ಟೂರಿಸ್ಟ್ ವೀಸಾ ನಿಯಮಗಳನ್ನು ಕಠಿಣಗೊಳಿಸಿದ ಥೈಲ್ಯಾಂಡ್
ಹೊಸ ನಿಯಮಗಳಡಿ, ‘ವೀಸಾ ರನ್’- ಅಂದರೆ ಪ್ರವಾಸಿ ವೀಸಾದ ಅವಧಿ ಮುಗಿಯುವ ಮುನ್ನ ದೇಶ ತೊರೆದು ಮತ್ತೆ ಪ್ರವೇಶಿಸುವ ವಿಧಾನ ಬಳಸುವವರ ಮೇಲೆ ಸರಕಾರ ವಿಶೇಷ ನಿಗಾವಹಿಸಲಿದೆ. ನಿರಂತರವಾಗಿ ಮತ್ತು ಕಾರಣವಿಲ್ಲದೇ ಮರುಪ್ರವೇಶಕ್ಕೆ ಪ್ರಯತ್ನಿಸುವವರಿಗೆ ಪ್ರವೇಶ ನಿರಾಕರಿಸುವ ಅಧಿಕಾರ ಈಗಿನಿಂದ ಗಡಿಪಾಲಕರಿಗೆ ನೀಡಲಾಗಿದೆ.
ಪ್ರವಾಸಿಗರ ಸುರಕ್ಷತೆಯನ್ನು ಕಾಪಾಡಲು ಮತ್ತು ಅಕ್ರಮ ಚಟುವಟಿಕಗಳನ್ನು ತಡೆಗಟ್ಟಲು ಥೈಲ್ಯಾಂಡ್ ಸರಕಾರ ಟೂರಿಸ್ಟ್ ವೀಸಾ ನಿಯಮಗಳನ್ನು ಕಠಿಣಗೊಳಿಸಿದೆ. ಈ ನಿಟ್ಟಿನಲ್ಲಿ, ಪ್ರವಾಸಿಗರಿಗೆ ನೀಡಲಾಗುತ್ತಿರುವ ವೀಸಾ-ಮುಕ್ತ ಪ್ರವೇಶದ ಕಾರ್ಯಸೂಚಿಗಳ ಮೇಲೆ ಕೆಲವು ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇಮಿಗ್ರೇಶನ್ ಬ್ಯೂರೋ ಬಿಡುಗಡೆ ಮಾಡಿದ ಮಾರ್ಗಸೂಚಿಗಳ ಪ್ರಕಾರ, ದೇಶ ಪ್ರವೇಶಿಸುವ ವಿದೇಶಿಗರ ಕಟ್ಟುನಿಟ್ಟಾದ ದಾಖಲೆ ಪರಿಶೀಲನೆ ಮತ್ತು ಗಡಿಯಲ್ಲಿ ಕಠಿಣ ಸ್ಕ್ರೀನಿಂಗ್ ನಡೆಯಲಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಹಲವು ವಿದೇಶಿಗರು “ಟೂರಿಸ್ಟ್ ವೀಸಾ” ಅಥವಾ “ವೀಸಾ ಎಕ್ಸೆಂಪ್ಷನ್” ವ್ಯವಸ್ಥೆಯನ್ನು ಬಳಸಿಕೊಂಡು, ಪುನಃ-ಪುನಃ ದೇಶಕ್ಕೆ ಬಂದು ದೀರ್ಘಕಾಲ ವಾಸಿಸುತ್ತಿರುವುದು ಕಂಡುಬಂದಿದೆ. ಈ ದುರುಪಯೋಗದಿಂದ ಕೆಲವು ಗುಂಪುಗಳು ಥೈಲ್ಯಾಂಡ್‌ನಲ್ಲಿ ಸೈಬರ್ ವಂಚನೆ, ಹಣಕಾಸು ಕಳವಿನಂಥ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಈ ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಹೊಸ ನಿಯಮಗಳಡಿ, ‘ವೀಸಾ ರನ್’ — ಅಂದರೆ ಪ್ರವಾಸಿ ವೀಸಾದ ಅವಧಿ ಮುಗಿಯುವ ಮುನ್ನ ದೇಶ ತೊರೆದು ಮತ್ತೆ ಪ್ರವೇಶಿಸುವ ವಿಧಾನ ಬಳಸುವವರ ಮೇಲೆ ಸರಕಾರ ವಿಶೇಷ ನಿಗಾವಹಿಸಲಿದೆ. ನಿರಂತರವಾಗಿ ಮತ್ತು ಕಾರಣವಿಲ್ಲದೇ ಮರುಪ್ರವೇಶಕ್ಕೆ ಪ್ರಯತ್ನಿಸುವವರಿಗೆ ಪ್ರವೇಶ ನಿರಾಕರಿಸುವ ಅಧಿಕಾರ ಈಗಿನಿಂದ ಗಡಿಪಾಲಕರಿಗೆ ನೀಡಲಾಗಿದೆ.