ಥೈಲ್ಯಾಂಡ್‌ಗೆ ಮಲೇಷ್ಯಾ ಪ್ರವಾಸಿಗರ ಭೇಟಿ ರದ್ದು?
ಮಲೇಶ್ಯಾದ ಪ್ರಮುಖ ಮಾಧ್ಯಮಗಳು ಹಾಟ್ ಯೈ ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಮಲೇಶ್ಯಾ ಪ್ರವಾಸಿಗರ ಕುರಿತು ನಿರಂತರ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಈ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಜನರು ಆತಂಕಕ್ಕೀಡಾಗುವ ರೀತಿ ಮಾಡಿದೆ.
ಥೈಲ್ಯಾಂಡ್‌ನ ದಕ್ಷಿಣ ಭಾಗದಲ್ಲಿ, ವಿಶೇಷವಾಗಿ ಹಾಟ್ ಯೈ ಹಾಗೂ ಸಂಗ್ಕ್ಲಾ ಜಿಲ್ಲೆಗಳಲ್ಲಿ ಉಂಟಾಗಿರುವ ಭಾರೀ ಪ್ರವಾಹ ಪರಿಸ್ಥಿತಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿದೆ. ಪ್ರವಾಹದಿಂದ ಪ್ರವಾಸಿಗರ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ ಎಂದು ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರ (TAT) ತಿಳಿಸಿದೆ.
TAT ಗವರ್ನರ್ ಥಪನಿ ಕಿಯಟ್‌ಫೈಬೂಲ್ ಅವರ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಸುಮಾರು 15 ಮಲೇಶ್ಯಾ ಪ್ರವಾಸ ಸಂಸ್ಥೆಗಳು, ಟೂರ್ ಆಪರೇಟರ್‌ಗಳು ಮತ್ತು ಪ್ರವಾಸಿ ಏಜೆನ್ಸಿಗಳು ದಕ್ಷಿಣ ಥೈಲ್ಯಾಂಡ್‌ನಲ್ಲಿಯ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು TAT ಅಧಿಕಾರಿಗಳನ್ನು ಸಂಪರ್ಕಿಸಿದ್ದವು. ವಿಶೇಷವಾಗಿ ಹಾಟ್ ಯೈ ಜಿಲ್ಲೆಯಲ್ಲಿ ಪ್ರವಾಹದ ಗಂಭೀರತೆ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ.

ನಿರಂತರ ಮಳೆ, ವಾಹನ ಸಂಚಾರದ ಅಡಚಣೆ ಮತ್ತು ಸುರಕ್ಷತಾ ಸಮಸ್ಯೆಗಳ ಹಿನ್ನೆಲೆಯಲ್ಲಿ, ಈ ವಾರ ಮಲೇಶ್ಯಾದಿಂದ ದಕ್ಷಿಣ ಥೈಲ್ಯಾಂಡ್‌ಗೆ ನಿಗದಿಯಾಗಿದ್ದ ಎಲ್ಲಾ ಪ್ರವಾಸಗಳು ರದ್ದಾಗುವ ಸಾಧ್ಯತೆ ಇದೆ ಎಂದು TAT ಅಂದಾಜಿಸಿದೆ.
ಮಲೇಶ್ಯಾದ ಪ್ರಮುಖ ಮಾಧ್ಯಮಗಳು ಹಾಟ್ ಯೈ ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಮಲೇಶ್ಯಾ ಪ್ರವಾಸಿಗರ ಕುರಿತು ನಿರಂತರ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಈ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಜನರು ಆತಂಕಕ್ಕೀಡಾಗುವ ರೀತಿ ಮಾಡಿದೆ.
ಇದೇ ಸಂದರ್ಭದಲ್ಲಿ, ಮಲೇಶ್ಯಾ ಸರ್ಕಾರವು ತನ್ನ ನಾಗರಿಕರಿಗೆ ಅಧಿಕೃತ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದು, ನಾಗರಿಕರಿಗೆ ಸದ್ಯದ ಮಟ್ಟಿಗೆ ದಕ್ಷಿಣ ಥೈಲ್ಯಾಂಡ್ ಪ್ರವಾಸ ಕೈಗೊಳ್ಳದಂತೆ ಸಲಹೆ ನೀಡಿದೆ. ಈ ಕ್ರಮದ ಪರಿಣಾಮವಾಗಿ ಥೈಲ್ಯಾಂಡ್ ಪ್ರವಾಸೋದ್ಯಮದ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ.