ಸಿಕ್ಕಿಂನಲ್ಲಿ ವಿಂಟರ್ ಟೂರಿಸಂ ಹವಾ!
ಅಧಿಕೃತ ಮಾಹಿತಿಯಂತೆ, ಒಂದೇ ದಿನದಲ್ಲಿ ಒಟ್ಟು 6,080 ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದರಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ದೇಶಿ ಹಾಗೂ ಕೆಲ ವಿದೇಶಿ ಪ್ರವಾಸಿಗರೂ ಸೇರಿದ್ದಾರೆ. ಪ್ರವಾಸಿಗರನ್ನು ಕರೆದೊಯ್ಯಲು 1,500ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಸಂಚರಿಸಿರುವುದಾಗಿ ವರದಿ ತಿಳಿಸಿದೆ.
ಸಿಕ್ಕಿಂ ರಾಜ್ಯದಲ್ಲಿ ವಿಂಟರ್ ಆರಂಭವಾಗುತ್ತಿದ್ದಂತೆಯೇ ರಾಜ್ಯಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಪ್ರಸಿದ್ಧ ನಾಥುಲಾ ದಾರ, ತ್ಸೊಮ್ಗೊ ಸರೋವರ ಹಾಗೂ ಬಾಬಾ ಮಂದಿರಕ್ಕೆ ಒಂದೇ ದಿನದಲ್ಲಿ 6,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಮಾಹಿತಿಯಂತೆ, ಒಂದೇ ದಿನದಲ್ಲಿ ಒಟ್ಟು 6,080 ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದರಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ದೇಶಿ ಹಾಗೂ ಕೆಲ ವಿದೇಶಿ ಪ್ರವಾಸಿಗರೂ ಸೇರಿದ್ದಾರೆ. ಪ್ರವಾಸಿಗರನ್ನು ಕರೆದೊಯ್ಯಲು 1,500ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಸಂಚರಿಸಿರುವುದಾಗಿ ವರದಿ ತಿಳಿಸಿದೆ.

ಉತ್ತರ ಸಿಕ್ಕಿಂ ಸೇರಿದಂತೆ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಹೊಟೇಲ್‌ಗಳು ಹಾಗೂ ಹೋಂ ಸ್ಟೇಗಳು ಬಹುತೇಕ ಸಂಪೂರ್ಣ ಬುಕ್ ಆಗಿವೆ. ಸ್ನೋಫಾಲ್, ಹಿಮಾಚ್ಛಾದಿತ ಪರ್ವತಗಳು ಮತ್ತು ಪ್ರಕೃತಿಯ ಸೌಂದರ್ಯವೇ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಸ್ಥಳೀಯ ಆಡಳಿತವು ಸಂಚಾರ ವ್ಯವಸ್ಥೆ ಸುಗಮವಾಗಿಸಲು ಹಾಗೂ ಭದ್ರತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಉತ್ತರ ಸಿಕ್ಕಿಂ ಕಡೆ ಪ್ರಯಾಣಿಸುವವರು ಮುಂಚಿತವಾಗಿಯೇ ವಾಸ್ತವ್ಯ ವ್ಯವಸ್ಥೆ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.