Monday, August 18, 2025
Monday, August 18, 2025

ಕುತುಬ್ ಮಿನಾರ್‌ನ 1,600 ವರ್ಷ ಹಳೆಯ ಕಬ್ಬಿಣದ ಕಂಬ ಒಂದಿಷ್ಟು ತುಕ್ಕು ಹಿಡಿದಿಲ್ಲ- ಇದಕ್ಕೆ ಕಾರಣ ಏನು ಗೊತ್ತಾ?

ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾದ ದೆಹಲಿಯ(Delhi) ಕುತುಬ್ ಮಿನಾರ್ ಸಂಕೀರ್ಣದಲ್ಲಿ (Qutub Minar Complex) ನಿಂತಿರುವ 1600 ವರ್ಷಗಳಷ್ಟು ಹಳೆಯ ಕಬ್ಬಿಣದ ಕಂಬವು (Iron Pillar) ತುಕ್ಕು ಹಿಡಿಯದೇ ಇಂದಿಗೂ ಶಾಶ್ವತವಾಗಿ ನಿಂತಿದೆ. 7.2 ಮೀಟರ್ ಎತ್ತರ ಮತ್ತು 6 ಟನ್ ತೂಕದ ಈ ಕಂಬವು ವಿಜ್ಞಾನಿಗಳಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ. - ಸುಶ್ಮಿತಾ ಜೈನ್‌

ನವದೆಹಲಿ: ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾದ ದೆಹಲಿಯ(Delhi) ಕುತುಬ್ ಮಿನಾರ್ ಸಂಕೀರ್ಣದಲ್ಲಿ (Qutub Minar Complex) ನಿಂತಿರುವ 1600 ವರ್ಷಗಳಷ್ಟು ಹಳೆಯ ಕಬ್ಬಿಣದ ಕಂಬವು (Iron Pillar) ತುಕ್ಕು ಹಿಡಿಯದೇ ಇಂದಿಗೂ ಶಾಶ್ವತವಾಗಿ ನಿಂತಿದೆ. 7.2 ಮೀಟರ್ ಎತ್ತರ ಮತ್ತು 6 ಟನ್ ತೂಕದ ಈ ಕಂಬವು ವಿಜ್ಞಾನಿಗಳಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ.

qutub minar

ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನಿಗೆ ಸಮರ್ಪಿತ

ಭಾರತೀಯ ಪುರಾತತ್ವ ಸರ್ವೇಕ್ಷಣೆ (ASI) ಪ್ರಕಾರ, ಈ ಕಬ್ಬಿಣದ ಕಂಬದ ಮೇಲೆ ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನಿಗೆ ಸಮರ್ಪಿತವಾದ ಶಾಸನಗಳಿವೆ. ಆದರೆ, ಈ ಕಂಬವು ಕುತುಬ್ ಮಿನಾರ್ ಸಂಕೀರ್ಣಕ್ಕಿಂತಲೂ ಹಳೆಯದು. ಸಾಮಾನ್ಯವಾಗಿ, ಕಬ್ಬಿಣ ಅಥವಾ ಕಬ್ಬಿಣದ ಮಿಶ್ರಲೋಹಗಳು ತೇವಾಂಶಕ್ಕೆ ಒಡ್ಡಿಕೊಂಡಾಗ ಕಾಲಾನಂತರದಲ್ಲಿ ತುಕ್ಕು ಹಿಡಿಯುತ್ತವೆ. ಆದರೆ, ಈ ಕಂಬವು ಯಾವುದೇ ರಕ್ಷಣಾತ್ಮಕ ಬಣ್ಣದ ಪದರವಿಲ್ಲದೇ ಇಂದಿಗೂ ತನ್ನ ಮೂಲ ಸ್ಥಿತಿಯಲ್ಲಿದೆ.

qutub minar new

ತುಕ್ಕು ಹಿಡಿಯದಿರುವ ರಹಸ್ಯ ಏನು?

1912ರಲ್ಲಿ ಭಾರತ ಮತ್ತು ವಿದೇಶದ ವಿಜ್ಞಾನಿಗಳು ಈ ಕಂಬದ ರಹಸ್ಯವನ್ನು ಅನ್ವೇಷಿಸಲು ಆರಂಭಿಸಿದರು. ರೂರ್ಕಿಯ ಎಂಜಿನಿಯರಿಂಗ್ ಕಾಲೇಜಿನ ಮುರ್ರೆ ಥಾಂಪ್ಸನ್ ಮತ್ತು ಸ್ಕೂಲ್ ಆಫ್ ಮೈನ್ಸ್‌ನ ಪರ್ಸಿ ಈ ಕಂಬದ ರಾಸಾಯನಿಕ ವಿಶ್ಲೇಷಣೆ ನಡೆಸಿ, ಇದು 7.66 ನಿರ್ದಿಷ್ಟ ಗುರುತ್ವಾಕರ್ಷಣೆಯ ಒರಿಜಿನಲ್ ಕಬ್ಬಿಣ (wrought iron) ಎಂದು ದೃಢಪಡಿಸಿದರು.

