ಶ್ರೀಶೈಲ ಮಂದಿರಂ ಶ್ರೀಮಲ್ಲಿಕಾರ್ಜುನಂ…
ಕರ್ನಾಟಕ ಪ್ರವಾಸೋದ್ಯಮ ನಿಗಮದ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಹಾಗಾಗಿ ಇದು ಮಹಾನ್ ಅನುಭವಿಯ ಜತೆಗೆ ಪ್ರವಾಸ. ಕೆಎಸ್‌ಟಿಡಿಸಿ ಇದೀಗ ಬೇರೆ ರಾಜ್ಯದ ಪ್ರವಾಸೋದ್ಯಮಕ್ಕೂ ಸಡ್ಡು ಹೊಡೆದು ಮೈಕೊಡವಿ ನಿಂತಿದೆ. ಇಂಥ ಕೆಎಸ್‌ಟಿಡಿಸಿ ಈಗ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಆರು ದಿನಗಳ ಶ್ರೀಶೈಲಂ, ಮಹಾನಂದೀಶ್ವರ ಮತ್ತು ಹೈದರಾಬಾದ್ ಟೂರ್‌ಗೆ ಕರೆದೊಯ್ಯುತ್ತಿದೆ.
ಪ್ರವಾಸ ಕೊಡುವ ದಿವ್ಯ ಅನುಭೂತಿಯ ಬಗ್ಗೆ ನಿಮಗೆ ಗೊತ್ತೇ ಇದೆ. ಪ್ರವಾಸ ನಮ್ಮೊಳಗಿನ ಪ್ರಯಾಸವನ್ನು ಕಳೆಯುತ್ತದೆ. ಬದುಕಿಗೆ ನೆಮ್ಮದಿಯನ್ನು ಮೊಗೆಮೊಗೆದು ಕೊಡುತ್ತದೆ. ನೂರಾರು ಒತ್ತಡಗಳ ಮಧ್ಯೆಯೂ ಪ್ರವಾಸವು ತಂಗಾಳಿಯಂತೆ ಬೀಸಿ ಹೋಗುತ್ತದೆ. ನಮ್ಮ ಬದುಕಿನ ಎಲ್ಲ ಜಂಜಡಗಳಿಂದ ಮುಕ್ತಿ ಪಡೆಯುವುದು ಕಷ್ಟ. ಆದರೆ ವಾರಪೂರ್ತಿ ಒತ್ತಡ ಮತ್ತು ಆಫೀಸಿನ ಕಿರಿಕಿರಿಗಳಿಗೆ ತಾತ್ಕಾಲಿಕವಾಗಿಯಾದರೂ ಗುಡ್ ಬಾಯ್ ಹೇಳಬಹುದು. ನಗರದ ಗಲಭೆ, ಗದ್ದಲಗಳು ನಗುವನ್ನು ಮರೆಸುತ್ತವೆ. ಹಾಗಾಗಿ ಶಾಂತಿ ಸಿಗುವ ತಾಣಗಳಲ್ಲಿ ನಾವು ಓಡಾಡಬೇಕು. ದೇವಾಲಯ, ಕಾಡು-ಮೇಡುಗಳ ಪ್ರವಾಸ ಮನಸಿನ ಭಾರವನ್ನು ಇಳಿಸಿ, ಪ್ರತಿದಿನದ ಸಂಕಟಗಳನ್ನು ಮರೆಸಿ ಜೀವನಪ್ರೀತಿಯನ್ನು ಹುಟ್ಟಿಸುತ್ತದೆ. ಮನಶ್ಶಾಂತಿಗಾಗಿ ದೇಶ-ವಿದೇಶಗಳತ್ತ ಪ್ರವಾಸ ಮಾಡುತ್ತಿರುವವರು ಸಾಕಷ್ಟು ಜನರಿದ್ದಾರೆ. ಅವರನ್ನೊಮ್ಮೆ ಕೇಳಿ, ವರ್ಷಪೂರ್ತಿ ಪ್ರವಾಸ ಹೋಗುವ ನಿಮಗೆ ಬೇಸರವಾಗುವುದಿಲ್ಲವೇ ಎಂದು; ಉಹೂಂ, ಅಂಥವರಿಗೆ ಪ್ರವಾಸ ಹೋಗದೆ ಇದ್ದಾಗ ಬೇಸರವಾಗುತ್ತದೆ. ಹೊಸತನವನ್ನು ನೋಡುವಾಗ ಮತ್ತು ಕೇಳಿ, ಸವಿಯುವಾಗಲೇ ಮನಸಿನಲ್ಲಿನ ಹಳೆಯ ನೋವುಗಳು ಮರೆಯಾಗುತ್ತವೆ. ಅಂಥ ಹೊಸತನಗಳನ್ನು ಪ್ರವಾಸ ಪೂರೈಸಬಲ್ಲದು. ಏನಿಲ್ಲದಿದ್ದರೂ ಮನೆಯನ್ನು, ಆಫೀಸ್ ಅನ್ನು ಬಿಟ್ಟು ಒಂದಷ್ಟು ಕಡೆ ವಿಹಾರ ಹೋಗಿ ಬಂದರೆ ಸಾಕು.
