ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಕರ್ನಾಟಕದ ಸುಂದರ ದೃಶ್ಯಗಳು, ಸಂಸ್ಕೃತಿ ಮತ್ತು ಪರಂಪರೆಯ ಅದ್ಭುತಗಳನ್ನು ಪರಿಚಯಿಸಲು "ಕ್ಯಾಪ್ಚರ್ ಕರ್ನಾಟಕ" ಎಂಬ ಹೆಸರಿನ ಫೊಟೋಗ್ರಫಿ ಸ್ಪರ್ಧೆಯನ್ನು ಘೋಷಿಸಿದೆ.

ಆಗಸ್ಟ್ 1 ರಿಂದ 31ರವರೆಗೆ ನಡೆಯಲಿರುವ ಈ ಸ್ಪರ್ಧೆ ಎಲ್ಲಾ ಛಾಯಾಗ್ರಾಹಕರಿಗೆ ಒಂದು ವಿಶಿಷ್ಟ ಅವಕಾಶವನ್ನು ನೀಡುತ್ತಿದೆ. ರಾಜ್ಯದ ದೃಶ್ಯ ವೈವಿಧ್ಯ, ಐತಿಹಾಸಿಕ ಧಾರ್ಮಿಕ ಸ್ಥಳಗಳು, ಪ್ರಕೃತಿ ಸೌಂದರ್ಯ ಮತ್ತು ಸಂಸ್ಕೃತಿಯ ಅಚ್ಚರಿಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವ ಅವಕಾಶ ಇದಾಗಿದೆ.

Untitled design (1)

ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನ: ಭಾಗವಹಿಸುವವರು ತಮ್ಮ ಅತ್ಯುತ್ತಮ ಛಾಯಾಚಿತ್ರಗಳನ್ನು ಸ್ಥಳದ ವಿವರ ಮತ್ತು ಚಿಕ್ಕ ವಿವರಣೆಯೊಂದಿಗೆ ಹಂಚಿಕೊಳ್ಳಬೇಕು. ಛಾಯಾಚಿತ್ರವನ್ನು ಹಂಚಿಕೊಳ್ಳುವಾಗ #CaptureKarnataka ಹ್ಯಾಷ್‌ಟ್ಯಾಗ್ ಅನ್ನು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಬೇಕು.

ಉತ್ತಮ ಛಾಯಾಚಿತ್ರಗಳಿಗೆ ಆಕರ್ಷಕ ಬಹುಮಾನಗಳಿವೆ ಎಂದಿರುವ ಕೆಎಸ್ ಟಿಡಿಸಿ, ಈ ಸ್ಪರ್ಧೆಯ ಮೂಲಕ ಕಲೆ ಮತ್ತು ಪ್ರವಾಸೋದ್ಯಮ ಎರಡಕ್ಕೂ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.

ಫೊಟೋಗ್ರಫಿ ಪ್ರಿಯರಿಗೆ ಇದು ಕರ್ನಾಟಕವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ಅಮೂಲ್ಯ ಅವಕಾಶ.

ಹೆಚ್ಚಿನ ಮಾಹಿತಿಗಾಗಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ KSTDC ಪೇಜ್‌ಗೆ ಭೇಟಿ ನೀಡಿ.