TOURISE 2025 ಶೃಂಗಸಭೆ ವಿಜೃಂಭಣೆಯಿಂದ ಆರಂಭ
ಕಾರ್ಯಕ್ರಮದಲ್ಲಿ ತಾನ್ಮೇಯಾ ಕ್ಯಾಪಿಟಲ್ ಮತ್ತು ವಾದಿ ಜೆಡ್ಡಾ ಕಂಪನಿ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದಡಿ, ಸೌದಿಯಲ್ಲಿ ಆತಿಥ್ಯ, ಕುಲಿನರಿ ಕಲೆ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಪ್ರಕಟಿಸಲಾಯಿತು. ಹಲವು ಪ್ರಮುಖ ಜಾಗತಿಕ ಮಟ್ಟದ ಅಕಾಡೆಮಿಗಳೊಂದಿಗೆ ಸಹಭಾಗಿತ್ವದ ಮೂಲಕ, ದೇಶದ ಯುವಕರಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ಜೆಡ್ಡಾದಲ್ಲಿ ನಡೆಯುತ್ತಿರುವ TOURISE 2025 ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಶೃಂಗಸಭೆಯನ್ನು ಸೌದಿ ಅರೇಬಿಯಾದ ಪ್ರವಾಸೋದ್ಯಮ ಮಂತ್ರಿ ಅಹ್ಮದ್ ಅಲ್-ಖತೀಬ್ ಅವರು ಉದ್ಘಾಟಿಸಿದರು. ವಿಶ್ವದ ಪ್ರಮುಖ ಹೂಡಿಕೆದಾರರು, ಪ್ರವಾಸೋದ್ಯಮ ಸಂಸ್ಥೆಗಳು, ಅತಿಥ್ಯ ಕ್ಷೇತ್ರದ ಗಣ್ಯರು ಒಂದೆಡೆ ಸೇರಲು ಈ ಶೃಂಗಸಭೆ ಪ್ರಮುಖ ವೇದಿಕೆಯಾಗಿದೆ.
ಕಾರ್ಯಕ್ರಮದಲ್ಲಿ ತಾನ್ಮೇಯಾ ಕ್ಯಾಪಿಟಲ್ ಮತ್ತು ವಾದಿ ಜೆಡ್ಡಾ ಕಂಪನಿ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದಡಿ, ಸೌದಿಯಲ್ಲಿ ಆತಿಥ್ಯ, ಕುಲಿನರಿ ಕಲೆ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಪ್ರಕಟಿಸಲಾಯಿತು. ಹಲವು ಪ್ರಮುಖ ಜಾಗತಿಕ ಮಟ್ಟದ ಅಕಾಡೆಮಿಗಳೊಂದಿಗೆ ಸಹಭಾಗಿತ್ವದ ಮೂಲಕ, ದೇಶದ ಯುವಕರಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡುವ ಗುರಿ ಹೊಂದಲಾಗಿದೆ.

Vision 2030 ಎಂಬ ಯೋಜನೆ ಅಡಿಯಲ್ಲಿ, ಸ್ಥಳೀಯ ಮಾನವ ಸಂಪನ್ಮೂಲವನ್ನು ಬಲಪಡಿಸುವುದು, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಆತಿಥ್ಯ ಕ್ಷೇತ್ರದ ಗುಣಮಟ್ಟವನ್ನು ಸುಧಾರಿಸುವುದು ಈ ಒಪ್ಪಂದದ ಪ್ರಮುಖ ಅಂಶವಾಗಿದೆ. ಕಾರ್ಯಕ್ರಮದ ಮೊದಲ ದಿನವೇ 113 ಬಿಲಿಯನ್ ಡಾಲರ್‌ಗಳ ಹೂಡಿಕೆ ಹರಿದು ಬಂದಿರುವುದು ವಿಶೇಷ ಎಂದು ಆಯೋಜಕರು ತಿಳಿಸಿದರು. ಈ ಹೂಡಿಕೆಯನ್ನು ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗೆ, ನೂತನ ತಂತ್ರಜ್ಞಾನದ ಅಳವಡಿಕೆಗೆ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಉಪಯೋಗಿಸಲು ನಿರ್ಧರಿಸಲಾಗಿದೆ.
ಈ ಶೃಂಗಸಭೆಯಲ್ಲಿ ಪರಿಚಯಿಸಲಾದ “Agentic Tourism” ಎನ್ನುವ ಹೊಸ ಪರಿಕಲ್ಪನೆ ವಿಶೇಷ ಗಮನ ಸೆಳೆಯಿತು. ಪ್ರವಾಸಿಗರ ಅನುಭವವನ್ನು ಸ್ಮಾರ್ಟ್ ತಂತ್ರಜ್ಞಾನ, ಡೇಟಾ, ಮತ್ತು ಪರ್ಸನಲೈಸ್ಡ್ ಸೇವೆಗಳ ಮೂಲಕ ಮತ್ತಷ್ಟು ಸುಧಾರಿಸಲು ಈ ಮಾದರಿ ಕೆಲಸ ಮಾಡಲಿದೆ.