Friday, January 16, 2026
Friday, January 16, 2026

ತಿರುಪತಿ ದರ್ಶನಕ್ಕೆ ಒಂದು ದಿನ ಪ್ರವಾಸ ಹೊರತಂದ ಕೆಎಸ್‌ಟಿಡಿಸಿ

ಈ ಪ್ಯಾಕೇಜ್‌ನ ಹೆಸರು ಬೆಂಗಳೂರು- ತಿರುಮಲ - ಮಂಗಾಪುರ ಟೂರ್‌ ಪ್ಯಾಕೇಜ್‌. ಎಸಿ ಬಸ್‌ ಮತ್ತು ಎಸಿ ವೋಲ್ವೋ ಬಸ್ ಎರಡು ಆಯ್ಕೆಗಳಿವೆ. ನಿಮಗೆ ಇಷ್ಟವಾದ ಆಯ್ಕೆಯೊಂದಿಗೆ ಪ್ರವಾಸ ಹೋಗಬಹುದು.

ಇತ್ತೀಚೆಗೆ ತಿರುಪತಿ ತಿರುಮಲ ದರ್ಶನಕ್ಕೆ ಪ್ರವಾಸ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ತಿರುಪತಿ ಪ್ರವಾಸಕ್ಕೆ ನೂತನ ಬಜೆಟ್‌ ಸ್ನೇಹಿ ಪ್ಯಾಕೇಜ್‌ ಪರಿಚಯಿಸಿದೆ. ಒಂದು ದಿನದ ಪ್ರವಾಸ ಪ್ಯಾಕೇಜ್‌ ಇದಾಗಿದೆ. ಈ ಪ್ಯಾಕೇಜ್‌ನ ಹೆಸರು ಬೆಂಗಳೂರು- ತಿರುಮಲ - ಮಂಗಾಪುರ ಟೂರ್‌ ಪ್ಯಾಕೇಜ್‌. ಎಸಿ ಬಸ್‌ ಮತ್ತು ಎಸಿ ವೋಲ್ವೋ ಬಸ್ಸ್‌ ಎರಡು ಆಯ್ಕೆಗಳಿವೆ. ನಿಮಗೆ ಇಷ್ಟವಾದ ಆಯ್ಕೆಯೊಂದಿಗೆ ಪ್ರವಾಸ ಹೋಗಬಹುದು. ಎಸಿ ಬಸ್‌ಗೆ ಪ್ರತಿ ಪ್ರಯಾಣಿಕನಿಗೆ 2270 ರುಪಾಯಿ ಮತ್ತು ಎಸಿ ವೋಲ್ವೋ ಬಸ್‌ಗೆ ಪ್ರತಿ ಪ್ರಯಾಣಿಕನಿಗೆ 2300 ರುಪಾಯಿಗಳು ಮಾತ್ರ.

KStDC (1)

ಕೆಎಸ್‌ಟಿಡಿಸಿಯಲ್ಲಿ ನೀವು ಪ್ರವಾಸ ಬುಕ್‌ ಮಾಡಿಕೊಂಡರೆ

ನಿಮ್ಮ ಪ್ರಯಾಣವು ರಾತ್ರಿ 8 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್‌ ನಿಲ್ದಾಣದ KSTDC ಬುಕಿಂಗ್‌ ಕೌಂಟರ್‌ನಿಂದ ಶುರುವಾಗುತ್ತದೆ. ಮರುದಿನ ಬೆಳಗ್ಗೆ 2 ಗಂಟೆಗೆ ಸರಿಯಾಗಿ ತಿರುಪತಿಗೆ ತಲುಪುತ್ತೀರಿ. ಪ್ರಯಾಣಿಕರು ಫ್ರೆಶ್‌ ಅಪ್‌ ಆಗಲು ಮುಂಜಾನೆ 4:30ರವರೆಗೆ ಸಮಯ ನೀಡಲಾಗುವುದು. ನಂತರ ಉಪಾಹಾರ ಮುಗಿಸಿ ತಿರುಮಲ ದರ್ಶನಕ್ಕೆ ಕರೆದೊಯ್ಯಲಾಗುತ್ತದೆ. ವೆಂಕಟೇಶ್ವರ ಸ್ವಾಮಿ ದರ್ಶನ ಮುಗಿಸಿ ನಂತರ ಶ್ರೀ ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಈ ಎರಡು ದೇವಸ್ಥಾನದ ದರ್ಶನ ಪಡೆದು ಮರಳಿ ಬೆಂಗಳೂರಿಗೆ ತಲುಪಿಸಲಾಗುತ್ತದೆ.

ಈ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕಾಲ್ ಸೆಂಟರ್ 080-26252625 ಅನ್ನು ಸಂಪರ್ಕಿಸಬಹುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..