Monday, October 12, 2026
Monday, October 12, 2026

'ರಾಮ ಲಕ್ಷ್ಮಣ'ರನ್ನು ನೆನಪಿಸುವ ಖೈರಿಯ ಕಥೆ

1974ರಲ್ಲಿ ಒಡಿಶಾದ ಮಯೂರಭಂಜ್ ಜಿಲ್ಲೆಯ ಸಿಮಿಲಿಪಾಲ್ನಲ್ಲಿನ ಖೈರಿ ನದಿಯ ಸಮೀಪ ಖಾರಿಯಾ ಬುಡಕಟ್ಟು ಜನರಿಗೆ ಒಂದು ಚಿಕ್ಕ ಹೆಣ್ಣು ಹುಲಿ ಮರಿ ಸಿಕ್ಕಿತು. ಅವರು ಆ ಮರಿಯನ್ನು ಅರಣ್ಯ ಅಧಿಕಾರಿ ಸರೋಜ್ ರಾಜ್ ಚೌಧುರಿಗೆ ಒಪ್ಪಿಸುತ್ತಾರೆ. ಖೈರಿ ನದಿಯ ಬಳಿ ಸಿಕ್ಕ ಆ ಹುಲಿ ಮರಿಗೆ ‘ಖೈರಿ’ಎಂದೇ ಹೆಸರಿಡುತ್ತಾರೆ.

  • ಅಕ್ಷಯ್‌ ಆತ್ರೇಯ

ಕೇಳಿದ್ದು ಸುಳ್ಳಾಗ ಬಹುದು.. ನೋಡಿದ್ದೂ ಸುಳ್ಳಾಗಬಹುದು... ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು... ಈ ಸಾಲುಗಳನ್ನು ಕೇಳಿದ ಹಾಗೆ ಕನ್ನಡ ಸಿನಿಮಾದ ಒಂದು ಹಾಡು ನೆನಪಾಗುತ್ತದೆ. ಒಂದು ನೀತಿ ಕಥೆಯನ್ನು ಹೇಳುವ ಈ ಹಾಡು ಚಿತ್ರಲೋಕದ ದಿಗ್ಗಜ ಎಂ. ಪಿ. ಶಂಕರ್ ನಿರ್ಮಿಸಿರುವ, ರವಿ, ಶಂಕರ್ ಪಣಿಕರ್ ನಿರ್ದೇಶನ ಮಾಡಿರುವ ‘ರಾಮ ಲಕ್ಷ್ಮಣ’ ಚಿತ್ರದ್ದು. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಎಂ. ಪಿ. ಶಂಕರ್, ಅಶೋಕ್, ಮಂಜುಳಾ ಮುಂತಾದ ಮೇರು ನಟರು ನಟಿಸಿರುವ ಸುಂದರ ಚಿತ್ರ.

