ಏಳು ಸುತ್ತಿನ ಕೋಟೆಯಲ್ಲಿ ಒಂದು ಸುತ್ತು……
ಮೊದಲೇ ಹೇಳಿದಂತೆ ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗನಿಗೂ ಹೊಟೇಲ್ ಮಯೂರದಲ್ಲಿ ರಾಜಾತಿಥ್ಯವಿದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್ನ ಶಾಖೆಗಳಿವೆ. ಕಲ್ಲಿನ ಕೋಟೆಯಾದ ಚಿತ್ರದುರ್ಗದಲ್ಲೂ ಮಯೂರ ದುರ್ಗ ಹೊಟೇಲ್ ಇದೆ. ಹೇಳಿಕೇಳಿ ಚಿತ್ರದುರ್ಗ ಶೌರ್ಯ ಮತ್ತು ಘನತೆಗೆ ಹೆಸರುವಾಸಿಯಾದ ತಾಣ. ದುರ್ಗ ಎಂದೊಡನೆ ಮದಕರಿನಾಯಕ ನೆನಪಾಗುತ್ತಾನೆ. ವೀರವನಿತೆ ಓಬವ್ವಳ ಸಾಹಸಗಾಥೆಯೂ ನೆನಪಾಗುತ್ತದೆ. ಚಿತ್ರದುರ್ಗವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಅರೆರೆ.. ಇಲ್ಕೇಳಿ, ಪ್ರವಾಸದ ಬಗ್ಗೆ ನಿಮಗೆ ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ. ಪ್ರವಾಸವೆಂದರೆ ಪ್ರಯಾಸವನ್ನು ಕಳೆಯುವುದು ಎಂದು ನಿಮಗೂ ಗೊತ್ತಿದೆ. ಆದರೆ ಇತ್ತೀಚಿಗೆ ನೀವು ಪ್ರವಾಸ ಮಾಡುವುದನ್ನೇ ಮರೆತಂತಿದೆ. ಬದುಕಿನ ಎಲ್ಲ ಜಂಜಾಟಗಳನ್ನು ಪಕ್ಕಕ್ಕೆ ಒಗೆದು ಆರಾಮವಾಗಿ ಜೀವಿಸುವ, ನಗರದ ಗದ್ದಲಗಳನ್ನು ನೂಕಿ ನಗಿಸುವ, ಪ್ರತಿದಿನದ ಸಂಕಟಗಳನ್ನು ಮರೆಸುವ ಜೀವನಪ್ರೀತಿ ಮತ್ತು ಜೀವನೋತ್ಸಾಹ ಅರಳುವಂತೆ ಮಾಡುವ ಒಂದು ಸಾಧನವೆಂದರೆ ಅದು ಪ್ರವಾಸ ಎಂಬುದನ್ನು ನೆನಪಿಟ್ಟುಕೊಳ್ಳಿ. ಇಷ್ಟಬಂದಂತೆ ಓಡಾಡುವುದು ಪ್ರವಾಸವಲ್ಲ. ನಮ್ಮನ್ನು ಮಾನಸಿಕ ಮತ್ತು ಬೌದ್ಧಿಕ ಶ್ರೀಮಂತರನ್ನಾಗಿಸುವುದು ಪ್ರವಾಸ. ನಾವು ಏನನ್ನು ನೋಡುತ್ತೇವೆ, ಏನನ್ನು ಅಲ್ಲಿ ತಿಳಿಯುತ್ತೇವೆ ಮತ್ತು ಇನ್ನೇನನ್ನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಸ್ಥಳೀಯತೆಯ ಸ್ವಾದವನ್ನು ಪ್ರವಾಸಿಗ ಸವಿಯಬೇಕು.ಪ್ರವಾಸಿಗನಿಗೆ ಒಳನೋಟ ಬಹಳ ಮುಖ್ಯ.
ಇದನ್ನೂ ಓದಿ: ಮಾದೇವ ಬಾರಯ್ಯಾ ನೀನು ದರುಶನವ ನೀಡಯ್ಯಾ! ಬಿಳಿಗಿರಿ ರಂಗನ ಬೇಡಿರಿ….