ಇದನ್ನೂ ಓದಿ: ಏಳು ಸುತ್ತಿನ ಕೋಟೆಯಲ್ಲಿ ಒಂದು ಸುತ್ತು……
ಪ್ರತಿಸಲವೂ ಓದಿದ್ದನ್ನೇ ಓದಿ ಕಂಠಪಾಠವಾದಂತೆ, ನೀವು ಎಲ್ಲ ಕಡೆ ಕಲ್ಲು, ಮಣ್ಣು ನೋಡಿದರೂ ಅದರಲ್ಲಿ ಬರಿಯ ಕಲ್ಲು ಮಣ್ಣುಗಳೇ ಕಾಣುತ್ತವೆ. ಆದರೆ, ವಾಸ್ತವದಲ್ಲಿ ಅವುಗಳಲ್ಲಿ ನಂಬಿಕೆ, ಇತಿಹಾಸ, ಕಲೆ, ಸಂಸ್ಕೃತಿಗಳು ಅಡಕವಾಗಿರುತ್ತವೆ. ಹಾಗಾಗಿ ಇವುಗಳ ಮಾಹಿತಿ ನಿಮಗಿಲ್ಲದಿದ್ದರೆ ನಿಮ್ಮ ಪ್ರವಾಸ ವ್ಯರ್ಥವಾಗುತ್ತದೆ. ಇದಕ್ಕೆ ಪರಿಹಾರವಿದೆ. ಹೌದು, ಅನುಭವಿ ಪ್ರವಾಸಿಗನ ಜತೆಗೆ ಪ್ರವಾಸ ಹೋಗಬೇಕು. ನಮ್ಮ ನಾಡಿನ ಪ್ರವಾಸೋದ್ಯಮ ನಿಗಮವೇ ಈ ಎಲ್ಲ ಅವಕಾಶಗಳನ್ನು ನೀಡುತ್ತಿದೆ. ಕೈಗೆಟುಕುವ ದರದಲ್ಲಿ ಪ್ರವಾಸ ಮಾಡಿಸಲು ಸಜ್ಜಾಗಿದೆ. ನಮ್ಮ ರಾಜ್ಯದ ಕೆಎಸ್‌ಟಿಡಿಸಿ ನಿಮ್ಮನ್ನು ಮುನ್ನಡೆಸುತ್ತದೆ.

ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಇದರಿಂದ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸತನವನ್ನು ನಿಮ್ಮಲ್ಲಿ ತುಂಬಿಕೊಂಡಂತಾಗುತ್ತದೆ. ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ. ಮಯೂರದಲ್ಲಿ ಮನಮೋಹಿಸುವ ವಾತಾವರಣವಿರುತ್ತದೆ. ಕೆಎಸ್‌ಟಿಡಿಸಿ ನಿಮಗೆ ಅಲ್ಲಿ ಉಳಿದುಕೊಳ್ಳಲು ವಾಸ್ತವ್ಯ ಅವಕಾಶ ಕಲ್ಪಿಸಿಕೊಡುತ್ತದೆ.
