ತೇರ ಏರಿ ಅಂಬರದಾಗೆ ʼನೇಸರʼ - ಸಾವಿರಾರು ಪ್ರವಾಸಿಗರ ನೆಚ್ಚಿನ ಸಂಸ್ಥೆ
ʼನೇಸರ ಟೂರ್ಸ್ʼ ಕಂಪನಿ ಕಳೆದ 13 ವರ್ಷಗಳಿಂದ ಸಾವಿರಾರು ಪ್ರವಾಸಿಗರಿಗೆ ಜಗತ್ತನ್ನು ತೋರಿಸಿದೆ. ಜಗದ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಬಜೆಟ್ ಫ್ರೆಂಡ್ಲಿ ಹಣದಲ್ಲಿ ಪ್ರವಾಸವನ್ನು ಯೋಜಿಸುವ ನೇಸರ ಜಗತ್ತನ್ನು ಮಾತ್ರ ತೋರಿಸಿ ಸುಮ್ಮನಾಗುವುದಿಲ್ಲ. ಗ್ರಾಹಕರಿಗೆ ಆತ್ಮೀಯತೆಯಿಂದ ಸೇವೆ ನೀಡುತ್ತದೆ.
ʻತೇರಾ ಏರಿ ಅಂಬರದಾಗೆ ನೇಸರ ನಗುತಾನೆʼ ಹಾಡನ್ನು ಅದೆಷ್ಟೋ ಬಾರಿ ಗುನುಗಿರುತ್ತೇವೆ. ಅಂಬರವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಆಸೆಯೂ ಆಗಿರುತ್ತದೆ. ಆದರೆ ಅಂಬರವನ್ನು ಹತ್ತಿರದಿಂದ ನೋಡುವುದಾದರೂ ಹೇಗೆ? ವಿಮಾನ ಏರಿ ಕುಳಿತರೆ ಖಂಡಿತ ನೋಡಬಹುದು. ಅಂಬರದ ಸೊಬಗನ್ನು ಆನಂದಿಸಬಹುದು. ಸಂತಸದ ಉಯ್ಯಾಲೆಯಲ್ಲಿ ಜೀಕಬಹುದು. ವಿಮಾನ ಏರಿದ ಮೇಲೆ ದೇಶ-ವಿದೇಶ ಸುತ್ತುವ ನಮ್ಮ ಕನಸೂ ಕೈಗೂಡುತ್ತದೆ. ಇತ್ತ ಮನಸ್ಸು ರೆಕ್ಕೆ ತೆರೆದ ಹಕ್ಕಿಯಾಗುತ್ತದೆ. ಜಗತ್ತು ಸುತ್ತುವ ಕನಸು ಈಗ ಕನಸಾಗಿ ಉಳಿದಿಲ್ಲ. ಅದನ್ನು ನನಸು ಮಾಡಲು ಟೂರ್ ಟ್ರಾವೆಲ್ ಕಂಪನಿಗಳು ಹುಟ್ಟಿಕೊಂಡಿವೆ. ಅಂಥ ನೂರಾರು ಕಂಪನಿಗಳ ಪೈಕಿ ʼನೇಸರ ಟೂರ್ಸ್ʼ ಕಂಪನಿಗೆ ಅಗ್ರಸ್ಥಾನ. ನೇಸರ ಕಳೆದ 13 ವರ್ಷಗಳಿಂದ ಸಾವಿರಾರು ಪ್ರವಾಸಿಗರಿಗೆ ಜಗತ್ತನ್ನು ತೋರಿಸಿದೆ. ಜಗದ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಬಜೆಟ್ ಫ್ರೆಂಡ್ಲಿ ಹಣದಲ್ಲಿ ಪ್ರವಾಸವನ್ನು ಯೋಜಿಸುವ ನೇಸರ ಜಗತ್ತನ್ನು ಮಾತ್ರ ತೋರಿಸಿ ಸುಮ್ಮನಾಗುವುದಿಲ್ಲ. ಗ್ರಾಹಕರಿಗೆ ಆತ್ಮೀಯತೆಯಿಂದ ಸೇವೆ ನೀಡುತ್ತದೆ. ಸೇವೆಯಲ್ಲಿ ಯಾವುದೇ ರಾಜಿಯಿಲ್ಲ. ನೇಸರ ಪ್ರವಾಸಿಗರನ್ನು ಬೆಚ್ಚನೆಯ ನೆನಪುಗಳಲ್ಲೂ ಮುಳುಗಿಸುತ್ತದೆ.