ಕೇವಲ ಕಲ್ಲು, ಮಣ್ಣು, ಪ್ರಾಣಿಗಳನ್ನು ನೋಡುವುದಲ್ಲ. ಅಲ್ಲಿನ ಇತಿಹಾಸ, ವನವಾಸ ಅಷ್ಟೇಕೆ ಜನಮನಗಳನ್ನೂ ನೋಡಬೇಕು. ಅಂತರಂಗದ ಶೋಧವಾಗಬೇಕು. ನಮ್ಮ ನಾಡೇ ನಮಗೆ ಈ ಎಲ್ಲ ಅವಕಾಶಗಳನ್ನು ನೀಡುತ್ತದೆ. ಇಲ್ಲಿ ವೈವಿಧ್ಯ ಜನಾಂಗಗಳಿವೆ, ವೈವಿಧ್ಯ ಭೌಗೋಳಿಕ ವಾತಾವರಣಗಳಿವೆ. ಕರ್ನಾಟಕದ ಆಚೆಗೂ ನಮ್ಮನ್ನು ಚೈತನ್ಯ ರೂಪಿಯಾಗಿಸಬಲ್ಲ ತಾಣಗಳಿವೆ. ಆಗಲಿ, ಅಂಥ ತಾಣಗಳಿಗೆ ನಮ್ಮನ್ನು ಕೈಗೆಟುಕುವ ಹಣದಲ್ಲಿ ಕರೆದೊಯ್ಯುವವರು ಯಾರು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ಯಾ? ನಮ್ಮಂಥವರಿಗಾಗಿಯೇ ಕೆಎಸ್‌ಟಿಡಿಸಿ ಇದೆ. ನಾಡು, ಹೊರನಾಡು ಎಲ್ಲ ಕಡೆಗೂ ನಮ್ಮನ್ನು ಕರೆದೊಯ್ಯುತ್ತದೆ. ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಅಷ್ಟರಮಟ್ಟಿಗೆ ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ಅನುಭವಿ ಮತ್ತು ಪ್ರತಿಭಾವಂತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ.

ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಅದೆಲ್ಲಾ ಬಿಡಿ; ಮುಖ್ಯ ವಿಷಯಕ್ಕೆ ಬರ್ತೀವಿ ಕೇಳಿ. ಕೆಎಸ್‌ಟಿಡಿಸಿ ಇದೀಗ ಒಂದು ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಒಂದು ದಿನದ ಟೂರ್ ಪ್ಯಾಕೇಜ್ ಅನ್ನು ನಿಮಗಾಗಿ ಹೊತ್ತು ತಂದಿದೆ. ಅದನ್ನು ನೀವು ರಿಲ್ಯಾಕ್ಸ್ ಟ್ರಿಪ್ ಎಂದುಕೊಳ್ಳಬಹುದು. ರಾಜಧಾನಿ ಬೆಂಗಳೂರಿನಿಂದ ಕೋಟೆನಾಡು ಚಿತ್ರದುರ್ಗಕ್ಕೆ ಕೆಎಸ್‌ಟಿಡಿಸಿ ನಿಮ್ಮನ್ನು ಕರೆದೊಯ್ಯಲಿದೆ.. ನಿಮಗೂ ಗೊತ್ತಿರುವಂತೆ ಚಿತ್ರದುರ್ಗ ಎಲ್ಲ ಪ್ರವಾಸಿಗರ ಹಾಟ್ ಫೇವರಿಟ್ ಸ್ಪಾಟ್. ಚಾರಣಿಗರಿಗಂತೂ ದುರ್ಗದ ಕೋಟೆ ಅಚ್ಚುಮೆಚ್ಚು. ರಣ ಬಿಸಿಲಿನಲ್ಲೂ ದುರ್ಗದ ಕೋಟೆಯನ್ನು ಹತ್ತಿ ಇಳಿಯುವವರಿದ್ದಾರೆ. ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ದಣಿವಾರಿಸಿಕೊಳ್ಳುತ್ತಾ ನೀವು ಸುತ್ತಬೇಕು ಅಷ್ಟೇ. ಅಲ್ಲಿ ಓಬವ್ವನ ಕಿಂಡಿ ಇದೆ. ಓಬವ್ವನ ಪುಣ್ಯಭೂಮಿಯೂ ಇದೆ. ದುರ್ಗದ ಪ್ರತಿ ಸ್ಥಳವೂ ಶೌರ್ಯದ ಕಥೆಗಳನ್ನು ಪ್ರವಾಸಿಗನ ಕಿವಿಗಳಲ್ಲಿ ಉಸುರುತ್ತದೆ.
