ಪಲ್ಲಾಸ್ ಬೆಕ್ಕು ಕ್ಯಾಮೆರಾ ಕಣ್ಣಲ್ಲಿ ಸೆರೆ
ಮನುಲ್, ಹಿಮಬೆಕ್ಕು ಎಂದೂ ಕರೆಯಲಾಗುವ ಪಲ್ಲಾಸ್ ಬೆಕ್ಕು ಅರುಣಾಚಲ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 4200 ಮೀಟರ್‌ಗಳಷ್ಟು ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಇದೇ ಬಾರಿಗೆ ಕಾಣಿಸಿಕೊಂಡಿದೆ.
ಅರುಣಾಚಲ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 4200 ಮೀಟರ್‌ಗಳಷ್ಟು ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಇದೇ ಬಾರಿಗೆ ಪಲ್ಲಾಸ್ ಬೆಕ್ಕು (ಒಟೊಕೊಲೊಬಸ್ ಮನುಲ್) ಕಾಣಿಸಿಕೊಂಡಿದ್ದು, ವನ್ಯಮೃಗಗಳ ಸಮೀಕ್ಷಾ ತಂಡದ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ. ಇದನ್ನು ಮನುಲ್, ಹಿಮಬೆಕ್ಕು ಎಂದೂ ಕರೆಯಲಾಗುತ್ತದೆ. ಉದ್ದವಾದ ಮತ್ತು ದಟ್ಟವಾದ ತಿಳಿ ಬೂದು ಬಣ್ಣದ ತುಪ್ಪಳ ಹೊಂದಿರುತ್ತದೆ. ದುಂಡಾದ ಕಿವಿಗಳಿವೆ, ದೇಹದ ಉದ್ದ 46ರಿಂದ 65 ಸೆಂ.ಮೀ ಇರುತ್ತದೆ. 31 ಸೆಂ.ಮೀ. ಉದ್ದದ ಪೊದೆಯಂತಹ ಬಾಲವಿರುತ್ತದೆ. ಶೀತ ಭೂಖಂಡದ ಹವಾಗುಣಕ್ಕೆ ಹೊಂದಿಕೊಂಡು ಬದುಕಬಲ್ಲದಾಗಿದೆ. 2024 ಸೆಪ್ಟೆಂಬರ್‌ನಲ್ಲಿ ಹಿಮಾಲಯದ 2000 ಚದರ ಅಡಿ ಕಿಮೀ.ಎತ್ತರದಲ್ಲಿ 83 ಕಡೆ 136 ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.