ಸ್ನೇಹಿತರ ಕಮಾಲ್
ನೇಸರ ಟೂರ್ಸ್‌ನ ಸ್ಥಾಪನೆ ಮತ್ತು ಸಾಧನೆಯ ಹಿಂದೆ ಸ್ನೇಹಿತರಿಬ್ಬರ ಕಮಾಲ್ ಇದೆ. ನೇಸರ ಜಿಗರ್ ಕ ದೋಸ್ತ್‌ಗಳು, ಹುಟ್ಟು ಸಾಹಸಿಗಳಾದ ಕೃಷ್ಣಮೂರ್ತಿ ದೀಕ್ಷಿತ್ ಮತ್ತು ಮೋಹನ್ ಹೆಗಡೆ ಅವರ ಕನಸಿನ ಕೂಸು. ವೃತ್ತಿಯಲ್ಲಿ ಎಂಜಿನಿಯರ್ ಮತ್ತು ಫೈನ್ ಆರ್ಟ್ ಕಲಾವಿದರಾಗಿದ್ದ ಈ ಸ್ನೇಹಿತರು ಮಹಾನಗರಿ ಬೆಂಗಳೂರಿನ ಸಹವಾಸಕ್ಕೆ ಬಿದ್ದು ನೇಸರ ಸಂಸ್ಥೆಯನ್ನು ಹುಟ್ಟು ಹಾಕಿದರು. ನೇಸರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಹತ್ತಾರು ಮಂದಿಗೆ ಉದ್ಯೋಗ ನೀಡಿದೆ. ಮಧ್ಯಮ ವರ್ಗದ ಜನರಿಗೂ ವಿದೇಶ ತೋರಿಸಿ ವಿಶ್ವಾಸಗಳಿಸಿದೆ. ನೇಸರದಲ್ಲಿ ಟೂರಿಸಂ ವಿಷಯದಲ್ಲೇ ಪದವಿಗಳಿಸಿರುವ ತಜ್ಞರಿದ್ದಾರೆ. ಅವರ ಮಾರ್ಗದರ್ಶನದಲ್ಲೇ ಇಡೀ ಪ್ರವಾಸ ರೂಪುಗೊಳ್ಳುತ್ತದೆ. ದೇಶದಾದ್ಯಂತ ನೇಸರದ ಶಾಖೆಗಳಿವೆ. ಬೆಂಗಳೂರು, ಶಿರಸಿ, ಜೈಪುರ ಮತ್ತು ಅಂಡಮಾನ್‌ನ ಫೋರ್ಟ್‌ಬ್ಲೇರ್‌ನಲ್ಲಿಯೂ ನೇಸರ ಛಾಪು ಮೂಡಿಸಿದೆ. ಜಗತ್ತಿನಾದ್ಯಂತ ನೇಸರ ಶಾಖೆಗಳನ್ನು ತೆರೆಯುವ ನಿಟ್ಟಿನಲ್ಲಿ ಕೃಷ್ಣಮೂರ್ತಿ ದೀಕ್ಷಿತ್ ಮತ್ತು ಮೋಹನ್ ಹೆಗಡೆ ಶ್ರಮಿಸುತ್ತಿದ್ದಾರೆ.
ನೇಸರ ವಿದೇಶಿ ಟೂರ್ ಪ್ಯಾಕೇಜ್‌ಗಳು
- 5 ದಿನಗಳ ಬಾಕು ಪ್ರವಾಸ
- 5 ದಿನಗಳ ತಾಷ್ಕೆಂಟ್ ಪ್ರವಾಸ
- 11 ದಿನಗಳ ಸಿಂಗಾಪುರ್ ಮಲೇಶಿಯಾ ಮತ್ತು ಥೈಲ್ಯಾಂಡ್
- 5 ದಿನಗಳ ದುಬೈ ಪ್ರವಾಸ
- 5 ದಿನಗಳ ಬಾಲಿ ಇಂಡೋನೇಷಿಯಾ ಪ್ರವಾಸ
- 7 ದಿನಗಳ ಭೂತಾನ್ ಪ್ರವಾಸ
- 5 ದಿನಗಳ ಹಾಂಕಾಂಗ್ ಪ್ರವಾಸ
- 5 ದಿನಗಳ ಮಾರಿಷಸ್ ಪ್ರವಾಸ
- 5 ದಿನಗಳ ಆಸ್ಟ್ರೇಲಿಯಾ ಪ್ರವಾಸ
- 6 ದಿನಗಳ ಕಾಂಬೋಡಿಯಾ ಪ್ರವಾಸ
- 11 ದಿನಗಳ ಯುರೋಪ್ ಪ್ರವಾಸ
ನೇಸರ ಕಂಪನಿಯ ಗ್ರೂಪ್ ಟೂರ್‌ಗಳು
- 5 ದಿನಗಳ ಕಾಶ್ಮೀರ ಪ್ರವಾಸ
- 6 ದಿನಗಳ ಅಂಡಮಾನ್ ನಿಕೋಬಾರ್ ಪ್ರವಾಸ
- 6 ದಿನಗಳ ಡಾರ್ಜಿಲಿಂಗ್ ಗ್ಯಾಂಗೋಕ್ ಪ್ರವಾಸ
- 6 ದಿನಗಳ ಅಮೃತಸರ ವೈಷ್ಣದೇವಿ, ಡಾಸಿ ಪ್ರವಾಸ