ಇದನ್ನೂ ಓದಿ: ಜೀವನ ಒಮ್ಮೆ ಮಾತ್ರ ಸಿಗೋದು..ಈ ಸಿನಿಮಾ ಕಲಿಸಿದ ಜೀವನ ಪಾಠ

ಈ ಚಿತ್ರದ ಪ್ಲಾಟ್ ಏನಪ್ಪ ಅಂದರೆ, ಅರಣ್ಯ ಸಿಬ್ಬಂದಿಯಾದ ಎಂ. ಪಿ. ಶಂಕರ್ ಮಗನಿಗೆ ಕಾಡಿನಲ್ಲಿ ತಾಯಿಯನ್ನು ಕಳೆದುಕೊಂಡ ಹುಲಿ ಮರಿಯೊಂದು ಸಿಗುತ್ತೆ. ಅದನ್ನು ಕಾಡಿಗೆ ಬಿಡದೆ ಅದರ ಪೋಷಣೆಗೆ ಆ ಹುಡುಗ ರಾಮ ಮುಂದಾಗುತ್ತಾನೆ. ಮೊದಲ ಬಾರಿ ಚಿತ್ರ ನೋಡಿದಾದ ಅನಿಸಿದ್ದು, ವನ್ಯ ಮೃಗವೊಂದು, ಅದರಲ್ಲೂ ಹುಲಿ ಮನುಷ್ಯನ ಜತೆಗೆ ಬಾಳುವುದು ಅಷ್ಟು ಸುಲಭಾನ ಅಂತಾ? ವನ್ಯಲೋಕದ ನಡೆಯೇ ಹಾಗಲ್ಲವಾ ಮನುಷ್ಯನ ಊಹೆಗೂ ಮೀರಿದ್ದು. ಯಾವ ಸಂದರ್ಭದಲ್ಲಿ ಕಾಡು ಪ್ರಾಣಿಗಳು ಹೇಗೆ ವರ್ತಿಸುತ್ತವೋ ಅಂದಾಜುಸಲಾಗದು. ಆದರೆ, ಸಿನಿಮಾದಲ್ಲಿ ಮಾತ್ರ ರಾಮನ ಒಡನಾಡಿಯಾಗಿ, ಸ್ನೇಹಿತನಾಗಿ, ತಮ್ಮನಾಗಿ ಮತ್ತು ಮನೆಯ ಸದಸ್ಯನಾಗಿ ಹುಲಿ ಲಕ್ಷ್ಮಣ ಬಾಳುತ್ತಿರುತ್ತಾನೆ. ಕ್ರಮೇಣ ಅವಘಡವೊಂದರಲ್ಲಿ ತನ್ನ ತಾಯಿ ಮತ್ತು ಕಣ್ಣು ಎರಡನ್ನೂ ಕಳೆದುಕೊಳ್ಳುವ ರಾಮನಿಗೆ ಲಕ್ಷ್ಮಣನೇ ಕಣ್ಣಾಗೋದು ಈ ಸುಂದರ ಕಥೆಯ ಸಾರ.

