ಇಂಡಿಯಾ ಟೂರಿಸಂಗೆ ನೂತನವಾಗಿ ನಿರ್ದೇಶಕಿಯಾಗಿ ಸಂಧ್ಯಾ ಹರಿದಾಸ್
ಕೇಂದ್ರ ಸರಕಾರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ SASCI, Hospitality Training, Tourism Destination Development Projects ಸೇರಿದಂತೆ ಹಲವಾರು ಮಹತ್ವದ ಯೋಜನೆಗಳನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)ಯ ವೇದಿಕೆಯಲ್ಲಿ ಪರಿಚಯಿಸಿ, ಅವುಗಳ ಬಗ್ಗೆ ಉದ್ಯಮಿಗಳಿಗೆ ಅರಿವು ಮೂಡಿಸುವ ಕೆಲಸವನ್ನು ಕೈಗೊಳ್ಳುವಂತೆ ಇಂಡಿಯಾ ಟೂರಿಸಂಗೆ ನೂತನ ನಿರ್ದೇಶಕಿ ಸಂಧ್ಯಾ ಹರಿದಾಸ್ ಅವರನ್ನು ಮನವಿ ಮಾಡಲಾಯಿತು.
ಇಂಡಿಯಾ ಟೂರಿಸಂಗೆ ನೂತನವಾಗಿ ನೇಮಕಗೊಂಡಿರುವ ಶ್ರೀಮತಿ ಸಂಧ್ಯಾ ಹರಿದಾಸ್ ಅವರು ಇಂದು ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)ಯ ಪ್ರವಾಸೋದ್ಯಮ ವಿಭಾಗದ ಪರವಾಗಿ ಅವರಿಗೆ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ, ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತ ಸರಕಾರದ ವತಿಯಿಂದ ಕರ್ನಾಟಕದಲ್ಲಿ ರೂಪುಗೊಳ್ಳುವ ವಿವಿಧ ಪ್ರವಾಸೋದ್ಯಮ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಅಭಿಯಾನಗಳನ್ನು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘವು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲು ಸಿದ್ಧವಿದ್ದು, ಕೇಂದ್ರ ಸರಕಾರದ ಪ್ರವಾಸೋದ್ಯಮ ಉದ್ದೇಶಗಳಿಗೆ ಸಕ್ರಿಯವಾಗಿ ಕೈಜೋಡಿಸುವುದಾಗಿ ಸಂಘಟನೆಯ ಪರವಾಗಿ ಭರವಸೆ ನೀಡಲಾಯಿತು.
ಇದೇ ಸಂದರ್ಭದಲ್ಲಿ, ಕೇಂದ್ರ ಸರಕಾರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ SASCI, Hospitality Training, Tourism Destination Development Projects ಸೇರಿದಂತೆ ಹಲವಾರು ಮಹತ್ವದ ಯೋಜನೆಗಳನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)ಯ ವೇದಿಕೆಯಲ್ಲಿ ಪರಿಚಯಿಸಿ, ಅವುಗಳ ಬಗ್ಗೆ ಉದ್ಯಮಿಗಳಿಗೆ ಅರಿವು ಮೂಡಿಸುವ ಕೆಲಸವನ್ನು ಕೈಗೊಳ್ಳುವಂತೆ ಮನವಿ ಮಾಡಲಾಯಿತು.