ಕರ್ನಾಟಕ ಪ್ರವಾಸೋದ್ಯಮ ನಿಗಮದ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಹಾಗಾಗಿ ಇದು ಮಹಾನ್ ಅನುಭವಿಯ ಜತೆಗೆ ಪ್ರವಾಸ. ಕೆಎಸ್‌ಟಿಡಿಸಿ ಇದೀಗ ಬೇರೆ ರಾಜ್ಯದ ಪ್ರವಾಸೋದ್ಯಮಕ್ಕೂ ಸಡ್ಡು ಹೊಡೆದು ಮೈಕೊಡವಿ ನಿಂತಿದೆ. ಇಂಥ ಕೆಎಸ್‌ಟಿಡಿಸಿ ಈಗ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಆರು ದಿನಗಳ ಶ್ರೀಶೈಲಂ, ಮಹಾನಂದೀಶ್ವರ ಮತ್ತು ಹೈದರಾಬಾದ್ ಟೂರ್‌ಗೆ ಕರೆದೊಯ್ಯುತ್ತಿದೆ. ಧಾರ್ಮಿಕ ಪ್ರವಾಸಿಗರಿಗೆ ಶ್ರೀಶೈಲಂ ಹೇಳಿ ಮಾಡಿಸಿದ ಧಾರ್ಮಿಕ ತಾಣ. ಮಹಾನಂದೀಶ್ವರ ದೇವಾಲಯವೂ ಭಕ್ತ ವರ್ಗವನ್ನು ತನ್ನತ್ತ ಆಕರ್ಷಿಸುತ್ತದೆ. ಇನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಬೇರೆಯದ್ದೇ ಫೀಲ್ ಕೊಡುತ್ತದೆ. ಧಾರ್ಮಿಕ ಪ್ರವಾಸಿಗರಿಗೂ ಮತ್ತು ಡಿಫರೆಂಟ್ ಟ್ರಾವೆಲ್ ಡೆಸ್ಟಿನೇಷನ್‌ಗಳನ್ನು ಇಷ್ಟಪಡುವ ಆಸಾಮಿಗಳಿಗೂ ಕೆಎಸ್‌ಟಿಡಿಸಿಯ ಈ ಹೊಸ ಪ್ಯಾಕೇಜ್ ದಿ ಬೆಸ್ಟ್ ಎನ್ನಬಹುದು. ನೀವು ಪ್ರವಾಸಕ್ಕೆ ಹೋಗಿ ಎಷ್ಟು ದಿನಗಳಾದವು ಎಂಬುದು ನೆನಪಿದೆ ಅಲ್ಲವೇ? ಮರು ಯೋಚಿಸದೆ ಹೊರಡಿ. ಉಳಿದದ್ದು ಕೆಎಸ್‌ಟಿಡಿಸಿ ನೋಡಿಕೊಳ್ಳುತ್ತದೆ. ಹ್ಯಾಪಿ ಜರ್ನಿ. ಹ್ಯಾವ್ ಎ ನೈಸ್ ಟ್ರಿಪ್!