ಸುತ್ತಲು ಬರೀ ಕೋಟೆ, ಕೊತ್ತಲ, ಪಾಳುಬಿದ್ದ ಜಾಗಗಳು ಮತ್ತು ಬಂಡೆಗಲ್ಲುಗಳು ಕಾಣಬಹುದು. ಆದರೆ ಕಲ್ಲು ಕೂಡ ಒಂದೊಂದು ಪುಣ್ಯ ಮತ್ತು ದುರಂತ ಕಥೆಗಳನ್ನು ಹೇಳಬಲ್ಲವು. ಚಿತ್ರದುರ್ದಗದ ಕೋಟೆಯಿಂದ ಚಂದ್ರವಳ್ಳಿ ಕೇವ್ ಮತ್ತು ಅಲ್ಲಿಂದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಮೆಮೋರಿಯಲ್ ಹಾಲ್‌ಗೆ ಕೆಎಸ್‌ಟಿಡಿಸಿಯು ಪ್ರವಾಸಿಗರನ್ನು ಕರೆದೊಯ್ಯಲಿದೆ. ಒಂದು ದಿನ ಪೂರಾ ನಿಮ್ಮನ್ನು ಒಳ್ಳೆಯ ಜಾಗಗಳಿಗೆ ಕರೆದೊಯ್ದು ಪರಿಪೂರ್ಣ ಪ್ರವಾಸದ ಅನುಭವದ ಬುತ್ತಿಯನ್ನು ನೀಡಲಿದೆ. ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿರುವ ಮತ್ತು ಹೊಸ ಕ್ರಾಂತಿಗಳಿಗೆ ಮುನ್ನುಡಿ ಬರೆಯಲು ಸಜ್ಜಾಗಿರುವ ಕೆಎಸ್‌ಟಿಡಿಸಿಗೆ ವಂದನೆ. ಅಭಿನಂದನೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕವು ಗಣನೀಯವಾದ ಸಾಧನೆ ಮಾಡಲಿ ಎಂಬುದೇ ರಾಜ್ಯದ ಪ್ರತಿ ಪ್ರವಾಸಿಗನ ಆಶಯ.

ಪ್ಯಾಕೇಜ್
ದಿನ-1
ಬೆಳಗ್ಗೆ 6.00 ಗಂಟೆ: ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ಹೊರಡಲಾಗುತ್ತದೆ
ಬೆಳಗ್ಗೆ 8.30 ಗಂಟೆ: ದಾರಿ ಮಧ್ಯೆ ಉಪಾಹಾರ
ಬೆಳಗ್ಗೆ 10.00 - ಮಧ್ಯಾಹ್ನ 1.30ರವರೆಗೆ : ಚಿತ್ರದುರ್ಗ ಕೋಟೆ ಭೇಟಿ
ಮಧ್ಯಾಹ್ನ 1.30 ಗಂಟೆ : ಊಟ
ಮಧ್ಯಾಹ್ನ 1.30 - ಸಂಜೆ 5.00ರವರೆಗೆ : ಚಂದ್ರವಳ್ಳಿ ಗುಹೆ, ನಿಜಲಿಂಗಪ್ಪ ಸ್ಮಾರಕ ಭವನಕ್ಕೆ ಭೇಟಿ
ರಾತ್ರಿ 9.30 ಗಂಟೆ : ಬೆಂಗಳೂರಿಗೆ ಹಿಂತಿರುಗಲಾಗುತ್ತದೆ
ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.
