿಸಲಾಗಿದೆ.
ಈ ನೀತಿಗಳ ಪಾಲನೆಗೆ ಕಡ್ಡಾಯವಾಗಿ ಗಮನ ಹರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವಾಲಯ ಸ್ಪಷ್ಟಪಡಿಸಿದ್ದು, ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದೆ.