Monday, August 18, 2025
Monday, August 18, 2025

ಒಂದಲ್ಲ... ಎರಡಲ್ಲ... ಬರೋಬ್ಬರಿ 22ರಾಜ್ಯಗಳಲ್ಲಿ ಟೂರ್‌; ಈ ಫ್ಯಾಮಿಲಿಯ ಟ್ರಾವೆಲಿಂಗ್‌ ಕ್ರೇಜ್‌ ನೋಡಿ ನೆಟ್ಟಿಗರು ಫುಲ್‌ ಫಿದಾ!

ಏಳು ಜನರಿರುವ ಕುಟುಂಬವೊಂದು ತಮ್ಮ ಸ್ವಂತ ಕ್ಯಾರವಾನ್‍ನಲ್ಲಿ ಕೇರಳದಿಂದ ಲಡಾಖ್‌ನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇವರು ಇಲ್ಲಿಯವರೆಗೆ 22 ಭಾರತೀಯ ರಾಜ್ಯಗಳನ್ನು ಸುತ್ತಿದ್ದಾರೆ. ತಾವು ಮಾಡಿದ ಪ್ರಯಾಣವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವ್ಯಾಪಕ ಗಮನಸೆಳೆದು ವೈರಲ್(Viral News) ಆಗಿ, 53.2 ಮಿಲಿಯನ್ ವ್ಯೂವ್ಸ್‌ ಗಳಿಸಿದೆ.

ಟ್ರಿಪ್‌, ಟೂರ್‌ ಎಂದರೆ ಯಾರಿಗೆ ತಾನೇ ಇಷ್ಟ ಇಷ್ಟ ಇಲ್ಲ ಹೇಳಿ. ನಿತ್ಯದ ಜಂಜಾಟ, ಕೆಲಸದೊತ್ತಡದಿಂದ ಮುಕ್ತಿ ಪಡೆದು ಒಮ್ಮೆ ಎಲ್ಲಾದರೂ ದೂರ ಟ್ರಿಪ್‌ ಹೋಗಿ ಬಿಡೋಣ ಎಂಬುದು ಎಲ್ಲರೂ ಸಾಮಾನ್ಯವಾಗಿ ಆಡುವ ಮಾತು. ಆದರೆ ಎಲ್ಲರಿಗೂ ಆ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಕೇರಳದ ಕುಟುಂಬವೊಂದು ಸಾಹಸಮಯ ಪ್ರವಾಸ ಕೈಗೊಂಡು ಸುದ್ದಿಯಲ್ಲಿದ್ದಾರೆ. ಅವರು ಕೇರಳದಿಂದ ಲಡಾಖ್‌ಗೆ ಕೈಗೊಂಡ ಪ್ರವಾಸದಲ್ಲಿ ತಮ್ಮ ಸ್ವಂತ ಕ್ಯಾರವಾನ್‍ನಲ್ಲಿ ಪ್ರಯಾಣಿಸುತ್ತಾ ಸುಮಾರು 22 ರಾಜ್ಯಗಳನ್ನು ಸುತ್ತಿದ್ದಾರಂತೆ. ಕ್ಯಾರವಾನ್‍ ಓಡಿಸಿದ ಕೇರಳದ ಮಹಿಳೆಯೊಬ್ಬಳು ಕರ್ನಾಟಕದಾದ್ಯಂತ ತಾವು ಮಾಡಿದ ಪ್ರಯಾಣವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್(Viral Video) ಆಗಿ, 53.2 ಮಿಲಿಯನ್ ವ್ಯೂವ್ಸ್‌ ಗಳಿಸಿದೆ.

puttettu

ಹೊರಗಿನಿಂದ ನೋಡಿದರೆ ಸಾಮಾನ್ಯ ಬಸ್‌ನಂತೆ ಕಾಣುವ ಈ ಕ್ಯಾರವಾನ್‍ ಒಳಗೆ ಮನೆಯಂತೆ ಇದೆ. ಅದರಲ್ಲಿ ಹಾಸಿಗೆಗಳು, ರೆಫ್ರಿಜರೇಟರ್, ಅಡುಗೆಮನೆ, ಶೆಲ್ಫ್‌ಗಳು ಮತ್ತು ಸುಂದರವಾದ ಇಂಟಿರಿಯರ್‌ ಅನ್ನು ಒಳಗೊಂಡಿದೆ. ವಿಡಿಯೊವೊಂದರಲ್ಲಿ ಅವರು ತಮ್ಮ ಪ್ರವಾಸದ ಸಮಯದಲ್ಲಿ ಕ್ಯಾರವಾನ್‌ ತಯಾರಿಸಿದ ಮನೆಯ ಊಟದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

travel vlog puttettu

travel rounds

ಕೇರಳದಿಂದ ಲಡಾಖ್‌ವರೆಗಿನ 3,000 ಕಿಲೋಮೀಟರ್‌ಗಳಿಗೂ ಹೆಚ್ಚು ದೂರವನ್ನು ಕ್ರಮಿಸಿರುವ ಅವರು, ದಾರಿಯುದ್ದಕ್ಕೂ ಹಲವಾರು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. 3 ವರ್ಷದ ಮಗು ಸೇರಿದಂತೆ ಏಳು ಜನರಿರುವ ಈ ಕುಟುಂಬ ತಮ್ಮ ಕ್ಯಾರವಾನ್‌ನಲ್ಲಿ ಇನ್ನಷ್ಟು ತಾಣಗಳನ್ನು ಸುತ್ತುವ ಆಸೆಯಲ್ಲಿದ್ದಾರಂತೆ.

puttettu 2

ಇವರ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ನೆಟ್ಟಿಗರು ಕೂಡ ಕಾಮೆಂಟ್‌ ಮಾಡಿದ್ದಾರೆ. "ವಾವ್. ಇದು ಸುಂದರವಾಗಿದೆ. ಇದು ಪ್ರತಿಯೊಬ್ಬ ಪ್ರಯಾಣಿಕರ ಕನಸು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುವಂತೆ ಇವರನ್ನು ಆಹ್ವಾನಿಸಿದ್ದಾರೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..