ram lakshman

ಈ ಸಿನಿಮಾ ನೋಡುವುದಕ್ಕೆ ಒಂದು ಕಾರಣ ಇದೆ. ಕೆಲ ದಿನಗಳ ಹಿಂದೆ ವಿಶ್ವ ಹುಲಿ ದಿನವನ್ನು ಆಚರಿಸಿದ್ದೇವೆ. ಈ ದೇಶದ ರಾಷ್ಟ್ರಪ್ರಾಣಿಯಾಗಿರುವ ಹುಲಿಯ ಬಗ್ಗೆ ಒಂದಷ್ಟು ವಿಚಾರಗಳನ್ನು ಕೆದಕೋಣ ಅಂತಾ ಹುಡುಕಿದಾಗ ಸಿಕ್ಕಿದ್ದು, ‘ರಾಮ ಲಕ್ಷ್ಮಣ’ ಸಿನಿಮಾ ಕಥೆಯನ್ನೇ ಹೋಲುವ ಒಂದು ನೈಜ ಘಟನೆ. 1974ರಲ್ಲಿ ಒಡಿಶಾದ ಮಯೂರಭಂಜ್ ಜಿಲ್ಲೆಯ ಸಿಮಿಲಿಪಾಲ್ ಅರಣ್ಯ ಪ್ರದೇಶದಲ್ಲಿ, ಖೈರಿ ನದಿಯ ಸಮೀಪ ಕೆಲವು ಖಾರಿಯಾ ಬುಡಕಟ್ಟು ಜನರಿಗೆ ಒಂದು ಚಿಕ್ಕ ಹೆಣ್ಣು ಹುಲಿ ಮರಿ ಸಿಕ್ಕಿತು. ಅವರು ಆ ಮರಿಯನ್ನು ಸಿಮಿಲಿಪಾಲ್‌ನ ಅರಣ್ಯ ಅಧಿಕಾರಿ ಸರೋಜ್ ರಾಜ್ ಚೌಧುರಿ ಅವರಿಗೆ ಒಪ್ಪಿಸುತ್ತಾರೆ. ಆ ಹುಲಿ ಮರಿಯ ತಾಯಿ ಪತ್ತೆಯಾಗದ ಕಾರಣ ಮತ್ತು ಕಾಡಿನಲ್ಲಿ ತನಾಗೆ ಬೆಳೆಯುವಂತಾ ವಯಸ್ಸು ಆ ಮರಿಯದ್ದಲ್ಲದ ಕಾರಣ, ಚೌಧುರಿ ಮತ್ತು ಅವರ ಪತ್ನಿ ನಿಹಾರ್ ನಳಿನಿ ಸ್ವೈನ್ ಆ ಹುಲಿ ಮರಿಯನ್ನು ತಮ್ಮ ಮನೆಯಲ್ಲೇ ಸಾಕಲು ನಿರ್ಧರಿಸಿದರು. ಖೈರಿ ನದಿಯ ಬಳಿ ಸಿಕ್ಕ ಆ ಹುಲಿ ಮರಿಗೆ ‘ಖೈರಿ’ ಎಂದು ಹೆಸರಿಡುತ್ತಾರೆ. ಸಾಮಾನ್ಯವಾಗಿ ಇಂಥ ಕಾಡು ಪ್ರಾಣಿಗಳು ಮನುಷ್ಯರ ನಡುವೆ ಇರಲು ಸಾಧ್ಯವಿಲ್ಲ. ಆದರೆ, ಖೈರಿ ಮರಿ ಇದ್ದಾಗಲಿಂದಲೂ ಮನುಷ್ಯರೊಟ್ಟಿಗೆ ಬೆಳೆದಿದ್ದರಿಂದ, ಆ ಕುಟುಂಬದವರೊಂದಿಗೆ ತಾನೂ ಒಬ್ಬಳಾಗಿ ಖೈರಿ ಬೆಳೆಯುತ್ತಾಳೆ. ರಾಮ ಲಕ್ಷ್ಮಣ ಸಿನಿಮಾದಲ್ಲೂ ಹೀಗೆ ಅಲ್ಲವೇ? ಎಂ. ಪಿ. ಶಂಕರ್ ಮತ್ತು ಅಶೋಕ್ ಅರಣ್ಯಾಧಿಕಾರಿಗಳು. ಸಿಕ್ಕ ಹುಲಿಯನ್ನು ಕಾಡಿಗೆ ಬಿಡದೇ ತಾವೇ ಸಾಕುವ ನಿರ್ಧಾರ ಮಾಡುತ್ತಾರೆ. ಆ ಹುಲಿ ಕೂಡಾ ಆ ಕುಟುಂಬದ ಸದಸ್ಯನಾಗಿ ಬೆಳೆದುದಲ್ಲದೆ, ಮನೆಗೆ ರಕ್ಷಕನಾಗಿ ಬೆಳೆದು ನಿಲ್ಲುತ್ತದೆ.

