Friday, October 3, 2025
Friday, October 3, 2025

ಚಿರತೆ ಅಂದ್ರೆ ಭಯವೇ ಇಲ್ಲ ಈ ರಾಜ್ಯದ ಜನರಿಗೆ..

ಕಾಡು ಪ್ರಾಣಿಗಳು ಅದರಲ್ಲೂ ಕ್ರೂರ ಮೃಗಗಳೆಂದರೆ ಮುಟ್ಟಬೇಕೆಂದುಕೊಂಡರೂ ಧೈರ್ಯ ಸಾಲದೆ ದೂರದಲ್ಲೇ ನಿಂತು ನೋಡುವ ಮಂದಿ ನಾವು. ಅಂಥದ್ದರಲ್ಲಿ ಚಿರತೆಯನ್ನು ಹತ್ತಿರದಲ್ಲೇ ಮಲಗಿಸಿಕೊಳ್ಳುವ, ಅವರೊಂದಿಗೆ ಹತ್ತಿರದಿಂದ ಬೆರೆಯುವ ಗ್ರಾಮವೊಂದಿಗೆ ಎಂದರೆ ನಂಬುತ್ತೀರಾ ?

ಬೆಳಗಾದರೆ ಚಿರತೆಯೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಾ, ರಾತ್ರಿಯಾದರೆ ಚಿರತೆಯನ್ನೇ ಪಕ್ಕದಲ್ಲಿ ಮಲಗಿಸಿಕೊಳ್ಳುವ ಧೈರ್ಯ ನಿಮಗೆ ಇಲ್ಲದಿರಬಹುದು. ಆದರೆ ರಾಜಸ್ಥಾನದ ಆ ಗ್ರಾಮದಲ್ಲಿ ನಿತ್ಯವೂ ಇದೇ ರೂಢಿ. ಹೌದು, ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ (Pali district of Rajasthan) ಜನರು ಚಿರತೆಗಳನ್ನು ಕಂಡು ಬೆಚ್ಚಿಬೀಳುವವರಲ್ಲ, ಬದಲಾಗಿ ಚಿರತೆಯನ್ನು ಸಾಕು ಪ್ರಾಣಿಗಳಂತೆ ಕಂಡು, ತಮ್ಮೊಂದಿಗೆ, ತಮ್ಮವರಂತೆಯೇ ಕಾಣುವವರು.

ಹೌದು, ಇದು ಕಥೆಯಲ್ಲ, ನಿಜ ಜೀವನದಲ್ಲಿ ನಡೆಯುತ್ತಿರುವ ವಿಚಾರವೇ ಆಗಿದೆ. ಇಲ್ಲಿ ಚಿರತೆಯೆಂದರೆ ಮನುಷ್ಯರಿಗೆ ಭಯವಿಲ್ಲ, ಬದಲಾಗಿ ಪರಸ್ಪರ ನಂಬಿಕೆ, ವಿಶ್ವಾಸದ ವಿಶಿಷ್ಟ ಬಂಧವಿದೆ. ಇಲ್ಲಿನ ಜನರು ಚಿರತೆಗಳನ್ನು ಶತ್ರುಗಳೆಂದು ಪರಿಗಣಿಸುವ ಬದಲು, ಹಳ್ಳಿಯ ರಕ್ಷಕರೆಂದು ಪರಿಗಣಿಸುತ್ತಾರೆ.

PTI09_17_2022_000044B

ಚಿರತೆಗಳನ್ನು ತಮ್ಮವರನ್ನಾಗಿ ಕಾಣುವ ಗ್ರಾಮಸ್ಥರು:

ರಾಜಸ್ಥಾನದಲ್ಲಿರುವ ಅನೇಕ ಗ್ರಾಮಗಳಲ್ಲಿ ಇಂದಿಗೂ ಚಿರತೆಗಳು ಬಹಳ ಆಪ್ತ ಪ್ರಾಣಿ. ಜಿಲ್ಲೆಯಲ್ಲಿರುವ ಬೇರಾ, ಫಲ್ನಾ, ದಂತಿವಾಡಾ ಮತ್ತು ಜವಾಯಿಯಂತಹ ಕೆಲವು ಹಳ್ಳಿಗಳ ಬಯಲಿನಲ್ಲಿ ನಿತ್ಯವೂ ಚಿರತೆಗಳು ಕಾಣಸಿಗುತ್ತವೆ. ಮನೆಗಳ ಛಾವಣಿಗಳ ಮೇಲೆ ಸುತ್ತಾಡುತ್ತಿರುತ್ತವೆ. ಆದರೆ ಅವು ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ, ಈ ಹಳ್ಳಿಗಳಲ್ಲಿ ವಾಸಿಸುವ ರಬಾರಿ ಸಮುದಾಯದ ಜನರು ಚಿರತೆ ಕಂಡರೆ ಜೀವಭಯದಿಂದ ಓಡಿಹೋಗುವವರೂ ಅಲ್ಲ.