ಆದರೆ, 2003ರಲ್ಲಿ ಐಐಟಿ-ಕಾನ್ಪುರದ ಸಂಶೋಧಕರ ಒಂದು ಅಧ್ಯಯನವು ಈ ಕಂಬದ ನಿಜವಾದ ಎಂಜಿನಿಯರಿಂಗ್ ರಹಸ್ಯವನ್ನು ಬಯಲಿಗೆಳೆಯಿತು. ಈ ಕಂಬವು ಪ್ರಾಥಮಿಕವಾಗಿ ಒರಿಜಿನಲ್ ಕಬ್ಬಿಣದಿಂದ ಮಾಡಲ್ಪಟ್ಟಿದ್ದು, ಸುಮಾರು 1% ರಂಜಕ (Phosphorus) ಅಂಶವನ್ನು ಹೊಂದಿದೆ. ಇದರ ಜೊತೆಗೆ, ಕಂಬದ ಮೇಲ್ಮೈಯಲ್ಲಿ ಕಬ್ಬಿಣ, ಆಮ್ಲಜನಕ ಮತ್ತು ಜಲಜನಕದ ಸಂಯುಕ್ತವಾದ "ಮಿಸಾವೈಟ್" ಎಂಬ ತೆಳುವಾದ ಪದರ ಕಂಡುಬಂದಿದೆ.

qutub

ರಂಜಕದ ಪಾತ್ರ ಮತ್ತು ಪ್ರಾಚೀನ ತಂತ್ರಜ್ಞಾನ

ಅಧ್ಯಯನದ ಪ್ರಕಾರ, ದೆಹಲಿಯ ಕಂಬದ ಕಬ್ಬಿಣದಲ್ಲಿರುವ ಉನ್ನತ ರಂಜಕ ಅಂಶವು ತುಕ್ಕು-ನಿರೋಧಕತೆಗೆ ಪ್ರಮುಖ ಕಾರಣವಾಗಿದೆ. ಆಧುನಿಕ ಕಬ್ಬಿಣದಿಂದ ಭಿನ್ನವಾಗಿ, ಈ ಕಂಬವು ಗಂಧಕ (Sulfur) ಮತ್ತು ಮೆಗ್ನೀಸಿಯಮ್‌ನಿಂದ (Magnesium) ಮುಕ್ತವಾಗಿದೆ. ಪ್ರಾಚೀನ ಕುಶಲಕರ್ಮಿಗಳು "ಫೋರ್ಜ್-ವೆಲ್ಡಿಂಗ್" ಎಂಬ ತಂತ್ರವನ್ನು ಬಳಸಿದ್ದರು, ಇದರಲ್ಲಿ ಕಬ್ಬಿಣವನ್ನು ಬಿಸಿಮಾಡಿ, ಗುದ್ದಿ ರೂಪಿಸಲಾಗುತ್ತದೆ. ಈ ವಿಧಾನವು ರಂಜಕದ ಅಂಶವನ್ನು ಕಾಪಾಡಿಕೊಂಡು ಕಂಬಕ್ಕೆ ಶಕ್ತಿ ನೀಡಿದೆ ಎಂದು ವರದಿಯನ್ನು ಬರೆದ ಆರ್ಕಿಯೊ-ಮೆಟಲರ್ಜಿಸ್ಟ್ ಆರ್. ಬಾಲಸುಬ್ರಮಣಿಯಂ ಹೇಳಿದ್ದಾರೆ.

ಈ ಅಸಾಮಾನ್ಯ ತಂತ್ರಜ್ಞಾನವು ಕಂಬವನ್ನು ಶತಮಾನಗಳವರೆಗೆ ತುಕ್ಕುರಹಿತವಾಗಿರಿಸಿದೆ. ಆಧುನಿಕ ಕಾಲದಲ್ಲಿ ಈ ರೀತಿಯ ತಂತ್ರಜ್ಞಾನವನ್ನು ಬಳಸುವುದು ವಿರಳವಾಗಿದ್ದು, ಈ ಕಂಬವು ಭಾರತದ ಪ್ರಾಚೀನ ಲೋಹವಿಜ್ಞಾನದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.