ಶ್ರೀಶೈಲ ಮಂದಿರ
ಶ್ರೀಶೈಲ ಮಂದಿರಕ್ಕಿರುವ ಶಕ್ತಿ ಮತ್ತು ಅಲ್ಲಿನ ಭಕ್ತಿ ಪರಂಪರೆಯ ಬಗ್ಗೆ ಹಲವರಿಗೆ ಗೊತ್ತೇ ಇದೆ. ದೇಶದಲ್ಲಿರುವ ನೂರಾರು ಶಿವ ಮಂದಿರಗಳ ಪೈಕಿ ಶ್ರೀಶೈಲಂನ ಮಲ್ಲಿಕಾರ್ಜುನ ದೇವಾಲಯವು ತನ್ನದೇ ವಿಶೇಷತೆಯಿಂದಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದೆ. ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಅಥವಾ ಶ್ರೀಶೈಲಂ ದೇವಸ್ಥಾನವು ಆಂಧ್ರಪ್ರದೇಶದಲ್ಲಿದೆ. ಇದು ಶಿವ ಮತ್ತು ಪಾರ್ವತಿಗೆ ಅರ್ಪಿತವಾದ ದೇವಾಲಯ. ಈ ದೇವಾಲಯವನ್ನು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಈ ಮಂದಿರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಶಿವನನ್ನು ಮಲ್ಲಿಕಾರ್ಜುನ ಎಂದು ಪಾರ್ವತಿಯನ್ನು ಭ್ರಮರಾಂಬ ಎಂದು ಪೂಜಿಸಲಾಗುತ್ತದೆ. ಮತ್ತೇಕೆ ತಡ? ಕೆಎಸ್‌ಟಿಡಿಸಿ ಪುರಾಣ ಪ್ರಸಿದ್ಧವಾದ ಶ್ರೀಶೈಲಂ ಮಂದಿರಕ್ಕೆ ನಿಮ್ಮನ್ನು ಕರೆದೊಯ್ಯುತ್ತಿದೆ. ನೀವು ತಪ್ಪದೇ ಹೋಗಬೇಕು. ಇದು ನಮ್ಮ ಕೋರಿಕೆ ಮತ್ತು ಆಗ್ರಹ ಎಂದೇ ಭಾವಿಸಿ. ಧಾರ್ಮಿಕ ಪ್ರವಾಸಕ್ಕೆ ಅದರದ್ದೇ ಆದ ಕಿಮ್ಮತ್ತಿದೆ. ಧಾರ್ಮಿಕ ಪ್ರವಾಸವು ನಿಮ್ಮನ್ನು ಉತ್ಸಾಹಿಯನ್ನಾಗಿಸುತ್ತದೆ. ಹೂಂ, ಹೊರಡಿ.
ಪ್ಯಾಕೇಜ್
ಮಹಾನಂದಿ-ಶ್ರೀಶೈಲಂ-ಹೈದರಾಬಾದ್
ದಿನ-1
ಬೆಳಗ್ಗೆ 6:00 ಗಂಟೆಗೆ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡಲಾಗುತ್ತದೆ
ಮಧ್ಯಾಹ್ನ 1:00 ಗಂಟೆ - 2:00 ಊಟದ ವಿರಾಮ
ಮಧ್ಯಾಹ್ನ 2:30 ಗಂಟೆ -4:30 ಯಗಂಟಿಯಲ್ಲಿರುವ ಬೆಲ್ಲಂ ಗುಹೆಗಳಿಗೆ ಭೇಟಿ
ಸಂಜೆ 6:00 ಗಂಟೆಗೆ ನಂದಿಯಾಲ ಹೊಟೇಲ್ ಚೆಕ್-ಇನ್
ದಿನ-2