- 6 ದಿನಗಳ ಶಿಮ್ಲಾ ಕುಲು ಮನಾಲಿ ಪ್ರವಾಸ
- 6 ದಿನಗಳ ರಾಜಸ್ಥಾನ ಪ್ರವಾಸ
- 6 ದಿನಗಳ ಗುಜರಾತ್ ಪ್ರವಾಸ
- 5 ದಿನಗಳ ದೆಹಲಿ ಆಗ್ರಾ ಜೈಪುರ ಪ್ರವಾಸ
- 6 ದಿನಗಳ ಗುವಾಹಟಿ ಶಿಲ್ಲಾಂಗ್ ಪ್ರವಾಸ
- 6 ದಿನಗಳ ಕಾಶಿ ಅಯೋಧ್ಯಾ ಶಿಲ್ಲಾಂಗ್ ಪ್ರವಾಸ
- 6 ದಿನಗಳ ಲೇಹ್ ಲಡಾಕ್ ಪ್ರವಾಸ
- 7 ದಿನಗಳ ನೈನಿತಾಲ್ ಕಾರ್ಬೆಟ್ ಮನ್ಸೂರಿ ಪ್ರವಾಸ
- 4 ದಿನಗಳ ಪುರಿ-ಕೋನಾರ್ಕ್ ಭುವನೇಶ್ವರ್ ಪ್ರವಾಸ
- 5 ದಿನಗಳ ಮಧ್ಯಪ್ರದೇಶ ಪ್ರವಾಸ
- 12 ದಿನಗಳ ಗಂಗೋತ್ರಿ ಯಮನೋತ್ರಿ ಕೇದಾರನಾಥ ಬದರಿನಾಥ ಪ್ರವಾಸ

ಬಜೆಟ್ ಸ್ನೇಹಿ ಟ್ರಿಪ್ ಮತ್ತು ಅವಿಸ್ಮರಣೀಯ ನೆನಪುಗಳಿಗಾಗಿ ಇಂದೇ ಬುಕ್ ಮಾಡಿ
- 6 ದಿನಗಳ ಸಿಂಗಾಪುರ/ಮಲೇಷಿಯ ಪ್ರವಾಸ-1,25,467/-
- 6 ದಿನಗಳ ಬಾಲಿ ಪ್ರವಾಸ-99,876/-
- 7 ದಿನಗಳ ರಾಜಸ್ಥಾನ ಪ್ರವಾಸ-42,345/-
- 6 ದಿನಗಳ ಅಂಡಮಾನ್/ನಿಕೋಬಾರ್ ಪ್ರವಾಸ-46,745/-
- 7 ದಿನಗಳ ಕಾಶಿ/ಅಯೋಧ್ಯ ಪ್ರವಾಸ-48,576
- 6 ದಿನಗಳ ದುಬೈ ಪ್ರವಾಸ- 99,999/-
ಮಾರಿಷಸ್, ವಿಯೆಟ್ನಾಂ, ಶ್ರೀಲಂಕಾ, ಹಾಂಗ್‌ಕಾಂಗ್, ತಾಂಜಾನಿಯಾ ಮತ್ತು ಥೈಲ್ಯಾಂಡ್ ಪ್ರವಾಸವನ್ನೂ ನೇಸರ ಆಯೋಜಿಸುತ್ತದೆ. ಗ್ರಾಹಕರ ಸೇವೆಗೆ ಬದ್ಧವಾಗಿರುವ ನೇಸರ ಟೂರ್ಸ್ ನಿಮ್ಮ ಆಯ್ಕೆಯಾಗಲಿ. ನಿಮ್ಮ ಮುಂದಿನ ಪ್ರವಾಸದ ಯೋಜನೆಯ ಬಗ್ಗೆ ಚಿಂತೆಬೇಡ. ನಿಮಗಾಗಿ ನೇಸರವಿದೆ. ಜಗತ್ತು ಸುತ್ತುವ ನಿಮ್ಮ ಕನಸು ನೇಸರದಿಂದ ನನಸಾಗಲಿ.
ನೇಸರ ಶಾಖೆಗಳು
ಬೆಂಗಳೂರು, ಶಿರಸಿ, ಜೈಪುರ ಹಾಗೂ ಪೋರ್ಟ್ ಬೈರ್‌ನಲ್ಲಿ ನೇಸರ ಕಂಪನಿಯ ಪ್ರಮುಖ ಶಾಖೆಗಳಿವೆ.
ಈ ಕೆಳಗಿನ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.
ಸಂಪರ್ಕ ಹೇಗೆ?
ನಿಮ್ಮ ಪ್ರವಾಸದ ಬುಕ್ಕಿಂಗ್‌ಗಳಿಗಾಗಿ ಈ ನಂಬರಿಗೆ ಕರೆ ಮಾಡಬಹುದು.
9535520006, 9449995626, 9535504260, 9535530006
ವಿಳಾಸ: #13, 2ನೇ ಮಹಡಿ, ನಾಗರಭಾವಿ ಮುಖ್ಯರಸ್ತೆ, ವಿಜಯನಗರ, ಟೀಚರ್ಸ್ ಕಾಲೋನಿ,ನಾಗರಭಾವಿ, ಬೆಂಗಳೂರು-560072