ಅಬುಧಾಬಿಯಲ್ಲಿ ವಿಶ್ವದ ಮೊದಲ ಸಬ್‌ಮರ್ಸಿಬಲ್ ಎಕ್ಸ್‌ಪೀರಿಯೆನ್ಸ್ ಅಕ್ವೇರಿಯಂ!
ಅಬುಧಾಬಿಯ ಯಾಸ್ ದ್ವೀಪದಲ್ಲಿರುವ ಸೀವರ್ಲ್ಡ್‌ನಲ್ಲಿ ವಿಶ್ವದ ಮೊದಲ ಸಬ್‌ಮರ್ಸಿಬಲ್ ಎಕ್ಸ್‌ಪೀರಿಯೆನ್ಸ್ ಅಕ್ವೇರಿಯಂ ಪ್ರಾರಂಭವಾಗಿದೆ.
ಅಬುಧಾಬಿಯ ಯಾಸ್ ದ್ವೀಪದಲ್ಲಿರುವ ಸೀವರ್ಲ್ಡ್‌ನಲ್ಲಿ ವಿಶ್ವದ ಮೊದಲ ಸಬ್‌ಮರ್ಸಿಬಲ್ ಎಕ್ಸ್‌ಪೀರಿಯೆನ್ಸ್ ಅಕ್ವೇರಿಯಂ ಪ್ರಾರಂಭವಾಗಿದೆ. ವಿಶ್ವದ ಅತಿದೊಡ್ಡ ಇನ್‌ಡೋರ್ ಸಮುದ್ರ ಜೀವಿಗಳ ಥೀಮ್ ಪಾರ್ಕ್ ಎಂದು ಖ್ಯಾತಿಗಳಿಸಿರುವ ಅಬುಧಾಬಿಯ ಸೀವರ್ಲ್ಡ್ ಯಾಸ್ ದ್ವೀಪವು ಸೀಸಬ್ ಎಂಬ ಅತ್ಯಾಕರ್ಷಕವಾದ ಅಕ್ವೇರಿಯಂ ಅನ್ನು ಅನಾವರಣಗೊಳಿಸಿದೆ.
ಅತ್ಯಂತ ಆಕರ್ಷಣೆಯಿಂದ ಕೂಡಿರುವ ಸಬ್‌ಮರ್ಸಿಬಲ್ ಪ್ರವಾಸಿಗರನ್ನು ನೀರೊಳಗೆ ಮುಳುಗಲು ಪ್ರೇರೆಪಿಸುತ್ತದೆ. ಪ್ರವಾಸಿಗರು ಅಲ್ಲಿ ಹಿತವಾದ ಅನುಭವವನ್ನು ಗಳಿಸಬಹುದು. ಈ ಪ್ರದೇಶದ ಬಗೆ ಬಗೆಯ ಜಾತಿ ಸಮುದ್ರ ಜೀವಿಗಳನ್ನು ಅಕ್ವೇರಿಯಂ ನಲ್ಲಿ ಇರಿಸಲಾಗಿದೆ. ಸಮುದ್ರದೊಳಗಿನ ವಾತಾವರಣವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ನೀರೊಳಗಿನ ಜೀವಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು.