Monday, August 18, 2025
Monday, August 18, 2025

ವಿಶ್ವದ ಅತ್ಯಂತ ಸಂತೋಷದಾಯಕ ನಗರವಿದು!

ವಿಶ್ವದ ಸಂತೋಷದಾಯಕ ನಗರ ಯಾವುದು ಎಂಬುದು ನಿಮಗೆ ಗೊತ್ತಾ? ಇನ್ಸ್ಟಿಟ್ಯೂಟ್ ಫಾರ್ ಕ್ವಾಲಿಟಿ ಆಫ್ ಲೈಫ್ (Institute for Quality of Life) ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದ ಅತ್ಯಂತ ಸಂತೋಷದಾಯಕ ನಗರ ಕೋಪನ್ ಹ್ಯಾಗನ್.

ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ನಿರಂತರವಾಗಿ ಅಗ್ರಸ್ಥಾನದಲ್ಲಿದೆ. ಆದರೆ ನಗರಗಳ ವಿಷಯಕ್ಕೆ ಬಂದಾಗ, ಡ್ಯಾನಿಶ್ ರಾಜಧಾನಿ ಕೋಪನ್ ಹ್ಯಾಗನ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣ, ಅಂತರ್ಗತ ನೀತಿಗಳು, ಆರ್ಥಿಕ ಸ್ಥಿರತೆ, ಹಸಿರಿನ ತಾಣಗಳು ಹೀಗೆ 82 ಸೂಚ್ಯಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದ್ದು, ಇವೆಲ್ಲದರಲ್ಲೂ ಕೋಪನ್ ಹ್ಯಾಗನ್ ಟಾಪ್‌ ರೇಟಿಂಗ್‌ ಪಡೆದುಕೊಂಡಿದೆ.

7170RymHsIL._AC_UF894,1000_QL80_

"ಆರೋಗ್ಯ ಮತ್ತು ಯೋಗಕ್ಷೇಮವು ಕೋಪನ್ ಹ್ಯಾಗನ್ ನಲ್ಲಿ ಜೀವನದ ಮೂಲಾಧಾರಗಳಾಗಿವೆ" ಎಂದು ವರದಿ ಹೇಳುತ್ತದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ವಿಚಾರದಲ್ಲಿ1,000 ನಿವಾಸಿಗಳಿಗೆ 4.4 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಜನರ ಜೀವಿತಾವಧಿಯು ಸರಾಸರಿ 80 ವರ್ಷಗಳಾಗಿವೆ. ಇದರ ಜೊತೆಗೆ 37 ಗಂಟೆಗಳ ಸರಾಸರಿ ಕೆಲಸ, ನಗರವಾದರೂ ಮಾಲಿನ್ಯವಿರದ ಶುದ್ಧ ಗಾಳಿಯ ಸೇವನೆ ಮತ್ತು ಸಂಚಾರಕ್ಕೆ ಬೈಸಿಕಲ್ ಉಪಯೋಗಿಸುವ ಇಲ್ಲಿನ ಮಂದಿ ಸಂತೋಷಕರ ಜೀವನವನ್ನು ಸಂಭ್ರಮಿಸುತ್ತಾರೆ.

ಜ್ಯೂರಿಚ್ ಮತ್ತು ಸಿಂಗಾಪುರ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದರೆ, ಡ್ಯಾನಿಶ್ ನ ಆರ್ಹಸ್ ಮತ್ತು ಆಂಟ್ವೆರ್ಪ್ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ.

ನೀವು ಸಂತೋಷದಾಯಕವಾದ ಕೋಪನ್ ಹ್ಯಾಗನ್ ಗೆ ಭೇಟಿಕೊಡಬೇಕೆಂದಿದ್ದರೆ ಅಲ್ಲಿನ ಕೆಲವು ಅದ್ಭುತ ತಾಣಗಳಿಗೆ ತಪ್ಪದೇ ಹೋಗಿ ಬನ್ನಿ.