ಹೊಟೇಲ್ ಮಯೂರ ದುರ್ಗದಲ್ಲಿ ಆತಿಥ್ಯ
ಆತಿಥ್ಯ ಮತ್ತು ಸತ್ಕಾರಕ್ಕೆ ಮಯೂರ ಹೆಸರುವಾಸಿಯಾಗಿದೆ. ಆತಿಥ್ಯ ಮತ್ತು ವಾಸ್ತವ್ಯ ಎಂದರೆ ಮಯೂರ ಎಂಬಷ್ಟರಮಟ್ಟಿಗೆ ಅದು ಬ್ರಾಂಡ್ ಆಗಿದೆ. ದೇಶ-ವಿದೇಶದಿಂದ ಬರುವ ಪ್ರವಾಸಿಗರು ಮಯೂರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಶುಚಿ ಮತ್ತು ರುಚಿಯಾದ ಊಟದ ಜತೆಗೆ ಗುಣಮಟ್ಟದ ಆತಿಥ್ಯ ನೀಡುತ್ತಾ ಪ್ರವಾಸಿಗನ ಎಲ್ಲ ಬೇಕು ಬೇಡಗಳನ್ನು ಮಯೂರ ಬಹಳ ಅಚ್ಚುಕಟ್ಟಾಗಿ ಈಡೇರಿಸುತ್ತಾ ಬಂದಿದೆ. ಊಟೋಪಚಾರದ ಜತೆಗೆ ಇನ್ನಿತರ ಚಟುವಟಿಕೆಗಳು, ಮನೋರಂಜಿಸುವ ಸುತ್ತಮುತ್ತಲಿನ ಹಿತವಾದ ವಾತಾವರಣ ಪ್ರತಿ ಪ್ರವಾಸಿಗನ ಮನಸೆಳೆಯುತ್ತವೆ.
ರಾಜ್ಯದ ಮೂಲೆ ಮೂಲೆಯಲ್ಲೂ ಹೊಟೇಲ್ ಮಯೂರ ಮನೆ ಮಾತಾಗಿದೆ. ಮಯೂರವೆಂದರೆ ಬಜೆಟ್ ಫ್ರೆಂಡ್ಲಿ ಹೊಟೇಲ್. ಕೆಎಸ್‌ಟಿಡಿಸಿ ಮೂಲಕ ಪ್ರವಾಸ ಕೈಗೊಳ್ಳುವ ಪ್ರತಿ ಪ್ರವಾಸಿಗನೂ ಮಯೂರ ಆತಿಥ್ಯವನ್ನು ಸ್ವೀಕರಿಸಬಹುದು. ಹತ್ತಾರು ವರ್ಷಗಳಿಂದ ಮಯೂರ ಉದ್ಯಮ ಕ್ಷೇತ್ರದ ಅನುಭವಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಸುದೀರ್ಘ ವರ್ಷಗಳ ಅನುಭವದ ಬುತ್ತಿಯೊಂದಿಗೆ ಮಯೂರ ತನ್ನಲ್ಲಿಗೆ ಬರುವ ಪ್ರವಾಸಿಯನ್ನು ಉಪಚರಿಸುತ್ತದೆ. ಹೀಗಾಗಿಯೇ ಆತಿಥ್ಯ ಕ್ಷೇತ್ರದಲ್ಲಿ ಎಷ್ಟೋ ಹೊಟೇಲ್ ಮತ್ತು ಉದ್ಯಮ ಸಂಸ್ಥೆಗಳು ಅವಿರತ ಶ್ರಮಿಸುತ್ತಿದ್ದರೂ ಅವುಗಳಿಗಿಂತ ಕೊಂಚ ಭಿನ್ನ ಮತ್ತು ವಿಭಿನ್ನವಾಗಿ ಮಯೂರ ತಲೆಯೆತ್ತಿ ನಿಂತಿದೆ. ಇಲ್ಲಿ ವಾಸ್ತವ್ಯಕ್ಕಂತೂ ಹೇಳಿ ಮಾಡಿಸಿದ ಅದ್ಭುತ ವಾತಾವರಣವಿದೆ. ಅಲ್ಲಿನ ಸಿಬ್ಬಂದಿ ಮನೆಯ ನೆಂಟರಂತೆ ಮಾತಿಗಿಳಿದು ಸತ್ಕರಿಸುತ್ತಾರೆ.