ಬೆಳಗ್ಗೆ 7:30 ಗಂಟೆಗೆ ಉಪಾಹಾರ ಸೇವಿಸಿ ಹೊರಡುವುದು
ಬೆಳಗ್ಗೆ 8:30- 09:30 ಗಂಟೆ ಮಹಾನಂದೀಶ್ವರ ದೇವಸ್ಥಾನ
ಮಧ್ಯಾಹ್ನ 1:30- 2:00 ಗಂಟೆ ಊಟದ ವಿರಾಮ
ಮಧ್ಯಾಹ್ನ 2:30- 6:00 ಮಲ್ಲಿಕಾರ್ಜುನ ಸ್ವಾಮಿ ಶ್ರೀಶೈಲ ಮತ್ತು ಪಾತಾಳಗಂಗಾ
ಸಂಜೆ 6:30 ಹೊಟೇಲ್ ಚೆಕ್-ಇನ್
ದಿನ-3
ಬೆಳಗ್ಗೆ 7:00 ಗಂಟೆಗೆ ಶ್ರೀಶೈಲಂ ನಿಂದ ಹೊರಡಲಾಗುತ್ತದೆ
ಬೆಳಗ್ಗೆ 7:30 - 8:30 ಗಂಟೆ ಬ್ರೇಕ್‌ಫಾಸ್ಟ್ ಮತ್ತು ಸಾಕ್ಷಿಗಣಪತಿಗೆ ಭೇಟಿ
ಮಧ್ಯಾಹ್ನ 1:00 -2:00 ಗಂಟೆ ಊಟದ ವಿರಾಮ
ಮಧ್ಯಾಹ್ನ 2:00 - ಸಂಜೆ 5:30 ಸಮಾನತೆಯ ಪ್ರತಿಮೆಗೆ(Statue Of Equality) ಭೇಟಿ
ಸಂಜೆ 6:30 ಗಂಟೆ ಹೊಟೇಲ್ ಚೆಕ್ ಇನ್

ದಿನ-4
ಬೆಳಗ್ಗೆ 7:00 ಗಂಟೆಗೆ ಹೋಟೆಲ್ ನಿಂದ ಹೊರಡಲಾಗುತ್ತದೆ
ಬೆಳಗ್ಗೆ 7:15- 8:00 ಗಂಟೆ ಉಪಹಾರ
ಬೆಳಗ್ಗೆ 8:00- 8:45 ಗಂಟೆ ಬಿರ್ಲಾ ಮಂದಿರಕ್ಕೆ ಭೇಟಿ
ಬೆಳಗ್ಗೆ 9:30- 11:30 ಗಂಟೆ ಸಲಾರ್ಜಂಗ್ ಮ್ಯೂಸಿಯಂಗೆ ಭೇಟಿ
ಮಧ್ಯಾಹ್ನ 12:45- 1:30 ಗಂಟೆ ಊಟದ ವಿರಾಮ
ಮಧ್ಯಾಹ್ನ 2:30-4:00 ಗೋಲ್ಕೊಂಡ ಕೋಟೆಗೆ ಭೇಟಿ
ಸಂಜೆ 5:00-6:00 ಗಂಟೆ ಎನ್ ಟಿಆರ್ ಗಾರ್ಡನ್‌ಗೆ ಭೇಟಿ
ಸಂಜೆ 6:30 ಹೊಟೇಲ್ ಚೆಕ್‌ಇನ್
ದಿನ-5
ಬೆಳಗ್ಗೆ 7:00 ಗಂಟೆ ಹೊಟೇಲ್‌ನಿಂದ ನಿರ್ಗಮನ
ಬೆಳಗ್ಗೆ 7:15 - 8:00 ಗಂಟೆ ಉಪಾಹಾರ
ಬೆಳಗ್ಗೆ 9:00 - 5:30 ಗಂಟೆ ರಾಮೋಜಿ ಫ್ಲಿಮ್ ಸಿಟಿಗೆ ಭೇಟಿ
ರಾತ್ರಿ 8:00 - 9:00 ಗಂಟೆ ಊಟ
ದಿನ-6
ಬೆಳಗ್ಗೆ 6:00 ಗಂಟೆಗೆ ಬೆಂಗಳೂರಿಗೆ ಆಗಮನ
ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಇಲ್ಲಿ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ವಿಜಯನಗರ ಮಯೂರದಲ್ಲಿ ಸತ್ಕಾರ