ಟಿವೋಲಿ (Tivoli) ಉದ್ಯಾನಗಳು

ಟಿವೋಲಿ ಕೋಪನ್ ಹ್ಯಾಗನ್ ನ ಹೃದಯಭಾಗದಲ್ಲಿರುವ ಟಿವೋಲಿ ಉದ್ಯಾನವನವು ವಿಶ್ವದ ಅತ್ಯಂತ ಹಳೆಯ ಮನೋರಂಜನಾ ಉದ್ಯಾನವನಗಳಲ್ಲಿ ಒಂದಾಗಿದೆ. ಸುಂದರವಾದ ಈ ಉದ್ಯಾನವನವು 1843 ರಲ್ಲಿ ಸ್ಥಾಪನೆಯಾಯಿತು.

tivoli-gardens-preview-image_c2

ದಿ ಲಿಟಲ್ ಮೆರ್ಮೇಯ್ಡ್ (The Little Mermaid)

ನಗರದಲ್ಲಿ ಹೆಚ್ಚು ಛಾಯಾಚಿತ್ರ ಮಾಡಲಾದ ಪ್ರವಾಸಿ ತಾಣಗಳಲ್ಲಿ ಒಂದಾದ ಈ ಸಣ್ಣ ಕಂಚಿನ ಮತ್ತು ಗ್ರಾನೈಟ್ ಪ್ರತಿಮೆಯು ಲ್ಯಾಂಗೆಲಿನಿ ವಾಯುವಿಹಾರದಲ್ಲಿರುವ ಬಂಡೆಯ ಮೇಲಿದೆ. ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರ 'ದಿ ಲಿಟಲ್ ಮೆರ್ಮೇಯ್ಡ್' ನಿಂದ ಸ್ಫೂರ್ತಿ ಪಡೆದ ಈ ಪ್ರತಿಮೆಯನ್ನು ಆಗಸ್ಟ್ 1913 ರಲ್ಲಿ ಶಿಲ್ಪಿ ಎಡ್ವರ್ಡ್ ಎರಿಕ್ಸನ್ ನಿರ್ಮಿಸಿದರು.

ನಗರ ಸುತ್ತಲು ಸೈಕಲ್ ಸವಾರಿ

ಕೋಪನ್‌ಹೇಗನ್ ವಿಶ್ವದ ಅತ್ಯಂತ ಬೈಕ್ ಸ್ನೇಹಿ ನಗರಗಳಲ್ಲಿ ಒಂದಾಗಿದ್ದು,390 ಕಿ.ಮೀ.ಗೂ ಹೆಚ್ಚು ಬೈಕ್ ಲೇನ್‌ಗಳನ್ನು ಇದು ಹೊಂದಿದೆ. ನೀವು ದಿನವಿಡೀ ನಗರದ ಪ್ರಮುಖ ತಾಣಗಳನ್ನು ಸೈಕಲ್‌ನಲ್ಲಿ ಪ್ರಯಾಣಿಸುವ ಮೂಲಕ ಆನಂದಿಸಬಹುದು. ಸ್ಥಳೀಯರು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರಲು ಇದೂ ಕೂಡ ಒಂದು ಕಾರಣವೆಂದರೂ ತಪ್ಪಾಗಲಾರದು.

ನೈ ಕಾರ್ಲ್ಸ್‌ಬರ್ಗ್ ಗ್ಲಿಪ್ಟೋಟೆಕ್ (Ny Carlsberg Glyptotek)

ಕಾರ್ಲ್ಸ್‌ಬರ್ಗ್ ಬ್ರೂಯಿಂಗ್ ಕುಟುಂಬದಿಂದ ಸ್ಥಾಪಿಸಲ್ಪಟ್ಟ ಈ ವಸ್ತುಸಂಗ್ರಹಾಲಯವು ಬೆರಗುಗೊಳಿಸುವ ಕಲಾ ಸಂಗ್ರಹಗಳನ್ನು ಹೊಂದಿದೆ. ಕೋಪನ್ ಹ್ಯಾಗನ್ ಗೆ ಭೇಟಿ ನೀಡುವ ವೇಳೆ ಇಲ್ಲಿಗೆ ಹೋಗಿ ಬರಲು ಮರೆಯದಿರಿ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.