ಶ್ರೀನಗರದಲ್ಲಿ ATOAI ನ 17ನೇ ವಾರ್ಷಿಕ ಸಮ್ಮೇಳನ
ಈ ವರ್ಷ ಸಮ್ಮೇಳನದ ಪ್ರಮುಖ ಚರ್ಚೆಯಾಗಿ “Indian Adventure Tourism: Safe, Sustainable & Resilient” ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ. ಸುರಕ್ಷಿತ, ಪರಿಸರ ಸ್ನೇಹಿ ಹಾಗೂ ದೀರ್ಘಕಾಲೀನ ಸಾಹಸ ಪ್ರವಾಸೋದ್ಯಮವನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆಯಲಿವೆ.
ಭಾರತದ ಸಾಹಸ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲು Adventure Tour Operators Association of India (ATOAI) ತನ್ನ 17ನೇ ವಾರ್ಷಿಕ ಸಮ್ಮೇಳನವನ್ನು 2025ರ ಡಿಸೆಂಬರ್ 17 ರಿಂದ 20 ರವರೆಗೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಆಯೋಜಿಸಲು ನಿರ್ಧರಿಸಿದೆ. ದೇಶದ ಸಾಹಸ ಪ್ರವಾಸೋದ್ಯಮ ವಲಯದ ಪರಿಣಿತರು, ಸಂಚಾಲಕರು ಹಾಗೂ ನೀತಿನಿರ್ಮಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ವರ್ಷ ಸಮ್ಮೇಳನದ ಪ್ರಮುಖ ಚರ್ಚೆಯಾಗಿ “Indian Adventure Tourism: Safe, Sustainable & Resilient” ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ. ಸುರಕ್ಷಿತ, ಪರಿಸರ ಸ್ನೇಹಿ ಹಾಗೂ ದೀರ್ಘಕಾಲೀನ ಸಾಹಸ ಪ್ರವಾಸೋದ್ಯಮವನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆಯಲಿವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭದ್ರತಾ ಮಾನದಂಡಗಳು, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳ ಪಾತ್ರ ಪ್ರಮುಖ ವಿಷಯಗಳಾಗಿವೆ.
ಸಮ್ಮೇಳನದ ಭಾಗವಾಗಿ ಪ್ರಮುಖ ತಜ್ಞರು ನೀಡುವ ಉಪನ್ಯಾಸಗಳು, ಪ್ಯಾನೆಲ್ ಚರ್ಚೆಗಳು, ವರ್ಕ್‌ಶಾಪ್‌ಗಳು ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನ ಮತ್ತು ಯೋಜನೆಗಳ ಪ್ರದರ್ಶನಗಳು ನಡೆಯಲಿವೆ. ಜತೆಗೆ, ಅಡ್ವೆಂಚರ್ ಟೂರಿಸಂನಲ್ಲಿ ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ Industry Awards ವಿತರಿಸಲಾಗುತ್ತಿದೆ.