Monday, April 6, 2026
Monday, April 6, 2026

ಹಿಮಾಚಲದಲ್ಲಿ ಮ್ಯೂಸಿಕಲ್ ಫೌಂಟೇನ್

ಹಿಮಾಚಲ ಸರಕಾರವು ಕಾಂಗ್ರಾವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲು 180 ಕೋಟಿ ರು.ಗಳ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ.

ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕಾಂಗ್ರಾ ಜಿಲ್ಲೆಯಲ್ಲಿ ಒಂದು ಬೃಹತ್ ಪಂಚತಾರಾ ಹೊಟೇಲ್ ಯೋಜನೆಯನ್ನು ಘೋಷಿಸಿದೆ. ವಿಶೇಷ ಎಂದರೆ ಇದರಲ್ಲಿ 'ಮ್ಯೂಸಿಕಲ್ ಫೌಂಟೇನ್' ಇದೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಗ್ರೋಟಾ ಬಗ್ವಾನ್ ಬಳಿಯ ಬನೇರ್ ಖಾಡ್ ಎಂಬ ಸುಂದರ ಪ್ರದೇಶದಲ್ಲಿ ಈ ಹೊಟೇಲ್ ನಿರ್ಮಾಣವಾಗಲಿದೆ. ಸುಮಾರು 180 ಕೋಟಿ ರುಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಇಂಥ ಮಾದರಿಯ ಭಾರತದ ಮೊದಲ ಅತಿದೊಡ್ಡ ಮ್ಯೂಸಿಕಲ್ ಫೌಂಟೇನ್ ಆಗಿರಲಿದೆ.

ಪ್ರವಾಸಿಗರ ಸುಗಮ ಸಂಚಾರಕ್ಕಾಗಿ ಕಾಂಗ್ರಾ ವಿಮಾನ ನಿಲ್ದಾಣವನ್ನು ಸುಮಾರು 2000 ಕೋಟಿ ರುಪಾಯಿ ವೆಚ್ಚದಲ್ಲಿ ವಿಸ್ತರಿಸಲಾಗುತ್ತಿದೆ. ಈ ಹೋಟೆಲ್ ಮತ್ತು ವಿಮಾನ ನಿಲ್ದಾಣದ ಅಭಿವೃದ್ಧಿಯು ಕಾಂಗ್ರಾವನ್ನು ಹಿಮಾಚಲದ 'ಪ್ರವಾಸೋದ್ಯಮ ರಾಜಧಾನಿ'ಯನ್ನಾಗಿ ಮಾಡುವ ಸರಕಾರದ ಗುರಿಯ ಭಾಗವಾಗಿದೆ.

ಪ್ರವಾಸಿಗರಿಗೆ ಉತ್ತಮ ಸೇವೆ ನೀಡಲು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ಅನ್ನು ಆರಂಭಿಸಲು ನಿರ್ಧರಿಸಲಾಗಿದೆ. ಹೊಟೇಲ್‌ಗಳ ನಿರ್ವಹಣೆ ಮತ್ತು ಪಾರದರ್ಶಕತೆಯನ್ನು ಪರಿಶೀಲಿಸಲು ವಿಶೇಷ 'ಫ್ಲೈಯಿಂಗ್ ಸ್ಕ್ವಾಡ್' ತಂಡವನ್ನು ಸಹ ರಚಿಸಲಾಗುತ್ತಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