ಅರೆ.. ನಿಮಗೆ ಮತ್ತೆ ಮತ್ತೆ ಮಯೂರ ಆತಿಥ್ಯದ ಬಗ್ಗೆ ಹೇಳಬೇಕಾ? ಮಯೂರವೆಂದರೆ ಆತಿಥ್ಯದಲ್ಲಿ ಎತ್ತಿದ ಕೈ. ಅಲ್ಲಿ ಆತ್ಮೀಯತೆ ಮತ್ತು ಸತ್ಕಾರಕ್ಕೆ ಏನೇನೂ ಕಮ್ಮಿಯಿಲ್ಲ. ರಾಜ್ಯದಲ್ಲಿರುವ ಪ್ರತಿ ಮಯೂರ ಹೊಟೇಲ್‌ನಲ್ಲಿಯೂ ಭರ್ಜರಿ ಆತಿಥ್ಯವಿದೆ. ಹೋಮ್ ಫ್ರೆಂಡ್ಲಿ ಮತ್ತು ಬಜೆಟ್ ಫ್ರೆಂಡ್ಲಿಯಾಗಿರುವ ಈ ಹೊಟೇಲ್‌ನಲ್ಲಿ ಪ್ರವಾಸಿಗರು ಸಂತಸದಿಂದ ತಮ್ಮ ವೀಕೆಂಡ್ ದಿನಗಳನ್ನು ಕಳೆಯಲು ಬಯಸುತ್ತಾರೆ. ಆ ಪೈಕಿ ವಿಜಯನಗರದ ಟಿಬಿ ಡ್ಯಾಮ್ ಬಳಿಯಿರುವ ಮಯೂರ ಹೊಟೇಲ್ ಪಕ್ಕಾ ಅತಿಥಿ ಸ್ನೇಹಿ ರೆಸಾರ್ಟ್ ಎನ್ನಬಹುದು. ಹಂಪಿಗೆ ಪ್ರವಾಸ ಹೋಗುವ ಪ್ರವಾಸಿಗರು ಅಲ್ಲಿ ಆರಾಮವಾಗಿ ಉಳಿದುಕೊಳ್ಳಬಹುದು.
ಹೊಟೇಲ್ ಮಯೂರ ವಿಜಯನಗರವು ಟಿಬಿ ಡ್ಯಾಮ್ ಪಕ್ಕದಲ್ಲಿದ್ದು, ಪ್ರಯಾಣಿಕರಿಗೆ ಪ್ರಶಾಂತ ಮತ್ತು ಹಸಿರು ವಾತಾವರಣವನ್ನು ನೀಡುತ್ತದೆ. ಹೊಟೇಲ್ ಒಟ್ಟು 21 ಕೊಠಡಿಗಳನ್ನು ಹೊಂದಿದ್ದು, 17 ಎಸಿ ಡಬಲ್ ರೂಮ್‌ಗಳು, 2 ಎಸಿ ಡಿಲಕ್ಸ್, 4 ಬೆಡ್ ರೂಮ್‌ಗಳು ಮತ್ತು 2 ಎಸಿ ಸಿಂಗಲ್ ರೂಮ್‌ಗಳನ್ನು ಒಳಗೊಂಡಿದೆ. ರೆಸ್ಟೋರೆಂಟ್ ಮತ್ತು ಬಿಯರ್ ಪಾರ್ಲರ್ ಪ್ರವಾಸಿಗರಿಗೆ ರಿಲ್ಯಾಕ್ಸ್ ಒದಗಿಸುತ್ತದೆ.
ಇಲ್ಲಿಗೂ ಹೋಗಿ
ವಿಜಯನಗರದ ಮಯೂರ ಹೊಟೇಲ್‌ನಲ್ಲಿ ನೀವು ವಾಸ್ತವ್ಯ ಇದ್ದಮೇಲೆ ಅಲ್ಲಿಂದ ತೀರಾ ಸಮೀಪವಿರುವ ತಾಣಗಳಿಗೆ ಹೋಗದಿದ್ದರೆ ಹೇಗೆ?
ಮಯೂರದಿಂದ ಹತ್ತಿರವಿರುವ ಪ್ರೇಕ್ಷಣೀಯ ತಾಣಗಳು
ವಿಜಯ ವಿಠಲ ದೇವಸ್ಥಾನ
ತುಂಗಭದ್ರ ಗಾರ್ಡನ್ಸ್ ಮತ್ತು ಡ್ಯಾಮ್
ಹಜಾರ ರಾಮ ದೇವಾಲಯ
ಹಂಪಿ
ಹೇಮಕೂಟ ಬೆಟ್ಟ
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)