ವಾರಾಂತ್ಯ ಪ್ರವಾಸೋದ್ಯಮದ ಉತ್ತೇಜನಕ್ಕೆ ತೆಲಂಗಾಣ ಸಿದ್ಧ
ಪ್ರವಾಸೋದ್ಯಮ ಪ್ರಚಾರದ ಅಂಗವಾಗಿ ರಾಜ್ಯ ಸರಕಾರ ಮತ್ತು FTCCI ಒಟ್ಟಾಗಿ “Hyderabad Junction Jewels” ಫೋಟೋ ಸ್ಪರ್ಧೆ ಹಾಗೂ “Weekend Getaways of Hyderabad” ರೀಲ್ಸ್ ಸ್ಪರ್ಧೆಗಳನ್ನು ಆರಂಭಿಸಿವೆ. ಪ್ರವಾಸಿಗರು ಹೈದರಾಬಾದ್ ಸುತ್ತಮುತ್ತಲಿನ ಅಪರಿಚಿತ ಸರೋವರಗಳು, ಪ್ರಕೃತಿ ಸ್ಥಳಗಳು, ಹೆರಿಟೇಜ್ ಸಮುಚ್ಚಯಗಳು ಮತ್ತು ಹಳ್ಳಿಗಳ ಸಂಸ್ಕೃತಿಯನ್ನು ಒಳಗೊಂಡ 60 ಸೆಕೆಂಡ್‌ಗಳ ವಿಡಿಯೋಗಳನ್ನು ರೀಲ್ಸ್‌ಗಳ ರೂಪದಲ್ಲಿ ಸಲ್ಲಿಸಬಹುದು.
ತೆಲಂಗಾಣ ಸರಕಾರವು ರಾಜ್ಯದ ಪ್ರವಾಸೋದ್ಯಮ ವಲಯಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ವಾರಾಂತ್ಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸುಮಾರು 150 ʼವೀಕೆಂಡ್ ಗೆಟ್-ಅವೆʼ ಸ್ಥಳಗಳನ್ನು ಆಯ್ಕೆಮಾಡಿ ಅವುಗಳನ್ನು ಪ್ರವಾಸೋದ್ಯಮ ಸ್ನೇಹಿ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸುವ ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹೈದರಾಬಾದ್‌ನ ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿರುವ 2.5 ಮಿಲಿಯನ್ ಜನ, ರಾಜ್ಯದ ʼಶಾರ್ಟ್ ಟ್ರಿಪ್ʼ ಪ್ರಿಯರನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ.

ಈ ಯೋಜನೆಯನ್ನು ಜಾರಿಗೆ ತರಲು ತೆಲಂಗಾಣ ಸರಕಾರವು, ತೆಲಂಗಾಣ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (TGTDC), FTCCI, NITHM ಮತ್ತು GHMC ಮುಂತಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ತೆಲಂಗಾಣ ರಾಜ್ಯ ಟೂರಿಸಂ ವಿಭಾಗದ ವಿಶೇಷ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ಅವರು ಮಾತನಾಡಿ- “ಪ್ರತಿಯೊಂದು ಪ್ರವಾಸಿ ತಾಣವನ್ನು ಕೇವಲ ಒಂದು ಕಾರಣಕ್ಕೆ ಸೀಮಿತವಾಗಿರಿಸದೆ, ʼಮಲ್ಟಿ-ಲೇಯರ್ಡ್ ಎಕ್ಸ್‌ಪೀರಿಯನ್ಸ್ʼ ನೀಡುವಂತೆಯೂ ರೂಪಿಸಲಾಗುತ್ತಿದೆ ಮತ್ತು ಸ್ಥಳೀಯ ಆಹಾರ, ಹಸ್ತಕಲೆ, ಸ್ಥಳೀಯ ಕ್ರಿಯಾಕಲಾಪಗಳು, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಸೂಚಿಗಳನ್ನೂ ರೂಪಿಸಲಾಗುತ್ತಿದೆ” ಎಂದು ಹೇಳಿದರು.
ಪ್ರವಾಸೋದ್ಯಮ ಪ್ರಚಾರದ ಅಂಗವಾಗಿ ರಾಜ್ಯ ಸರಕಾರ ಮತ್ತು FTCCI ಒಟ್ಟಾಗಿ “Hyderabad Junction Jewels” ಫೊಟೋ ಸ್ಪರ್ಧೆ ಹಾಗೂ “Weekend Getaways of Hyderabad” ರೀಲ್ಸ್ ಸ್ಪರ್ಧೆಗಳನ್ನು ಆರಂಭಿಸಿವೆ. ಪ್ರವಾಸಿಗರು ಹೈದರಾಬಾದ್ ಸುತ್ತಮುತ್ತಲಿನ ಅಪರಿಚಿತ ಸರೋವರಗಳು, ಪ್ರಕೃತಿ ಸ್ಥಳಗಳು, ಹೆರಿಟೇಜ್ ಸಮುಚ್ಚಯಗಳು ಮತ್ತು ಹಳ್ಳಿಗಳ ಸಂಸ್ಕೃತಿಯನ್ನು ಒಳಗೊಂಡ 60 ಸೆಕೆಂಡ್‌ಗಳ ವಿಡಿಯೋಗಳನ್ನು ರೀಲ್ಸ್‌ಗಳ ರೂಪದಲ್ಲಿ ಸಲ್ಲಿಸಬಹುದು. ಇದರ ಮೂಲಕ, ಹೊಸ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವುದು ಮತ್ತು ಸ್ಥಳೀಯ ಪ್ರವಾಸೋದ್ಯಮವನ್ನು ಬಲಪಡಿಸುವುದು ಸರಕಾರದ ಉದ್ದೇಶವಾಗಿದೆ.