ಸಿಗಂದೂರಿನಲ್ಲಿ ಪ್ರತಿವರ್ಷ ಸಂಕ್ರಾಂತಿಯಲ್ಲಿ ನಡೆಯುವ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಜನವರಿ 14 ಮತ್ತು 15 ರಂದು ಜರುಗಲಿದೆ. ವಿಶೇಷವೆಂದರೆ ಶರಾವತಿ ನದಿಗೆ ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯಾದ ನಂತರ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದೆ.

ಮೊದಲ ದಿನದ ಕಾರ್ಯಕ್ರಮಗಳು

sigandur

ಮೊದಲ ದಿನ ಅಂದರೆ ಜನವರಿ 14ರಂದು ಬೆಳಗ್ಗೆ 4 ಗಂಟೆಗೆ ಮಹಾಭಿಷೇಕ, ಹೂವು ಮತ್ತು ಆಭರಣಗಳ ಅಲಂಕಾರ, 5 ಗಂಟೆಗೆ ಗೋಪೂಜೆ, 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ, 8 ಗಂಟೆಗೆ ರಥಪೂಜೆಯ ಮೂಲಕ ರಥ ಮತ್ತು ಪಲ್ಲಕ್ಕಿಯು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಬೆಳಗ್ಗೆ 8.30ಕ್ಕೆ ಚಂಡಿಕಾ ಹೋಮ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಾಲಯ ಪ್ರವೇಶ,12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಲಿದೆ.

ಮಧ್ಯಾಹ್ನ 1.15ಕ್ಕೆ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 5 ಗಂಟೆಗೆ ಗುರುಪೂಜೆ ನೆರವೇರಲಿದ್ದು, 6 ಗಂಟೆಗೆ ಗಂಗಾರತಿ ನೆರವೇರಲಿದೆ. ಸಂಜೆ 7 ಗಂಟೆಯಿಂದ ಶಿವಧೂತ ಗುಳಿಗ ನಾಟಕ ಪ್ರದರ್ಶನವಿದೆ. ಬಳಿಕ ರಾತ್ರಿ 9.30ಕ್ಕೆ ಗಾನ ಮಯೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ

ಎರಡನೆಯ ದಿನದ ಕಾರ್ಯಕ್ರಮಗಳು

ಮೂಲಸ್ಥಾನದಲ್ಲಿ ಬೆಳಗ್ಗೆ 5.30ಕ್ಕೆ ಪುಣ್ಯಾಹ ಶುದ್ಧಿ, 6 ಗಂಟೆಗೆ ನವಚಂಡಿಕಾ ಹೋಮ ಪ್ರಾರಂಭ, 8.30ಕ್ಕೆ ಹೋಮ ಪೂರ್ಣಾಹುತಿ, 9 ಗಂಟೆಗೆ ಮಹಾಭಿಷೇಕ, ಹೂವಿನ ಮತ್ತು ಆಭರಣ ಅಲಂಕಾರ, ಮಹಾಪೂಜೆ, 10.30ಕ್ಕೆ ಕುಂಭ ಲಗ್ನದಲ್ಲಿ ಪಲ್ಲಕ್ಕಿ ಉತ್ಸವ ಮತ್ತು ಜ್ಯೋತಿ ಮೆರವಣಿಗೆ ಪ್ರಾರಂಭವಾಗಲಿದೆ.

ದೇವಿಯ ಇಂದಿನ ದೇವಾಲಯದಲ್ಲಿ ಮುಂಜಾನೆ ಮಹಾಭಿಷೇಕ, ಹೂವಿನ ಮತ್ತು ಆಭರಣ ಅಲಂಕಾರ, ಮಹಾಪೂಜೆ ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ, 8 ಗಂಟೆಗೆ ನವಚಂಡಿಕಾ ಹೋಮ, ಮಧ್ಯಾಹ್ನ 3 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸಂಜೆ 5 ಗಂಟೆಗೆ ಶ್ರೀಚಕ್ರ ಸಹಿತ ದುರ್ಗಾ ದೀಪಪೂಜೆ, ರಂಗಪೂಜೆ, ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮ 7 ಗಂಟೆಗೆ ಪಟ್ಲ ಸತೀಶ್ ಶೆಟ್ಟರ ಭಾಗವತಿಕೆಯ ಪಾವಂಜೆ ಮೇಳದ ಯಕ್ಷಗಾನ : ಶ್ರೀ ದೇವಿ ಲಲಿತೋಪಖ್ಯಾನ ನಡೆಯಲಿದೆ.