images (1)

ಅವರ ದೃಷ್ಟಿಯಲ್ಲಿ, ಈ ಚಿರತೆಗಳು ಗ್ರಾಮವನ್ನು ರಕ್ಷಿಸುವ ಜೀವಿಗಳು. ಇಷ್ಟೇ ಅಲ್ಲ, ಚಿರತೆಗಳು ಗ್ರಾಮವನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತವೆ ಎಂದು ಅವರು ನಂಬುತ್ತಾರೆ. ಈ ನಂಬಿಕೆಯ ಪ್ರಭಾವ ಎಷ್ಟು ಆಳವಾಗಿದೆಯೆಂದರೆ, ಚಿರತೆ ಯಾರೊಬ್ಬರ ಮೇಕೆಯನ್ನು ತೆಗೆದುಕೊಂಡು ಹೋದರೂ, ಜನರು ಅದನ್ನು 'ನೈಸರ್ಗಿಕ ಪ್ರಕೃಯೆ' ಎಂದು ಪರಿಗಣಿಸುತ್ತಾರೆ.

ಪಾಲಿ ಜಿಲ್ಲೆಯ ಜವಾಯಿ ಪ್ರದೇಶವನ್ನು ಚಿರತೆಗಳ ಆವಾಸಸ್ಥಾನವೆಂದು ಪರಿಗಣಿಸಲಾಗಿದೆ. ಜವಾಯಿ ಪ್ರದೇಶವೊಂದರಲ್ಲೇ 60ಕ್ಕೂ ಹೆಚ್ಚು ಚಿರತೆಗಳು ವಾಸಿಸುತ್ತಿವೆಯಂತೆ. ಅವುಗಳ ಉಪಸ್ಥಿತಿಯು ಹಳ್ಳಿಯ ಜಾನುವಾರುಗಳಿಗೆ ತೋಳಗಳು (woolf) ಮತ್ತು ಕತ್ತೆಕಿರುಬಗಳಂತಹ ನರಭಕ್ಷಕಗಳಿಂದ ಅಪಾಯವಾಗದಂತೆಯೂ ಕಾಪಾಡುತ್ತದೆ.

56-Ottaram-from-Bera-bows.jpg.image.490.259

ವನ್ಯಜೀವಿ ಪ್ರವಾಸೋದ್ಯಮಕ್ಕೆ ಸೂಕ್ತ ತಾಣ:

ಜವಾಯಿ ಮತ್ತು ಬೇರಾದಂತಹ ಹಳ್ಳಿಗಳು ಈಗ ಜಂಗಲ್ ಸಫಾರಿ ಉತ್ಸಾಹಿಗಳಿಗೆ ಉತ್ತಮ ಸ್ಥಳಗಳಾಗಿವೆ. ಅರಾವಳಿ ಬೆಟ್ಟಗಳ (Aravali Mountains) ನಡುವೆ ಇರುವ ಈ ಪ್ರದೇಶಗಳಲ್ಲಿ, ಚಿರತೆಗಳು ಮುಕ್ತವಾಗಿ ವಿಹರಿಸುವುದನ್ನು ನೀವು ನೋಡಬಹುದು. ಇಲ್ಲಿನ ಸಫಾರಿ ಕೂಡ ವಿಶೇಷವಾಗಿದೆ. ಏಕೆಂದರೆ ಇಲ್ಲಿ ಪ್ರಾಣಿಗಳನ್ನು ನೋಡುವ ಅನುಭವವು ಕಾಡಿನಲ್ಲಿ ಅಲ್ಲ, ಮನುಷ್ಯರಿಗೆ ಹತ್ತಿರದಲ್ಲೆ ಇರುತ್ತದೆ.

ಇದು ಮಾನವರು ಮತ್ತು ವನ್ಯಜೀವಿಗಳ ನಡುವಿನ ಉತ್ತಮ ಸಂಬಂಧವನ್ನು ಜಗತ್ತಿಗೆ ಸಾರುತ್ತವೆ. ಮನುಷ್ಯರು ಬಯಸಿದರೆ, ಕಾಡು ಪ್ರಾಣಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಮೂಲಕ ಶಾಂತಿಯಿಂದ ಬದುಕಬಹುದು ಎಂದು ಇದು ತೋರಿಸುತ್ತದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..