ಮೊದಲೇ ಹೇಳಿದಂತೆ ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗನಿಗೂ ಹೊಟೇಲ್ ಮಯೂರದಲ್ಲಿ ರಾಜಾತಿಥ್ಯವಿದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್ನ ಶಾಖೆಗಳಿವೆ. ಕಲ್ಲಿನ ಕೋಟೆಯಾದ ಚಿತ್ರದುರ್ಗದಲ್ಲೂ ಮಯೂರ ದುರ್ಗ ಹೊಟೇಲ್ ಇದೆ. ಹೇಳಿಕೇಳಿ ಚಿತ್ರದುರ್ಗ ಶೌರ್ಯ ಮತ್ತು ಘನತೆಗೆ ಹೆಸರುವಾಸಿಯಾದ ತಾಣ. ದುರ್ಗ ಎಂದೊಡನೆ ಮದಕರಿನಾಯಕ ನೆನಪಾಗುತ್ತಾನೆ. ವೀರವನಿತೆ ಓಬವ್ವಳ ಸಾಹಸಗಾಥೆಯೂ ನೆನಪಾಗುತ್ತದೆ. ಚಿತ್ರದುರ್ಗವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇದು ಬೆಂಗಳೂರಿನಿಂದ ವಾಯುವ್ಯಕ್ಕೆ 202 ಕಿ.ಮೀ ದೂರದಲ್ಲಿದ್ದು, ದಖ್ಖನ್ ಪ್ರಸ್ಥಭೂಮಿಯ ಹೃದಯಭಾಗದಲ್ಲಿದೆ. ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಚಿತ್ರದುರ್ಗವು ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ಈ ಜಿಲ್ಲೆಯು ವೇದಾವತಿ ನದಿಯ ಕಣಿವೆಯಲ್ಲಿ ತನ್ನ ನೆಲೆಯನ್ನು ಹೊಂದಿದ್ದು, ವಾಯುವ್ಯದಲ್ಲಿ ತುಂಗಭದ್ರಾ ನದಿ ಶಾಂತವಾಗಿ ಹರಿಯುತ್ತದೆ.

ಬಿಸಿಲು ನಾಡಾದರೂ ಅಲ್ಲಿ ನಿತ್ಯಹರಿದ್ವರ್ಣವಿದೆ. ಕೋಟೆ ಕೊತ್ತಲ ಮತ್ತು ಪರ್ವತಗಳಿವೆ. ಚಿತ್ರದುರ್ಗ ಚಾರಣಿಗರಿಗೆ ತೀರಾ ಆಪ್ತವಾಗುತ್ತದೆ. ಅರೆ.. ನಿಮ್ಮ ವಿಶ್ರಾಂತಿಗೆ ಮತ್ತು ಊಟಕ್ಕೆ ಹೊಟೇಲ್ ಮಯೂರ ದುರ್ಗ ಚಿತ್ರದುರ್ಗ ಕೋಟೆಯ ಬಳಿ ಇದೆ. ನಿಮ್ಮ ವೀಕೆಂಡ್ ದಿನಗಳನ್ನು ಇಲ್ಲಿ ಕಳೆಯಬಹುದು. ಹೊಟೇಲ್‌ನಲ್ಲಿ 8 ಹವಾನಿಯಂತ್ರಿತ ರೂಮುಗಳು, 8 ಹಾಸಿಗೆಗಳ 4 ಡಾರ್ಮಿಟರಿಗಳು ಮತ್ತು ಸಭಾಂಗಣಗಳಿವೆ. ಚಿತ್ರದುರ್ಗದ ಕಡೆಗೆ ಪ್ರವಾಸಕ್ಕೆ ಹೊರಟಾಗ ಹೊಟೇಲ್ ಮಯೂರ ದುರ್ಗದಲ್ಲಿ ಉಳಿದುಕೊಳ್ಳಿ. ಕೆಎಸ್‌ಟಿಡಿಸಿ ಜತೆಗೆ ನೀವು ಟ್ರಾವೆಲ್ ಮಾಡಿದರೆ ಮಯೂರ ಬೋನಸ್. ಪ್ರವಾಸಕ್ಕೆ ಹೊರಟು ಎಷ್ಟು ದಿನಗಳಾದವು ನೆನಪಿದ್ಯಾ? ಹೂಂ.. ನಾಳೆಯೇ ಬ್ಯಾಗ್ ಪ್ಯಾಕ್ ಮಾಡಿ ಹೊರಡಿ.. ಹ್ಯಾಪಿ ಜರ್ನಿ..
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org