ram lakshman

ಅರಣ್ಯಾಧಿಕಾರಿಯಾದ ಚೌಧುರಿ ಖೈರಿಯ ದೈನಂದಿನ ಚಟುವಟಿಕೆಗಳನ್ನು ಮತ್ತು ವರ್ತನೆಯನ್ನು ದಾಖಲಿಸುತ್ತಾ ಬಂದಿದ್ದರು. ಇದರಿಂದ ಅವರಿಗೆ ಹುಲಿಗಳ ವರ್ತನೆ, ವಾಸನೆ ಮತ್ತು ಸಂವಹನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲೂ ಕೂಡಾ ಸಾಧ್ಯವಾಯಿತು. ಹೀಗಾಗಿಯೇ ಅವರು ಖೈರಿಯೊಂದಿಗಿನ ಅನುಭವಗಳನ್ನು Khairi: The Beloved Tigress ಎಂಬ ತಮ್ಮ ಪುಸ್ತಕದಲ್ಲಿ ದಾಖಲಾಸಿದ್ದಾರೆ. ಚೌಧುರಿ ಮನೆಯ ವಿಶೇಷತೆಯೇನೆಂದರೆ, ಅದು ಒಂದು ಮಿನಿ ಜ಼ೂ. ಚೌಧುರಿಯ ಮನೆಯಲ್ಲಿ ಖೈರಿ ಮಾತ್ರ ಇರಲಿಲ್ಲ, ಮೊಸಳೆ, ಕರಡಿ ಮರಿ ಜುಂಬು, ಕುರುಡಾದ ಕತ್ತೆಕಿರುಬ ಮತ್ತು ಇತರ ಕಾಡುಪ್ರಾಣಿಗಳೂ ಇದ್ದವು. ಈ ಎಲ್ಲ ಪ್ರಾಣಿಗಳೊಂದಿಗೆ ಖೈರಿ ಸಹಜವಾಗಿ ಒಡನಾಡಿಯಂತೆ ಬೆಳೆದಿದ್ದಳು. ಖೈರಿ ದೊಡ್ದವಳಾದಾಗ ಸಿನಿಮಾದಂತೆ ಇಲ್ಲೂ ಕೂಡಾ ಸರೋಜ್ ರಾಜ್ ಚೌಧುರಿಗೆ ಅನೇಕರು ಹುಲಿಯನ್ನು ಕಾಡಿಗೆ ಕಳಿಸುವ ಬಗ್ಗೆ ಮಾತನಾಡಿರುವ ಸಿಕ್ಕ ಉತ್ತರದ ಬಗ್ಗೆ ನಿಮಗೆ ಅಂದಾಜಿದೆ.

ram lakshman

ಸಿನಿಮಾದಲ್ಲಿ ಲಕ್ಷ್ಮಣ ಹೇಗೆ ಖಳನಾಯಕನ ಮೇಲೆ ಹಾರಿ ಬೆಟ್ಟದಿಂದ ಕೆಳಗೆ ಬಿದ್ದು ಎಲ್ಲರಿಂದ ದೂರವಾಗಿತ್ತದೋ, ಹಾಗೆಯೆ ಖೈರಿಯದ್ದು ಕೂಡಾ ಒಂದು ದೊರಂತ ಅಂತ್ಯ. ಹಾಯಾಗಿ ಮನೆಯ ಸುತ್ತಾ ಮುತ್ತಾ ಅಡ್ಡಾಡುತ್ತಾ ಜೀವನ ಸಾಗಿಸುತ್ತಿದ್ದ ಖೈರಿಗೆ ಒಂದು ಹುಚ್ಚು ನಾಯಿ ಕಡಿದು ಅನಾರೋಗ್ಯಕ್ಕೆ ತುತ್ತಾಗುತ್ತಾಳೆ. ರೇಬೀಸ್ ಸೋಂಕು ತಗುಲಿ ಆ ಹುಲಿಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿತು. ಅಂತಿಮವಾಗಿ 1981ರಲ್ಲಿ ಖೈರಿಯನ್ನು ದಯಾಮರಣಕ್ಕೆ ಗುರಿಪಡಿಸಲಾಯಿತು ಎಂದು ದಾಖಲೆಗಳು ತಿಳಿಸುತ್ತವೆ. ಖೈರಿಯ ಕಥೆ ಇಂದಿಗೂ ಜನಪ್ರಿಯವಾಗಿದೆ, ಒಬ್ಬ ಮನುಷ್ಯ ಮತ್ತು ಹುಲಿಯ ನಡುವೆ ನಿರ್ಮಾಣವಾದ ಅಪರೂಪದ ಬಾಂಧವ್ಯ ಭಾರತದ ಇತಿಹಾಸದಲ್ಲಿನ ಒಂದು ವಿಶಿಷ್ಟ ಅಧ್ಯಾಯವಾಗಿದೆ ಎಂದರೆ ತಪ್ಪಿಲ್ಲ. ಮುಂದೆ ಎಂದಾದರೂ ಸಿಮಿಲಿಪಾಲ್‌ನ ಅರಣ್ಯಧಾಮಕ್ಕೆ ಭೇಟಿ ನೀಡಿದರೆ, ಖೈರಿಯ ಕಥೆ ಕೇಳೊದನ್ನು ಮಾತ್ರ ಮರೆಯಬೇಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!